Mysore
30
broken clouds

Social Media

ಬುಧವಾರ, 28 ಜನವರಿ 2026
Light
Dark

IPL 2024: ಲಕ್ನೋ ವಿರುದ್ಧ ಗೆಲವು ಸಾಧಿಸಿದ ಡೆಲ್ಲಿ ಕ್ಯಾಪಿಟಲ್ಸ್‌

ಲಕ್ನೋ: ಇಲ್ಲಿನ ಏಕನ ಕ್ರಿಕೆಟ್‌ ಕ್ರೀಡಾಂಗಣದಲ್ಲಿ ನಡೆದ 17ನೇ ಐಪಿಎಲ್ ಆವೃತ್ತಿಯ 26ನೇ ಪಂದ್ಯದಲ್ಲಿ ಲಕ್ನೋ ಸೂಪರ್‌ ಜೈಂಟ್ಸ್‌ ವಿರುದ್ಧ ಡೆಲ್ಲಿ ಕ್ಯಾಪಿಟಲ್ಸ್‌ 6 ವಿಕೆಟ್‌ಗಳ ಗೆಲುವನ್ನು ಕಂಡಿದೆ.

ಪಂದ್ಯದಲ್ಲಿ ಟಾಸ್‌ ಗೆದ್ದು ಮೊದಲು ಬ್ಯಾಟಿಂಗ್‌ ಮಾಡಿದ ಲಕ್ನೋ ಸೂಪರ್‌ ಜೈಂಟ್ಸ್‌ ಆಯುಷ್‌ ಬದೋನಿ ಅರ್ಧಶತಕದ ನೆರವಿನಿಂದ 20 ಓವರ್‌ಗಳಲ್ಲಿ 7 ವಿಕೆಟ್‌ ನಷ್ಟಕ್ಕೆ 167 ರನ್‌ ಕಲೆಹಾಕಿ ಎದುರಾಳಿ ಡೆಲ್ಲಿ ಕ್ಯಾಪಿಟಲ್ಸ್‌ ತಂಡಕ್ಕೆ 168 ರನ್‌ಗಳ ಗುರಿ ನೀಡಿತು. ಈ ಗುರಿಯನ್ನು ಬೆನ್ನಟ್ಟುವಲ್ಲಿ ಯಶಸ್ವಿಯಾದ ಡೆಲ್ಲಿ ಕ್ಯಾಪಿಟಲ್ಸ್‌ ಜೇಕ್‌ ಫ್ರೇಸರ್‌ ಮೆಕ್‌ಗುರ್ಕ್‌ ಹಾಗೂ ನಾಯಕ ರಿಷಭ್‌ ಪಂತ್‌ ಉತ್ತಮ ಆಟದ ನೆರವಿನಿಂದ 18.1 ಓವರ್‌ಗಳಲ್ಲಿ 4 ವಿಕೆಟ್‌ ನಷ್ಟಕ್ಕೆ 170 ರನ್‌ ಕಲೆಹಾಕಿತು.

ಲಕ್ನೋ ಸೂಪರ್‌ಜೈಂಟ್ಸ್‌ ಇನ್ನಿಂಗ್ಸ್:‌ ತಂಡದ ಪರ ಕ್ವಿಂಟನ್‌ ಡಿ ಕಾಕ್‌ ಹಾಗೂ ಕೆಎಲ್‌ ರಾಹುಲ್‌ ಆರಂಭಿಕರಾಗಿ ಕಣಕ್ಕಿಳಿದರು. ಡಿಕಾಕ್‌ 19 (13) ರನ್‌ ಗಳಿಸಿದರೆ, ರಾಹುಲ್‌ 39 (22) ರನ್‌ ಗಳಿಸಿದರು. ಇನ್ನುಳಿದಂತೆ ದೇವದತ್‌ ಪಡಿಕ್ಕಲ್‌ 3(6) ರನ್, ಮಾರ್ಕಸ್‌ ಸ್ಟಾಯ್ನಿಸ್‌ 8 (10) ರನ್‌, ನಿಕೋಲಸ್‌ ಪೂರನ್‌ ಗೋಲ್ಡನ್‌ ಡಕ್‌, ದೀಪಕ್‌ ಹೂಡಾ 10 (13) ರನ್‌, ಕೃನಾಲ್‌ ಪಾಂಡ್ಯ 3 (4) ರನ್‌, ಅರ್ಷದ್‌ ಖಾನ್‌ ಅಜೇಯ 20 (16) ರನ್‌ ಹಾಗೂ ಅಂತಿಮ ಹಂತದಲ್ಲಿ ಆಸರೆಯಾದ ಆಯುಷ್‌ ಬದೋನಿ ಅಜೇಯ 55 (35) ರನ್‌ ಗಳಿಸಿದರು.

ಡೆಲ್ಲಿ ಕ್ಯಾಪಿಟಲ್ಸ್‌ ಪರ ಕುಲ್‌ದೀಪ್‌ ಯಾದವ್‌ 3 ವಿಕೆಟ್‌, ಖಲೀಲ್‌ ಅಹ್ಮದ್‌ 2 ವಿಕೆಟ್‌, ಇಶಾಂತ್‌ ಶರ್ಮಾ ಹಾಗೂ ಮುಕೇಶ್‌ ಕುಮಾರ್‌ ತಲಾ ಒಂದೊಂದು ವಿಕೆಟ್‌ ಪಡೆದರು.

ಡೆಲ್ಲಿ ಕ್ಯಾಪಿಟಲ್ಸ್‌ ಇನ್ನಿಂಗ್ಸ್:‌ ತಂಡದ ಪರ ಆರಂಭಿಕರಾಗಿ ಕಣಕ್ಕಿಳಿದ ಪೃಥ್ವಿ ಶಾ 32 (22) ರನ್ ಹಾಗೂ ಡೇವಿಡ್‌ ವಾರ್ನರ್‌‌ 8 (9) ರನ್‌ ಕಲೆಹಾಕಿದರು. ಮೂರನೇ ವಿಕೆಟ್‌ಗೆ ಜತೆಯಾದ ಜೇಕ್‌ ಫ್ರೇಸರ್‌ ಮೆಕ್‌ಗುರ್ಕ್‌ ಹಾಗೂ ನಾಯಕ ರಿಷಭ್‌ ಪಂತ್‌ 77 ರನ್‌ಗಳ ಜತೆಯಾಟವಾಡಿ ಆಸರೆಯಾದರು. ಜೇಕ್‌ ಫ್ರೇಸರ್‌ ಮೆಕ್‌ಗುರ್ಕ್‌ 55 (35) ರನ್‌, ಪಂತ್‌ 41 (24) ರನ್‌ ಬಾರಿಸಿದರು. ಟ್ರಿಸ್ಟನ್‌ ಸ್ಟಬ್ಸ್‌ ಅಜೇಯ 15 (9) ರನ್‌ ಮತ್ತು ಶಾಯ್‌ ಹೋಪ್‌ ಅಜೇಯ 11 (10) ರನ್‌ ಕಲೆಹಾಕಿ ತಂಡವನ್ನು ಗೆಲುವಿನ ದಡ ಸೇರಿಸಿದರು.

ಲಕ್ನೋ ಸೂಪರ್‌ ಜೈಂಟ್ಸ್‌ ಪರ ರವಿ ಬಿಷ್ಣೋಯಿ 2 ವಿಕೆಟ್‌, ಯಶ್‌ ಠಾಕೂರ್‌ ಹಾಗೂ ನವೀನ್‌ ಉಲ್‌ ಹಕ್‌ ತಲಾ ಒಂದೊಂದು ವಿಕೆಟ್‌ ಪಡೆದರು.

Tags:
error: Content is protected !!