Mysore
23
haze

Social Media

ಗುರುವಾರ, 11 ಡಿಸೆಂಬರ್ 2025
Light
Dark

ಜರ್ಮನಿಯ ಫುಟ್‌ಬಾಲ್ ಆಟಗಾರ ಫ್ರಾಂಜ್ ಬೆಕೆನ್‌ಬೌರ್ ನಿಧನ

ನವದೆಹಲಿ: ವಿಶ್ವಶ್ರೇಷ್ಠ ಫುಟ್‌ಬಾಲ್‌ ಆಟಗಾರ, ಜರ್ಮನಿ ತಂಡದ ವಿಶ್ವಕಪ್ ವಿಜೇತ ನಾಯಕ ಮತ್ತು ಕೋಚ್ ಫ್ರಾಂಜ್ ಬೆಕೆನ್‌ಬಾಯರ್ (78) ಸೋಮವಾರ ನಿಧನರಾಗಿದ್ದಾರೆ.

ಈ ಕುರಿತು ಜರ್ಮನಿಯ ಸುದ್ದಿ ಸಂಸ್ಥೆ ಡಿಪಿಎ ಈ ಮಾಹಿತಿಯನ್ನು ಹಂಚಿಕೊಂಡಿದೆ.

ಬೆಕನ್‌ಬೌರ್ 1974ರಲ್ಲಿ ನಡೆದ ವಿಶ್ವಕಪ್‌ ಪಂದ್ಯಾವಳಿಯಲ್ಲಿ ಟ್ರೋಫಿ ಗೆದ್ದ ಜರ್ಮನಿ ತಂಡದ ನಾಯಕರಾಗಿದ್ದರು. ಮತ್ತು ಅವರು 1990ರಲ್ಲಿ ಜರ್ಮನ್‌ ತಂಡ ಮ್ಯಾನೇಜರ್ ಆಗಿದ್ದಾಗ ತಂಡ ಮತ್ತೊಮ್ಮೆ ವಿಶ್ವಕಪ್‌ ಟ್ರೋಫಿ ಗೆಲ್ಲುವಲ್ಲಿ ಯಶಸ್ವಿಯಾಗಿತ್ತು.

ಬೇಯರ್ನ್ ಮ್ಯೂನಿಚ್‌ನೊಂದಿಗೆ ಬೆಕೆನ್‌ಬೌರ್ ನಾಲ್ಕು ಬಾರಿ ಬುಂಡೆಸ್ಲಿಗಾ ಮತ್ತು ನಾಲ್ಕು ಬಾರಿ ಜರ್ಮನ್ ಕಪ್ ಗೆದ್ದಿದ್ದಾರೆ. ಅವರು 1974 ರಿಂದ 1976 ರವರೆಗೆ ಸತತ ಮೂರು ಯುರೋಪಿಯನ್ ಕಪ್ ವಿಜೇಯತ ತಂಡವನ್ನು ಮುನ್ನಡೆಸಿದ್ದರು.

ಫ್ರಾಂಜ್ ಬೆಕೆನ್‌ಬೌರ್ ಜರ್ಮನಿ ತಂಡದ ತರಬೇತುದಾರರಾಗಿದ್ದಾಗ, ಅವರ ತರಬೇತಿಯಲ್ಲಿ ಜರ್ಮನ್ ತಂಡವು 1986 ರ ವಿಶ್ವಕಪ್‌ನಲ್ಲಿ ಫೈನಲ್ ತಲುಪಿತು. ಆದರೆ, ಜರ್ಮನಿ ತಂಡ ಫೈನಲ್‌ನಲ್ಲಿ ಅರ್ಜೆಂಟೀನಾ ಎದುರು ಸೋತಿತ್ತು.

https://x.com/premierleague/status/1744402203043942438?s=20

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!