ಮುಂಬೈ: ಆಸೀಸ್ ವಿರುದ್ಧ ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದ ಏಕೈಕ ಟೆಸ್ಟ್ ಪಂದ್ಯದಲ್ಲಿ ಭಾರತ ವನಿತೆಯರ ತಂಡ ೮ ವಿಕೆಟ್‌ಗಳ ಅಂತರದ ಭರ್ಜರಿ ಗೆಲುವು ದಾಖಲಿಸಿದೆ.
ಬ್ಯಾಟಿಂಗ್ ಮತು ಬೌಲಿಂಗ್ ಎರಡರಲ್ಲೂ ಪ್ರಾಬಲ್ಯ ಸಾಧಿಸಿದ ಟೀಂ ಇಂಡಿಯಾ ತಂಡ ತನ್ನ ತವರು ನೆಲದಲ್ಲಿ ಐತಿಹಾಸಿಕ ಗೆಲುವಿಗೆ ಸಾಕ್ಷಿಯಾಗಿದ್ದಾರೆ.
ಶನಿವಾರದ ಅಂತಿಮ ದಿನದಾಟಕ್ಕೆ ಆಸೀಸ್ ೫ ವಿಕೆಟ್ ಕಳೆದುಕೊಂಡು ೨೩೩ ರನ್ ಕಲೆಹಾಕಿ ೪೭ರನ್ ಮುನ್ನಡೆಯೊಂದಿಗೆ ಇಂದು (ಭಾನುವಾರ) ಇನ್ನಿಂಗ್ಸ್ ಆರಂಭಿಸಿದ ಆಸ್ಟ್ರೇಲಿಯಾ ತಂಡ ಕೇವಲ ೨೮ ರನ್ ಗಳಿಸಿ ಉಳಿದ ೫ ವಿಕೆಟ್‌ಗಳನ್ನು ಕಳೆದುಕೊಂಡು ಭಾರತಕ್ಕೆ ೭೫ ರನ್‌ಗಳ ಗುರಿ ನೀಡಿತು.
ಅಂತಿಮ ದಿನದಾಟದಲ್ಲಿ ಆಕ್ರಮಣಕಾರಿ ದಾಳಿ ಮಾಡಿದ ಭಾರತ ತಂಡದ ಸ್ಪನ್ನರ್ಸ್‌ಗಳಾದ ಸ್ನೇಹಾ ರಾಣಾ, ರಾಜೇಶ್ವರಿ ಗಾಯಕ್ವಾಡ್, ದೀಪ್ತಿ ಶರ್ಮಾ ಆಸೀಸ್ ಪಡೆಯನ್ನು ಧೂಳಿಪಟ ಮಾಡಿದರು.
ಸಾಧಾರಣ ಮೊತ್ತ ಬೆನ್ನತ್ತಿದ ಭಾರತ ತಂಡ ಕೇವಲ ೨ ವಿಕೆಟ್ ಕಳೆದುಕೊಂಡು ಐತಿಹಾಸಿಕ ಗೆಲುವು ದಾಖಲಿಸಿತು. ಸ್ಮೃತಿ ಮಂದಾನ ೩೮*, ಜೆಮಿಯಾ ರಾಡ್ರಿಗಸ್ ೧೨ ರನ್ ಗಳಿಸಿ ತಂಡವನ್ನು ಗೆಲುವಿನ ದಡ ಸೇರಿಸಿದರು.
ಈ ವರೆಗೆ ೪೦ ಟೆಸ್ಟ್ ಪಂದ್ಯಗಳನ್ನಾಡಿರುವ ಭಾರತ ತಂಡ ೭ ರಲ್ಲಿ ಗೆಲುವು ಕಂಡರೆ ೬ ಪಂದ್ಯಗಳನ್ನು ಸೋತಿದೆ. ಇನ್ನುಳಿದ ೨೭ ಪಂದ್ಯಗಳು ಡ್ರಾ ಆಗಿದೆ.
ಭಾರತ ತಂಡದ ವಿರುದ್ಧ ಮೊದಲ ಟೆಸ್ಟ್ ಸೋತ ಆಸೀಸ್ ತಂಡ ತನ್ನ ಕಳೆದ 10 ವರ್ಷಗಳಲ್ಲಿ ಮೊದಲ ಸೋಲು ಕಂಡಿದೆ. ಭಾರತ ತಂಡ ಆಸೀಸ್ ವಿರುದ್ಧ ಮೊದಲ ಗೆಲುವು ದಾಖಲಿಸಿದೆ.
ಪಂದ್ಯ ಶ್ರೇಷ್ಠ: ಸ್ನೇಹ್ ರಾಣಾ
ಸಂಕ್ಷಿಪ್ತ ಸ್ಕೋರ್:
ಮೊದಲ ಇನಿಂಗ್ಸ್: ಆಸ್ಟ್ರೇಲಿಯಾ: 77.4 ಓವರ್‌ಗಳಲ್ಲಿ 219, ಭಾರತ: 126.3 ಓವರ್‌ಗಳಲ್ಲಿ 406.
ಎರಡನೇ ಇನಿಂಗ್ಸ್: ಆಸ್ಟ್ರೇಲಿಯಾ: 105.4 ಓವರ್‌ಗಳಲ್ಲಿ 261, ಭಾರತ 18.4 ಓವರ್‌ಗಳಲ್ಲಿ 75/3(ಸ್ಮೃತಿ ಮಂದಾನ 38*, ರಿಚಾ ಘೋಷ್ ಘೋಷ್ 13, ಜೆಮಿಮಾ ರಾಡ್ರಿಗಸ್ 12*)