ಪ್ಯಾರಿಸ್: ಪ್ಯಾರಾಲಿಂಪಿಕ್ಸ್ 2024ರಲ್ಲಿ ಭಾರತಕ್ಕೆ ಮತ್ತೊಂದು ಚಿನ್ನದ ಪದಕ ಬಂದಿದೆ. ಪುರುಷರ ಹೈಜಂಪ್ ಟಿ64 ಸ್ಪರ್ಧೆಯಲ್ಲಿ ಪ್ರವೀಣ್ ಕುಮಾರ್ ಚಿನ್ನದ ಪದಕ ಗೆಲ್ಲುವುದರೊಂದಿಗೆ ಐತಿಹಾಸಿಕ ಸಾಧನೆ ಮಾಡಿದ್ದಾರೆ.
ಮೂರು ವರ್ಷಗಳ ಹಿಂದೆ ಟೋಕಿಯೊ ಕೂಟದಲ್ಲಿ ಬೆಳ್ಳಿ ಗೆದ್ದಿದ್ದ ಪ್ರವೀಣ್, ಇದೀಗ ಸುಧಾರಿತ ಪ್ರದರ್ಶನ ನೀಡಿ ಗಮನ ಸೆಳೆದಿದ್ದಾರೆ.
21ವರ್ಷ ವಯಸ್ಸಿನ ಪ್ರವೀಣ್, ಆರು ಮಂದಿ ಇದ್ದ ಫೈನಲ್ ಕಣದಲ್ಲಿ 2.08ಮೀಟರ್ ಜಿಗಿದು ಅಗ್ರಸ್ಥಾನ ಪಡೆದರು. ಅಮೆರಿಕಾದ ಡೆರೆಕ್ ಲೊಸಿಡೆಂಟ್ ಅವರು 2.06ಮೀಟರ್ ಜಿಗಿದು ಬೆಳ್ಳಿ ಪದಕ ಪಡೆದರೆ, ಉಜ್ಬೇಜಿಸ್ತಾನದ ಟೆಮುರ್ಬೆಕ್ ಗಿಯಾಝೋವ್ ಅವರು 2.03ಮೀ.ನೊಡನೆ ಕಂಚಿನ ಪದಕವನ್ನು ತಮ್ಮ ಕೊರಳಿಗೆ ಹಾಕಿಕೊಂಡರು.