Mysore
29
scattered clouds

Social Media

ಶನಿವಾರ, 21 ಡಿಸೆಂಬರ್ 2024
Light
Dark

ಟಿ20 ವಿಶ್ವಕಪ್ ಟ್ರೋಫಿ ಗೆದ್ದ ಇಂಗ್ಲೆಂಡ್‌ ತಂಡ

ಟಿ20 ವಿಶ್ವಕಪ್:  ಮೆಲ್ಬೋರ್ನ್‌ನಲ್ಲಿ ನಡೆದ ಟಿ20 ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಪಾಕಿಸ್ತಾನವನ್ನು ಮಣಿಸಿದ ಇಂಗ್ಲೆಂಡ್ ಎರಡನೇ ಬಾರಿಗೆ ಟಿ20 ಚಾಂಪಿಯನ್ ಪಟ್ಟಕ್ಕೇರುವಲ್ಲಿ ಯಶಸ್ವಿಯಾಗಿದೆ. ಆಸ್ಟ್ರೇಲಿಯಾದಲ್ಲಿ 30 ವರ್ಷಗಳ ಹಿಂದಿನ ಕಾಕತಾಳೀಯವನ್ನು ಪುನರಾವರ್ತಿಸಿ ಫೈನಲ್ ತಲುಪಿದ ಪಾಕಿಸ್ತಾನ ಕ್ರಿಕೆಟ್ ತಂಡಕ್ಕೆ ಕೊನೆಯ ಹಂತದಲ್ಲಿ ಎಲ್ಲವೂ ಬದಲಾಯಿತು. 30 ವರ್ಷಗಳ ಹಿಂದೆ ಅಂದರೆ 1992ರ ಏಕದಿನ ವಿಶ್ವಕಪ್​ನಲ್ಲಿ ಇದೇ ಮೆಲ್ಬೋರ್ನ್ ಕ್ರಿಕೆಟ್ ಮೈದಾನದಲ್ಲಿ ಇಂಗ್ಲೆಂಡ್ ತಂಡವನ್ನು ಮಣಿಸಿ ವಿಶ್ವ ಚಾಂಪಿಯನ್ ಆಗಿದ್ದ ಪಾಕಿಸ್ತಾನ ಮತ್ತೊಮ್ಮೆ ಅದೇ ಸಾಧನೆಯನ್ನು ಪುನರಾವರ್ತಿಸುವ ತವಕದಲ್ಲಿದ್ದರೂ ಇಂಗ್ಲೆಂಡ್ ತಂಡ ಅದಕ್ಕೆ ಅವಕಾಶ ನೀಡಲಿಲ್ಲ. ಮೂರು ವರ್ಷಗಳ ಹಿಂದೆ ಲಾರ್ಡ್ಸ್‌ನಲ್ಲಿ ಇಂಗ್ಲೆಂಡ್‌ ತಂಡವನ್ನು ಏಕದಿನ ಕ್ರಿಕೆಟ್‌ನ ವಿಶ್ವ ಚಾಂಪಿಯನ್ ಮಾಡಿದ್ದ ಬೆನ್ ಸ್ಟೋಕ್ಸ್, ಮತ್ತೊಮ್ಮೆ ಆಂಗ್ಲ ತಂಡವನ್ನು ಚಾಂಪಿಯನ್ ಮಾಡುವಲ್ಲಿ ಪ್ರಮುಖ ಪಾತ್ರವಹಿಸಿದರು. ಈ ಗೆಲುವಿನೊಂದಿಗೆ ಇಂಗ್ಲೆಂಡ್ ತಂಡ ಪಾಕ್ ಜೊತೆಗಿನ 30 ವರ್ಷಗಳ ಹಳೆಯ ಸೋಲಿನ ಖಾತೆಯ ಲೆಕ್ಕವನ್ನು ಚುಕ್ತ ಮಾಡಿದೆ.

ಮೆಲ್ಬೋರ್ನ್‌ನಲ್ಲಿ ನಡೆದ ಟಿ20 ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಪಾಕಿಸ್ತಾನವನ್ನು ಮಣಿಸಿದ ಇಂಗ್ಲೆಂಡ್ ಎರಡನೇ ಬಾರಿಗೆ ಟಿ20 ಚಾಂಪಿಯನ್ ಪಟ್ಟಕ್ಕೇರುವಲ್ಲಿ ಯಶಸ್ವಿಯಾಗಿದೆ. ಆಸ್ಟ್ರೇಲಿಯಾದಲ್ಲಿ 30 ವರ್ಷಗಳ ಹಿಂದಿನ ಕಾಕತಾಳೀಯವನ್ನು ಪುನರಾವರ್ತಿಸಿ ಫೈನಲ್ ತಲುಪಿದ ಪಾಕಿಸ್ತಾನ ಕ್ರಿಕೆಟ್ ತಂಡಕ್ಕೆ ಕೊನೆಯ ಹಂತದಲ್ಲಿ ಎಲ್ಲವೂ ಬದಲಾಯಿತು. 30 ವರ್ಷಗಳ ಹಿಂದೆ ಅಂದರೆ 1992ರ ಏಕದಿನ ವಿಶ್ವಕಪ್​ನಲ್ಲಿ ಇದೇ ಮೆಲ್ಬೋರ್ನ್ ಕ್ರಿಕೆಟ್ ಮೈದಾನದಲ್ಲಿ ಇಂಗ್ಲೆಂಡ್ ತಂಡವನ್ನು ಮಣಿಸಿ ವಿಶ್ವ ಚಾಂಪಿಯನ್ ಆಗಿದ್ದ ಪಾಕಿಸ್ತಾನ ಮತ್ತೊಮ್ಮೆ ಅದೇ ಸಾಧನೆಯನ್ನು ಪುನರಾವರ್ತಿಸುವ ತವಕದಲ್ಲಿದ್ದರೂ ಇಂಗ್ಲೆಂಡ್ ತಂಡ ಅದಕ್ಕೆ ಅವಕಾಶ ನೀಡಲಿಲ್ಲ. ಮೂರು ವರ್ಷಗಳ ಹಿಂದೆ ಲಾರ್ಡ್ಸ್‌ನಲ್ಲಿ ಇಂಗ್ಲೆಂಡ್‌ ತಂಡವನ್ನು ಏಕದಿನ ಕ್ರಿಕೆಟ್‌ನ ವಿಶ್ವ ಚಾಂಪಿಯನ್ ಮಾಡಿದ್ದ ಬೆನ್ ಸ್ಟೋಕ್ಸ್, ಮತ್ತೊಮ್ಮೆ ಆಂಗ್ಲ ತಂಡವನ್ನು ಚಾಂಪಿಯನ್ ಮಾಡುವಲ್ಲಿ ಪ್ರಮುಖ ಪಾತ್ರವಹಿಸಿದರು. ಈ ಗೆಲುವಿನೊಂದಿಗೆ ಇಂಗ್ಲೆಂಡ್ ತಂಡ ಪಾಕ್ ಜೊತೆಗಿನ 30 ವರ್ಷಗಳ ಹಳೆಯ ಸೋಲಿನ ಖಾತೆಯ ಲೆಕ್ಕವನ್ನು ಚುಕ್ತ ಮಾಡಿದೆ.

137 ರನ್​ಗಳ ಸಾಧಾರಣ ಗುರಿ ಬೆನ್ನಟ್ಟಿದ ಇಂಗ್ಲೆಂಡ್ ಕೂಡ ಆರಂಭದಲ್ಲೇ ಹೇಲ್ಸ್ ವಿಕೆಟ್ ಕಳೆದುಕೊಂಡು ಆತಂಕಕ್ಕೆ ಒಳಗಾಗಿತ್ತು. ಆದರೆ ನಾಯಕ ಬಟ್ಲರ್ ರನ್​ ರೇಟ್ ಕುಸಿಯಲು ಬಿಡದೆ ತಂಡ ಒತ್ತಡಕ್ಕೆ ಸಿಲುಕದಂತೆ ಮಾಡಿದರು. 28 ರನ್​ಗಳಿಗೆ ಬಟ್ಲರ್ ತಮ್ಮ ಇನ್ನಿಂಗ್ಸ್ ಮುಗಿಸಿದರೆ, ಸಾಲ್ಟ್ ಕೂಡ 10 ರನ್​ಗೆ ಸುಸ್ತಾದರು. ಈ ವಿಕೆಟ್​ಗಳ ಬಳಿಕ ಜೊತೆಯಾದ ಸ್ಟೋಕ್ಸ್ ಹಾಗೂ ಬ್ರೂಕ್ ತಂಡವನ್ನು ಗೆಲುವಿನ ದಡದತ್ತ ಕೊಂಡೊಯ್ದರು. ಬ್ರೂಕ್ 20 ರನ್ ಗಳಿಸಿ ಬ್ಯಾಟ್ ಎತ್ತಿಟ್ಟರೆ ಸ್ಟೋಕ್ಸ್ ಮಾತ್ರ ಅಜೇಯ ಅರ್ಧಶತಕ ಸಿಡಿಸಿ ತಂಡವನ್ನು ಚಾಂಪಿಯನ್ ಮಾಡುವಲ್ಲಿ ಯಶಸ್ವಿಯಾದರು. ಬ್ರೂಕ್ ವಿಕೆಟ್ ಬಳಿಕ ಬಂದ ಅಲಿ ಕೂಡ ಬಿರುಸಿನ ಬ್ಯಾಟಿಂಗ್ ಮಾಡಿ 13 ಎಸೆತಗಳಲ್ಲಿ 19 ರನ್ ಕಲೆಹಾಕಿದರು.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ