Mysore
14
clear sky

Social Media

ಶನಿವಾರ, 27 ಡಿಸೆಂಬರ್ 2025
Light
Dark

ಗುಜರಾತ್‌ ಟೈಟನ್ಸ್‌ ವಿರುದ್ಧ ಡೆಲ್ಲಿ ಕ್ಯಾಪಿಟಲ್ಸ್‌ಗೆ ರೋಚಕ ಜಯ

ದೆಹಲಿ: ಇಲ್ಲಿನ ಅರುಣ್‌ ಜೇಟ್ಲಿ ಕ್ರಿಕೆಟ್‌ ಕ್ರೀಡಾಂಗಣದಲ್ಲಿ ನಡೆದ 17ನೇ ಐಪಿಎಲ್‌ ಆವೃತ್ತಿಯ 40ನೇ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್‌ ತಂಡ ಗುಜರಾತ್‌ ಟೈಟನ್ಸ್‌ ವಿರುದ್ಧ 4 ರನ್‌ಗಳ ರೋಚಕ ಗೆಲುವನ್ನು ಕಂಡಿದೆ.

ಪಂದ್ಯದಲ್ಲಿ ಟಾಸ್‌ ಗೆದ್ದ ಗುಜರಾತ್‌ ಟೈಟನ್ಸ್‌ ಫೀಲ್ಡಿಂಗ್‌ ಆರಿಸಿಕೊಂಡು ಡೆಲ್ಲಿ ತಂಡವನ್ನು ಮೊದಲು ಬ್ಯಾಟಿಂಗ್‌ ಮಾಡಲು ಆಹ್ವಾನಿಸಿತು. ಡೆಲ್ಲಿ ಕ್ಯಾಪಿಟಲ್ಸ್‌ ಅಕ್ಷರ್‌ ಪಟೇಲ್‌, ನಾಯಕ ರಿಷಭ್‌ ಪಂತ್‌ ಮತ್ತು ಟ್ರಿಸ್ಟನ್‌ ಸ್ಟಬ್ಸ್‌ ಅಬ್ಬರದ ಬ್ಯಾಟಿಂಗ್‌ ನೆರವಿನಿಂದ 20 ಓವರ್‌ಗಳಲ್ಲಿ 4 ವಿಕೆಟ್‌ ನಷ್ಟಕ್ಕೆ 224 ರನ್‌ ಕಲೆಹಾಕಿ ಗುಜರಾತ್‌ಗೆ 223 ರನ್‌ಗಳ ಕಠಿಣ ಗುರಿಯನ್ನು ನೀಡಿತು. ಈ ಗುರಿಯನ್ನು ಬೆನ್ನತ್ತುವಲ್ಲಿ ಹೋರಾಡಿ ಸೋತ ಗುಜರಾತ್‌ ಟೈಟನ್ಸ್‌ 20 ಓವರ್‌ಗಳಲ್ಲಿ 8 ವಿಕೆಟ್‌ ನಷ್ಟಕ್ಕೆ 220 ರನ್‌ ಕಲೆಹಾಕಿತು.

ಡೆಲ್ಲಿ ಕ್ಯಾಪಿಟಲ್ಸ್‌ ಇನ್ನಿಂಗ್ಸ್:‌ ತಂಡದ ಪರ ಆರಂಭಿಕರಾಗಿ ಕಣಕ್ಕಿಳಿದ ಪೃಥ್ವಿ ಶಾ 11 (7) ರನ್ ಹಾಗೂ ಜೇಕ್‌ ಫ್ರೇಸರ್‌ ಮೆಕ್‌ಗರ್ಕ್‌ ‌23 (14) ರನ್‌ ಗಳಿಸಿದರು. ಶಾಯ್‌ ಹೋಪ್‌ 5 (6) ರನ್‌ ಕಲೆಹಾಕಿದರು. ನಾಲ್ಕನೇ ವಿಕೆಟ್‌ಗೆ ಶತಕದ ಜತೆಯಾಡಿದ ಅಕ್ಷರ್‌ ಪಟೇಲ್‌ ಹಾಗೂ ಪಂತ್‌ ಜೋಡಿ ತಂಡಕ್ಕೆ ಆಸರೆಯಾಯಿತು. ಅಕ್ಷರ್‌ ಪಟೇಲ್‌ 66 (43) ರನ್‌ ಬಾರಿಸಿದರೆ, ಪಂತ್‌ ಅಜೇಯ 88 (43) ರನ್‌ ಬಾರಿಸಿದರು ಮತ್ತು ಟ್ರಿಸ್ಟನ್‌ ಸ್ಟಬ್ಸ್‌ ಅಜೇಯ 26 (7) ರನ್‌ ಕಲೆಹಾಕಿದರು.

ಗುಜರಾತ್ ಟೈಟನ್ಸ್‌ ಪರ ಸಂದೀಪ್‌ ವಾರಿಯರ್‌ 3 ವಿಕೆಟ್‌ ಮತ್ತು ನೂರ್‌ ಅಹ್ಮದ್‌ ಒಂದು ವಿಕೆಟ್‌ ಪಡೆದರು.

ಗುಜರಾತ್‌ ಟೈಟನ್ಸ್‌ ಇನ್ನಿಂಗ್ಸ್:‌ ಗುಜರಾತ್ ಟೈಟನ್ಸ್ ಇನ್ನಿಂಗ್ಸ್: ತಂಡದ ಪರ ಆರಂಭಿಕರಾಗಿ ಕಣಕ್ಕಿಳಿದ ನಾಯಕ ಶುಭ್ ಮನ್ ಗಿಲ್ ಕೇವಲ‌ 6 (5) ರನ್ ಗಳಿಸಿ ವಿಫಲರಾದರೆ, ವೃದ್ಧಿಮಾನ್ ಸಹಾ 39 (25) ರನ್ ಗಳಿಸಿದರು. ಸಾಯಿ ಸುದರ್ಶನ್ 65 (39) ರನ್ ಬಾರಿಸಿ ಉತ್ತಮ ಪ್ರದರ್ಶನ ನೀಡಿದರು. ಇನ್ನುಳಿದಂತೆ ಅಜ್ಮತ್ಉಲ್ಲಾ 1 (2) ರನ್, ಶಾರುಖ್ ಖಾನ್ 8 (5) ರನ್, ರಾಹುಲ್ ತೆವಾಟಿಯಾ 4 (5) ರನ್ ಕಲೆಹಾಕಿದರು. ಅಂತಿಮ ಹಂತದಲ್ಲಿ ನಿರೀಕ್ಷೆ ಹುಟ್ಟುಹಾಕಿದ ಡೇವಿಡ್‌ ಮಿಲ್ಲರ್‌ 55 (23) ರನ್‌ ಗಳಿಸಿದರು. ಮಿಲ್ಲರ್‌ ವಿಕೆಟ್‌ ಬಳಿಕ ಬೌಂಡರಿ ಬಾರಿಸುವ ಮೂಲಕ ಅಬ್ಬರಿಸಿದ ರವಿಶ್ರೀನಿವಾಸನ್‌ ಸಾಯಿ ಕಿಶೋರ್ 13 (6) ರನ್‌ ಬಾರಿಸಿದರೆ, ರಶೀದ್‌ ಖಾನ್‌ ಅಜೇಯ 21 (11) ರನ್‌ ಕಲೆಹಾಕಿ ಗೆಲುವಿನ ನಿರೀಕ್ಷೆ ಹುಟ್ಟಿಸಿ ಕೊನೆಯಲ್ಲಿ ಎಡವಿದರು ಮತ್ತು ಯಾವುದೇ ಎಸೆತ ಎದುರಿಸದ ಮೋಹಿತ್‌ ಶರ್ಮಾ ಅಜೇಯರಾಗಿ ಉಳಿದರು.

ಡೆಲ್ಲಿ ಕ್ಯಾಪಿಟಲ್ಸ್‌ ಪರ ರಸಿಕ್‌ ಡರ್‌ ಸಲಾಮ್‌ 3 ವಿಕೆಟ್‌, ಕುಲ್‌ದೀಪ್‌ ಯಾದವ್‌ 2 ವಿಕೆಟ್‌, ಅನ್ರಿಚ್‌ ನಾರ್ಕಿಯಾ, ಮುಕೇಶ್‌ ಕುಮಾರ್‌ ಹಾಗೂ ಅಕ್ಷರ್‌ ಪಟೇಲ್‌ ತಲಾ ಒಂದೊಂದು ವಿಕೆಟ್‌ ಪಡೆದರು.

Tags:
error: Content is protected !!