ಚೆನ್ನೈ: ಇಲ್ಲಿನ ಎಂ.ಎ ಚಿದಂಬರಂ ಕ್ರಿಡಾಂಗಣದಲ್ಲಿ ಇಂದು ನಡೆಯಲಿರುವ 17ನೇ ಐಪಿಎಲ್ ಸೀಸನ್‌ನ ಫೈನಲ್ ಪಂದ್ಯದಲ್ಲಿ ಕೊಲ್ಕತ್ತಾ ನೈಟ್‌ರೈಡರ್ಸ್ ಮತ್ತು ಸನ್‌ರೈಸರ್ಸ್ ಹೈದರಾಬಾದ್ ತಂಡಗಳು ಮುಖಾಮುಖಿಯಾಗಲಿವೆ. ಗೆದ್ದ ತಂಡಗಳು ಮೂರನೇ ಬಾರಿ ಐಪಿಎಲ್ ಪ್ರಶಸ್ತಿಯನ್ನು ಮುಡಿಗೇರಿಸಿಕೊಳ್ಳಲಿದೆ.
ಇನ್ನು ಈ ಫೈನಲ್ ಪಂದ್ಯಕ್ಕೆ ಗೂಗಲ್ ತನ್ನ ಡೂಡಲ್ ಮೂಲಕ ವಿಶೇಷ ಶುಭಾಷಯ ಕೋರಿರುವ ಡೂಡಲ್‌ನನ್ನು ಹಂಚಿಕೊಂಡಿದೆ. ಇದರಲ್ಲಿ ಬ್ಯಾಟ್ ಬಾಲ್ ಮತ್ತು ಸ್ಟಂಪ್ಸ್‌ಗಳನ್ನು ನಾವು ಕಾಣಬಹುದಾಗಿದೆ. ಜತೆಗೆ ಡೂಡಲ್‌ನ ಎರಡು ಬದಿಗಳಲ್ಲಿ ಎಸ್‌ಆರ್‌ಎಚ್ ಮತ್ತು ಕೆಕೆಆರ್ ತಂಡದ ಅಭಿಮಾನಿಗಳು ಹುರಿದುಂಬಿಸುತ್ತಿರುವುದನ್ನು ಕಾರ್ಟೂನ್ ಮೂಲಕ ಗೂಗಲ್ ತನ್ನ ಮುಖಪುಟಲ್ಲಿ ಹಂಚಿಕೊಂಡಿರುವುದನ್ನು ಕಾಣಬಹುದಾಗಿದೆ.
ಇನ್ನು ಇಂದು ನಡೆಯುವ ಫೈನಲ್ ಫೈಟ್‌ಗೆ ಮುನ್ನಾ ಕೆಕೆಆರ್ ನಾಯಕ ಶ್ರೇಯಸ್ ಅಯ್ಯರ್ ಮತ್ತು ಎಸ್‌ಆರ್‌ಎಚ್ ನಾಯಕ ಪ್ಯಾಟ್ ಕಮಿನ್ಸ್ ಅವರು ಭರ್ಜರಿ ಫೋಟೋಶೂಟ್ ನಡೆಸಿದ್ದಾರೆ.
ಈ ಬಗ್ಗೆ iplt20 ಇನ್ಸ್ಟಾಗ್ರಾಂ ಖಾತೆಯಲ್ಲಿ ಹಲವು ಫೋಟೋಗಳನ್ನು ಹಂಚಿಕೊಂಡಿದ್ದು, ಅದಕ್ಕೆ ಟೂ ಕ್ಯಾಪ್ಟನ್ ಒನ್ ಟ್ರೋಫಿ, ಎಲ್ಲರ ದೃಷ್ಠ ಫೈನಲ್ ಪಂದ್ಯದ ಮೇಲೆ ಎಂದು ಬರೆದುಕೊಂಡಿದ್ದಾರೆ.
https://www.instagram.com/p/C7Y824kt_n3/?igsh=Y2tjaXY3d3E2Mnhz&img_index=1