Mysore
22
drizzle

Social Media

ಶನಿವಾರ, 10 ಜನವರಿ 2026
Light
Dark

ಫೈನಲ್ ಟಿ20 ಯಲ್ಲಿ ಆಸ್ಟ್ರೇಲಿಯಾಗೆ ಸೋಲುಣಿಸಿದ ಭಾರತ

ಹೈದರಾಬಾದ್ :  ಟಿ ಟ್ವೆಂಟಿ ಫೈನಲ್ ಪಂದ್ಯದಲ್ಲಿ ಇಂದು ಭಾರತ ಹಾಗೂ ಆಸ್ಟ್ರೇಲಿಯಾ ನಡುವೆ ರೋಚಕ ಪಂದ್ಯ ನಡೆದಿದ್ದು ಕೊಹ್ಲಿ ಹಾಗೂ ಸೂರ್ಯಕುಮಾರ್ ಯಾದವ್ ರವರ ಭರ್ಜರಿ ಬ್ಯಾಟಿಂಗ್ ನಿಂದಾಗಿ ಆರು ವಿಕೆಟ್ಗಳ ಭರ್ಜರಿ ಜಯವನ್ನು ಭಾರತ ಸಾಧಿಸಿದೆ. ಈ ಮೂಲಕ ಆಸ್ಟ್ರೇಲಿಯಗೆ 2-1 ಅಂತರದಲ್ಲಿ ಗೆಲ್ಲುವ ಮೂಲಕ ಆಸ್ಟ್ರೇಲಿಯಾ ತಂಡಕ್ಕೆ ಸೋಲುಣಿಸಿದೆ.

ಆಸ್ಟ್ರೇಲಿಯ ನೀಡಿದ 187 ರನ್ಗಳ ಟಾರ್ಗೆಟ್ ಬೆನ್ನಟ್ಟಿದ ಭಾರತ ಕೊಹ್ಲಿ ಮತ್ತು ಸೂರ್ಯಕುಮಾರ್ ರವರ ಸ್ಫೋಟಕ ಆಟ ದಿಂದಾಗಿ ಅಂತಿಮ ಓವರ್ ರೋಚಕ ಕ್ಷಣವೇ ಆಗಿತ್ತು ಎನ್ನಬಹುದು. ಅಂತಿಮವಾಗಿ 19.5 ಓವರ್ ಗಳ ಅಂತ್ಯಕ್ಕೆ ಭಾರತ ನಾಕು ವಿಕೆಟ್ ಕಳೆದುಕೊಂಡು 187 ರನ್ಗಳನ್ನು ಬೆನ್ನಟ್ಟುವ ಮೂಲಕ ಗೆಲುವನ್ನು ತಮ್ಮದಾಗಿಸಿಕೊಂಡು ದಾಖಲೆ ಬರೆದಿದೆ.

ದೊಡ್ಡ ಮೊತ್ತದ ಟಾರ್ಗೆಟ್ ಬೆನ್ನಟ್ಟಿದ ಭಾರತ ಕೂಡ ಆರಂಭಿಕ ಆಘಾತ ಅನುಭವಿಸಿತು. ರಾಹುಲ್ 1 ರನ್‍ಗೆ ವಿಕೆಟ್ ಕೈಚೆಲ್ಲಿಕೊಂಡರೆ, ರೋಹಿತ್ ಶರ್ಮಾ ಆಟ 17 ರನ್ (14 ಎಸೆತ, 2 ಬೌಂಡರಿ, 1 ಸಿಕ್ಸ್) ಅಂತ್ಯಕಂಡಿತು. 30 ರನ್‍ಗಳಿಗೆ 2ವಿಕೆಟ್ ಕಳೆದುಕೊಂಡಿದ್ದ ಭಾರತಕ್ಕೆ ಆ ಬಳಿಕ ಕೊಹ್ಲಿ ಮತ್ತು ಸೂರ್ಯಕುಮಾರ್ ಯಾದವ್ ನೆರವಾದರು. ಈ ಜೋಡಿ ಆಸ್ಟ್ರೇಲಿಯಾ ಬೌಲರ್‌ಗಳ ಬೆವರಿಳಿಸಿದರು. ಭರ್ಜರಿ ಹೊಡೆತಗಳ ಮೂಲಕ ಅರ್ಧಶತಕ ಸಿಡಿಸಿ ಮಿಂಚಿದ ಸೂರ್ಯಕುಮಾರ್ ಯಾದವ್ ಸ್ಫೋಟಕ ಇನ್ನಿಂಗ್ಸ್ 69 ರನ್ (36 ಎಸೆತ, 5 ಬೌಂಡರಿ, 5 ಸಿಕ್ಸ್)ಗೆ ಅಂತ್ಯಕಂಡಿತು. ಈ ಮೊದಲು 3ನೇ ವಿಕೆಟ್‍ಗೆ ಕೊಹ್ಲಿ ಜೊತೆ 104 ರನ್ (62 ಎಸೆತ) ಜೊತೆಯಾಟವಾಡಿದರು.

ಆ ಬಳಿಕ ಬಂದ ಹಾರ್ದಿಕ್ ಪಾಂಡ್ಯ ಕೊಹ್ಲಿ ಜೊತೆ ಗೆಲುವಿಗಾಗಿ ಹೋರಾಡಿದರು. ಅಂತಿಮವಾಗಿ ಕೊಹ್ಲಿ 63 ರನ್ (48 ಎಸೆತ, 3 ಬೌಂಡರಿ, 4 ಸಿಕ್ಸ್) ಚಚ್ಚಿ ಗೆಲುವಿನ ಅಂಚಿನಲ್ಲಿ ವಿಕೆಟ್ ಕಳೆದುಕೊಂಡರು. ಅಂತಿಮವಾಗಿ ಪಾಂಡ್ಯ ಅಜೇಯ 25 ರನ್ (16 ಎಸೆತ, 2 ಬೌಂಡರಿ, 1 ಸಿಕ್ಸ್) ಮತ್ತು ದಿನೇಶ್ ಕಾರ್ತಿಕ್ 1 ರನ್ ಬಾರಿಸಿ ಗೆಲುವನ್ನು ಸಂಭ್ರಮಿಸಿದರು.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!