ಟೀಮ್ ಇಂಡಿಯಾದ ಸ್ಟಾರ್ ಆಟಗಾರ ವೆಂಕಟೇಶ್ ಅಯ್ಯರ್ ಹೊಸ ಜೀವನದ ಅಧ್ಯಾಯಕ್ಕೆ ಮುನ್ನುಡಿ ಬರೆದಿದ್ದಾರೆ.
ಟೀಮ್ ಇಂಡಿಯಾ ಮತ್ತು ಕೆಕೆಆರ್ ತಂಡದ ಪ್ರಸಿದ್ಧ ಆಟಗಾರ ವೆಂಕಟೇಶ್ ಅಯ್ಯರ್ ಅವರು ಶೃತಿ ರಘುನಾಥನ್ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಇನ್ನೂ ನಿಶ್ಚಿತಾರ್ಥದ ಫೋಟೋಗಳನ್ನು ವೆಂಕಟೇಶ್ ಅವರು ಇನ್ಸ್ಟಾಗ್ರಾಮ್ ನಲ್ಲಿ ಹಂಚಿಕೊಂಡಿದ್ದು, ನನ್ನ ಜೀವನದ ಮುಂದಿನ ಅಧ್ಯಾಯಕ್ಕೆ ಮುಂದಾಗಿದ್ದೇನೆ ಎಂದು ಬರೆದುಕೊಂಡಿದ್ದಾರೆ. ನವ ಜೋಡಿಗೆ ಅಭಿಮಾನಿಗಳು ಶುಭ ಕೋರಿದ್ದಾರೆ
ಇನ್ನು ಎಂಗೇಜ್ಮೆಂಟ್ ನಲ್ಲಿ ವೆಂಕಟೇಶ್ ಅಯ್ಯರ್ ಅವರು ಗೋಲ್ಡನ್ ಕುರ್ತಾದಲ್ಲಿ ಮಿಂಚಿದ್ದಾರೆ. ಅವರ ಸಂಗಾತಿ ವೈಲೆಟ್ ಅಂಡ್ ಬ್ಲೂ ಕಲರ್ ರೇಷ್ಮೆ ಸೀರೆ ಉಟ್ಟು ಕಾಸಿನ ಸರ ತಟ್ಟು ಟ್ರೆಡಿಷನಲ್ ಲುಕ್ ನಲ್ಲಿ ಕಾಣಿಸಿಕೊಂಡಿದ್ದಾರೆ. ಇನ್ನು ಮತ್ತೊಂದು ಫೋಟೋದಲ್ಲಿ ವೆಂಕಟೇಶ್ ಅಯ್ಯರ್ ಅವರು ಬಿಳಿ ಬಣ್ಣದ ಕುರ್ತಾ ತೊಟ್ಟಿದ್ದು, ಶೃತಿ ರಘುನಾಥನ್ ಅವರು ಗುಲಾಬಿ ಬಣ್ಣದ ರೇಷ್ಮೆ ಸೀರೆ ಧರಿಸಿದ್ದಾರೆ.
ವೆಂಕಟೇಶ್ ಅಯ್ಯರ್ ಅವರು 2015ರಲ್ಲಿ ಹೊಲ್ಕರ್ ಸ್ಟೇಡಿಯಂ ನಲ್ಲಿ ರೈಲ್ವೆ ಕ್ರಿಕೆಟ್ ತಂಡದ ವಿರುದ್ಧ ತಮ್ಮ ಚೊಚ್ಚಲ ಟಿ 20 ಪಂದ್ಯವನ್ನು ಆಡಿದ್ದರು. 2018-19 ರಲ್ಲಿ ರಣಜಿ ಟ್ರೋಫಿಯಲ್ಲಿ ಮಧ್ಯ ಪ್ರದೇಶಕ್ಕೆ ಪ್ರಥಮ ದರ್ಜೆಯಲ್ಲಿ ಪಾದರ್ಪಣೆ ಮಾಡಿದ್ದರು. 2021-22 ರಲ್ಲಿ ಸೈಯದ್ ಮುಷ್ತಾಕ್ ಅಲಿ ಟ್ರೋಫಿಯಲ್ಲಿ ಸರಾಸರಿ 155 ರನ್ ಗಳಿಸುವ ಮೂಲಕ ಮಧ್ಯಪ್ರದೇಶದ ಅಗ್ರ ಸ್ಕೋರರ್ ಆಗಿ ಮುಂದುವರೆದಿದ್ದರು. 2021 – 22 ರಲ್ಲಿ ನಡೆದ ಹಜಾರೆ ಟ್ರೋಫಿಯಲ್ಲಿಯೂ ಕೂಡ ಅದೇ ಫಾರ್ಮ್ ಮುಂದುವರಿಸಿದರು. 63.16 ರ ಸರಾಸರಿಯಲ್ಲಿ 379 ರನ್ ಗಳಿಸಿದ್ದರು. 133 ಕ್ಕಿಂತ ಹೆಚ್ಚಿನ ಸ್ಟ್ರೈಕ್ ರೇಟ್ ನೊಂದಿಗೆ ಕೆಳ ಮಧ್ಯಮ ಕ್ರಮಾಂಕದೊಂದಿಗೆ ಬ್ಯಾಟಿಂಗ್ ಮಾಡಿದ್ದರು. ಇದು ಎರಡು ಶತಕಗಳನ್ನು ಒಳಗೊಂಡಿತ್ತು.