ನವದೆಹಲಿ : ಭಾರತದ ಡಿಸ್ಕಸ್ ತ್ರೋ ಆಟಗಾರ್ತಿ ಕಮಲ ಪ್ರೀತ್ ಕೌರ್ ಅವರನ್ನು ಡೋಪಿಂಗ್ ಆರೋಪದಲ್ಲಿ ಮೂರು ವರ್ಷಗಳ ಕಾಲ ನಿಷೇಧಕ್ಕೆ ಒಳಪಡಿಸಲಾಗಿದೆ.
ಕಮಲ್ ಪ್ರೀತ್ ಕೌರ್ ಅವರು ನಿಷೇಧಿತ ವಸ್ತು ಸ್ಟಾನೊಜೋಲೋಲ್ ಬಳಸಿದ ಕಾರಣಕ್ಕಾಗಿ ಮೂರು ವರ್ಷಗಳ ಕಾಲ ನಿಷೇಧಕ್ಕೆ ಒಳಗಾಗಿದ್ದಾರೆ. ಈ ಕುರಿತು ಅಥ್ಲೆಟಿಕ್ ಇಂಟೆಗ್ರೀಟ್ ಯೂನಿಟ್ (AIU) ಮಾಹಿತಿಯನ್ನು ಪ್ರಕಟಿಸಿದೆ.
ಮಾರ್ಚ್ 7 ರಂದು ಪಟಿಯಾಲಾದಲ್ಲಿ ಕಮಲ್ ಪ್ರೀತ್ ಅವರ ಮಾದರಿಯನ್ನು ಪರೀಕ್ಷೆಗೆ ತೆಗೆದುಕೊಂಡಿತ್ತು.
ಎಐಯು(AIU) ಅವರಿಗೆ ಸ್ಟೀರಾಯ್ಡ್ ಬಳಕೆಯ ಪರೀಕ್ಷೆ ಮಾಡಿದ ನಂತರ ಮೇ ತಿಂಗಳಲ್ಲಿ ಅವರನ್ನು ತಾತ್ಕಾಲಿಕವಾಗಿ ಅಮಾನತುಗೊಳಿಸಗಿತ್ತು. ‘ನಿಷೇಧಿತ ವಸ್ತುವಿನ (Stanozolol) ಉಪಸ್ಥಿತಿ/ಬಳಕೆಗಾಗಿ ಮಾಡಿದ ಕಾರಣ 2022 ರ ಮಾರ್ಚ್ 29 ರಿಂದ ಮೂರು ವರ್ಷಗಳ ಕಾಲ ಕಮಲ್ ಪ್ರೀತ್ಕೌರ್ ಅವರನ್ನು ಎಐಯು ನಿಷೇಧಿಸಿದೆ’.