ಬಾಂಗ್ಲಾದೇಶ: ಬಾಂಗ್ಲಾ ಪ್ರಧಾನಿ ಶೇಖ್ ಹಸೀನಾ ರಾಜೀನಾಮೆ ಬೆನ್ನಲ್ಲೇ ಬಾಂಗ್ಲಾದೇಶದಾದ್ಯಂತ ಅಹಿಂಸೆ ಹೆಚ್ಚಾಗಿದ್ದು, ಪುಂಡರು, ಪ್ರತಿಭಟನಕಾರರ ಅಟ್ಟಹಾಸಕ್ಕೆ ಬಾಂಗ್ಲಾ ಮಾಜಿ ಕ್ರಿಕೇಟಿಗ ಹಾಗೂ ಅವಾಮಿ ಲೀಗ್ ಪಕ್ಷದ ಸಂಸದ ಮಶ್ರಫೆ ಮೊರ್ತಜಾ ಅವರ ಮನೆಗೆ ದಾಳಿ ಮಾಡಿದ್ದಾರೆ.
ಮುಶ್ರಫೆ ಮನೆ ಮೇಲೆ ದಾಳಿ ಮಾಡಿರುವ ಅವರು ಬೆಂಕಿ ಹಚ್ಚಿ ಪರಾರಿಯಾಗಿದ್ದಾರೆ. ಈ ಬಗ್ಗೆ ಎನ್‌ಡಿಟಿವಿ ವರದಿ ಮಾಡಿದೆ.
ನರಾಲಿ-೨ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿದ್ದ ಮೊರ್ತಜಾ, ಹಸೀನಾ ಅವರ ಕ್ಯಾಬಿನೇಟ್ ಸೇರಿದ್ದರು. ಕ್ರಿಕೆಟ್‌ನಿಂದ ನಿವೃತ್ತಿಯಾದ ಬಳಿಕ ರಾಜಕೀಯಕ್ಕೆ ಎಂಟ್ರಿಕೊಟ್ಟಿದ್ದರು.
ಪ್ರತಿಭಟನೆಯಿಂದ ಮಣಿದ ಬಾಂಗ್ಲಾ ಪ್ರಧಾನಿ ಶೇಖ್ ಅವರು ರಾಜೀನಾಮೆ ನೀಡಿದ ಬಳಿಕವೂ ದೇಶಾದ್ಯಂತ ಹಿಂಸಾಚಾರ ಮುಂದುವರೆದಿದ್ದು, ಅವಾಮಿ ಲೀಗ್‌ನ ಮುಖಂಡರು, ಕಾರ್ಯಕರ್ತರ ಮೇಲೆ ನಿರಂತರ ದಾಳಿ ಮಾಡುತ್ತಿದ್ದಾರೆ. ಹಿಂಸಾಚಾರ ತೀವ್ರ ಸ್ವರೂಪ ಪಡೆದುಕೊಂಡಿದ್ದು, ಹಲವಾರು ಸಾವು ನೋವುಗಳು ಸಂಭವಿಸಿದೆ.