Mysore
19
scattered clouds

Social Media

ಸೋಮವಾರ, 08 ಡಿಸೆಂಬರ್ 2025
Light
Dark

ಟ್ರಂಪ್ ಜೊತೆ ಗಾಲ್ಫ್‌ ಆಡಿದ ಧೋನಿ: ವಿಡಿಯೋ ವೈರಲ್

ನವದೆಹಲಿ : ಭಾರತ ಕ್ರಿಕೆಟ್‌ ತಂಡದ ಮಾಜಿ ನಾಯಕ ಮಹೇಂದ್ರ ಸಿಂಗ್‌ ಧೋನಿ ಮತ್ತು ಅಮೆರಿಕಾದ ಮಾಜಿ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರು ಅಮೆರಿಕಾದಲ್ಲಿ ಒಂದು ಸುತ್ತಿನ ಸೌಹಾರ್ದ ಗಾಲ್ಫ್‌ ಆಟ ಆಡಿರುವುದು ಧೋನಿ ಅಭಿಮಾನಿಗಳಲ್ಲಿ ಸಂಚಲನ ಸೃಷ್ಟಿಸಿದೆ. ಡೊನಾಲ್ಡ್‌ ಟ್ರಂಪ್‌ ಅವರ ಆಹ್ವಾನದ ಮೇರೆಗೆ ಧೋನಿ ಗಾಲ್ಫ್‌ ಆಡಿದ್ದಾರೆಂದು ತಿಳಿದು ಬಂದಿದೆ.

ಗಾಲ್ಫಿಂಗ್‌ ಉಡುಗೆ ಧರಿಸಿರುವ ಧೋನಿ ಮತ್ತು ಟ್ರಂಪ್‌ ಕೆಲ ಸ್ನೇಹಿತರೊಂದಿಗೆ ಇರುವ ಫೋಟೋಗಳೂ ಕೂಡ ಸಾಕಷ್ಟು ಕುತೂಹಲ ಕೆರಳಿಸಿವೆ ಹಾಗೂ ಸಾಮಾಜಿಕ ಜಾಲತಾಣದಲ್ಲಿ ಸುದ್ದಿ ಮಾಡುತ್ತಿವೆ. ಧೋನಿ ಮತ್ತು ಟ್ರಂಪ್‌ ಗೋಲ್ಫ್‌ ಆಡುತ್ತಿರುವ ವೀಡಿಯೋ ಕೂಡ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

ಧೋನಿ ಅವರು ಕಾರ್ಲೊಸ್‌ ಅಲ್ಕರಾಝ್‌ ಮತ್ತು ಅಲೆಕ್ಸಾಂಡರ್‌ ಝ್ವೆರೆವ್‌ ಅವರ ನಡುವೆ ನಡೆದ ಯುಎಸ್‌ ಓಪನ್‌ 2023 ಕ್ವಾರ್ಟರ್‌ ಫೈನಲ್‌ ಪಂದ್ಯವನ್ನು ವೀಕ್ಷಿಸುತ್ತಿರುವ ಫೋಟೋಗಳು ಹೊರಬಿದ್ದ ಬೆನ್ನಲ್ಲೇ ಧೋನಿ ಮತ್ತು ಟ್ರಂಪ್‌ ಅವರ ಗಾಲ್ಫ್‌ ಆಟದ ವೀಡಿಯೋ ಸಂಚಲನ ಸೃಷ್ಟಿಸಿದೆ. ಟೆನಿಸ್‌ ಪಂದ್ಯದ ವೇಳೆ ಧೋನಿ ತಮ್ಮ ಇಬ್ಬರು ಸ್ನೇಹಿತರೊಂದಿಗೆ ಖುಷಿಯಾಗಿ ಮಾತನಾಡುತ್ತಿರುವುದನ್ನೂ ಕ್ಯಾಮೆರಾ ಫೋಕಸ್‌ ಮಾಡಿದೆ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!