Mysore
27
overcast clouds

Social Media

ಗುರುವಾರ, 25 ಡಿಸೆಂಬರ್ 2025
Light
Dark

ಫ್ರಾನ್ಸ್‌ ತಂಡದ ಸ್ಟ್ರೈಕರ್‌ ಕರೀಂ ಬೆಂಜೆಮಾ ವಿದಾಯ

ಪ್ಯಾರಿಸ್‌ : ಫ್ರಾನ್ಸ್‌ ತಂಡದ ಸ್ಟ್ರೈಕರ್‌ ಕರೀಂ ಬೆಂಜೆಮಾ ಅವರು ಅಂತರರಾಷ್ಟ್ರೀಯ ಫುಟ್‌ಬಾಲ್‌ಗೆ ನಿವೃತ್ತಿ ಪ್ರಕಟಿಸಿದ್ದಾರೆ.

ಫ್ರಾನ್ಸ್‌ ಪರ 97 ಪಂದ್ಯಗಳಿಂದ 37 ಗೋಲುಗಳನ್ನು ಗಳಿಸಿರುವ ಅವರು ಸೋಮವಾರ ಟ್ವಿಟರ್‌ ಮೂಲಕ ತಮ್ಮ ನಿರ್ಧಾರ ತಿಳಿಸಿದ್ದಾರೆ.

ಫಿಫಾ ವಿಶ್ವಕಪ್‌ ಟೂರ್ನಿಯಲ್ಲಿ ಬೆಂಜೆಮಾ ಅವರು ಫ್ರಾನ್ಸ್‌ ತಂಡದ ಪ್ರಧಾನ ಶಕ್ತಿಯಾಗಲಿದ್ದಾರೆ ಎಂದು ಭಾವಿಸಲಾಗಿತ್ತು. ಆದರೆ ಟೂರ್ನಿಯ ಆರಂಭಕ್ಕೆ ಕೆಲವೇ ದಿನಗಳಿರುವಾಗ ಅಭ್ಯಾಸದ ವೇಳೆ ಗಾಯಗೊಂಡಿದ್ದರು. ಇದರಿಂದ ವಿಶ್ವಕಪ್‌ನಿಂದ ಹೊರಬಿದ್ದಿದ್ದರು.

ಬೆಂಜೆಮಾ ಅವರು 2007 ರಲ್ಲಿ ಅಂತರರಾಷ್ಟ್ರೀಯ ಫುಟ್‌ಬಾಲ್‌ಗೆ ಪದಾರ್ಪಣೆ ಮಾಡಿದ್ದರು. 2008 ಮತ್ತು 2012ರ ಯೂರೋ ಕಪ್‌ ಹಾಗೂ 2014ರ ವಿಶ್ವಕಪ್‌ ಟೂರ್ನಿಯಲ್ಲಿ ಅವರು ಆಡಿದ್ದರು.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!