Mysore
19
overcast clouds

Social Media

ಮಂಗಳವಾರ, 16 ಡಿಸೆಂಬರ್ 2025
Light
Dark

IPL 2024: ಕ್ಯಾಪಿಟಲ್ಸ್‌ ಆಟಕ್ಕೆ ಶರಣಾದ ರಾಯಲ್ಸ್‌

ನವದೆಹಲಿ: ಡೆಲ್ಲಿ ತಂಡದ ಆಲ್‌ರೌಂಡರ್‌ ಆಟದ ಪ್ರದರ್ಶನದ ಮುಂದೆ ರಾಜಸ್ಥಾನ್‌ ರಾಯಲ್ಸ್‌ ತಂಡ ಮಂಕಾಗಿ 20 ರನ್‌ಗಳ ಅಂತರದಿಂದ ಸೋಲೊಪ್ಪಿಕೊಂಡಿದೆ. ಆ ಮೂಲಕ ರಾಜಸ್ಥಾನ್‌ ಟೂರ್ನಿಯಲ್ಲಿ ಮೂರನೇ ಸೋಲು ಕಂಡಿದೆ.

ಇಲ್ಲಿನ ಅರುಣ್‌ ಜೆಟ್ಲಿ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್‌ ಟೂರ್ನಿಯ 56ನೇ ಪಂದ್ಯದಲ್ಲಿ ಆರ್‌ಆರ್‌ ಹಾಗೂ ಡಿಸಿ ತಡಗಳು ಮುಖಾಮುಖಿಯಾಗಿದ್ದವು. ಇನ್ನು ಈ ಪಂದ್ಯದಲ್ಲಿ ಟಾಸ್‌ ಸೋತು ಮೊದಲು ಬ್ಯಾಟ್‌ ಮಾಡಿದ ಡೆಲ್ಲಿ ಕ್ಯಾಪಿಟಲ್‌ ನಿಗದಿತ 20 ಓವರ್‌ಗಳಲ್ಲಿ 8 ವಿಕೆಟ್‌ ಕಳೆದುಕೊಂಡು 221 ರನ್‌ಗಳಿಸಿ ಎದುರಾಳಿ ತಂಡಕ್ಕೆ 222 ಮೊತ್ತ ಟಾರ್ಗೆಟ್‌ ನೀಡಿತು. ಈ ಬೃಹತ್‌ ಮೊತ್ತ ಚೇಸ್‌ ಮಾಡಿದ ಆರ್‌ಆರ್‌ ತಂಡ, ನಾಯಕ ಸ್ಯಾಮ್ಸನ್‌ ಹೋರಾಟ ಫಲವಾಗಿಯೂ ರಾಯಲ್ಸ್‌ 20 ಓವರ್‌ಗಳಲ್ಲಿ 8 ವಿಕೆಟ್‌ ನಷ್ಟಕ್ಕೆ 201 ರನ್‌ ಗಳಿಸಿ 20ರನ್‌ಗಳ ಅಂತರದಿಂದ ಸೋಲು ಕಂಡಿತು.

ಡೆಲ್ಲಿ ಇನ್ನಿಂಗ್ಸ್‌: ತವರಿನಂಗಳದಲ್ಲಿ ಟಾಸ್‌ ಸೋತು ಮೊದಲು ಬ್ಯಾಟ್‌ ಮಾಡಿದ ಡಿಸಿ ತಂಡಕ್ಕೆ ಭರ್ಜರಿ ಆರಂಭ ದೊರೆಯಿತು. ಆರಂಭಿಕ ಆಟಗಾರರಿಬ್ಬರು ಉತ್ತಮ ಇನ್ನಿಂಗ್ಸ್‌ ಕಟ್ಟಿದರು. ಫ್ರೆಸರ್‌ ಮೆಗ್‌ಕರ್ಗ್‌ ಹಾಗೂ ಪೋರೆಲ್‌ ಅವರ ಬ್ಯಾಟಿಂಗ್‌ ಬಲದಿಂದಾಗಿ ಡಿಸಿ ತಂಡ ಪವರ್‌ ಪ್ಲೇನಲ್ಲಿ 78ರನ್‌ ಕಲೆಹಾಕಿತು.

ಫ್ರೆಸರ್‌ ಮೆಗ್‌ಕರ್ಗ್‌ ಕೇವಲ 20 ಎಸೆತ ಎದುರಿಸಿ 7ಬೌಂಡರಿ ಹಾಗೂ 3 ಸಿಕ್ಸರ್‌ ಸಹಿತ 50 ರನ್‌ ಗಳಿಸಿದರೇ, ಅಭೀಷೇಕ್‌ ಪೋರೆಲ್‌ 36 ಎಸೆತಗಳಲ್ಲಿ 7ಬೌ, 3 ಸಿಕ್ಸರ್‌ ಸೇರಿ 65 ರನ್‌ ಬಾರಿಸಿ ಔಟಾದರು.

ಬಳಿಕ ಬಂದ ಬೇರಾವ ಬ್ಯಾಟರ್‌ಗಳಿಂದಲೂ ಉತ್ತಮ ಇನ್ನಿಂಗ್ಸ್ ಕಟ್ಟಲು ಸಾಧ್ಯವಾಗಲಿಲ್ಲ. ಶಾಯ್‌ ಹೋಪ್‌ 1(1) ಅಕ್ಷರ್‌ ಪಟೇಲ್‌15(10), ನಾಯಕ ಪಂತ್‌ 15(13), ಗುಲ್ಬದಿನ್‌ 19(15), ರಸಿಕ್‌ 9(3), ಕುಲ್ದೀಪ್‌ ಯಾದವ್‌ 5(2) ಗಳಿಸಿದರು. ಕೊನೆಯಲ್ಲಿ ಅಬ್ಬರಿಸಿದ ಸ್ಟಬ್ಸ್‌ 20 ಎಸೆತಗಳಲ್ಲಿ 41 ರನ್‌ ಬಾರಿಸಿ ತಂಡದ ಮೊತ್ತ ಇನ್ನೂರರ ಗಡಿ ದಾಟುವಲ್ಲಿ ಸಹಕರಿಸಿದರು.

ರಾಜಸ್ತಾನ್‌ ಪರ ಆರ್‌. ಅಶ್ವಿನ್‌ 3, ಬೋಲ್ಟ್‌, ಸಂದೀಪ್‌ ಶರ್ಮಾ ಹಾಗೂ ಚಾಹಲ್‌ ತಲಾ ಒಂದೊಂದು ವಿಕೆಟ್‌ ಪಡೆದು ಮಿಂಚಿದರು.

ಆರ್‌ಆರ್‌ ಇನ್ನಿಂಗ್ಸ್‌: ಈ ಬೃಹತ್‌ ಮೊತ್ತ ಬೆನ್ನತ್ತಿದ ರಾಜಸ್ಥಾನ್‌ ತಂಡಕ್ಕೆ ಆರಂಭಿಕ ಆಘಾತ ಎದುರಾಯಿತು. ಜೈಸ್ವಾಲ್‌ 4(2) ಹಾಗೂ ಬಟ್ಲರ್‌ 19(17) ರನ್‌ ಗಳಿಸಿ ಬೇಗನೇ ಓಟಾದರು. ಬಳಿಕ ಬಂದ ರಿಯಾನ್‌ ಪರಾಗ್‌ 27(22) ಹೆಚ್ಚು ಹೊತ್ತು ಕ್ರೀಸ್‌ನಲ್ಲಿ ನಿಲ್ಲಲ್ಲಿಲ್ಲ.

ಒಂದೆಡೆ ವಿಕೆಟ್‌ ಬೀಳುತ್ತಿದ್ದರೂ ಮತ್ತೊಂದೆಡೆ ಭದ್ರವಾಗಿ ಇನ್ನಿಂಗ್ಸ್‌ ಕಟ್ಟಿದ ನಾಯಕ ಸಂಜು ಸ್ಯಾಮ್ಸನ್‌ 46 ಎಸೆತ ಎದುರಿಸಿ 8ಬೌಂಡರಿ ಮತ್ತು 6 ಸಿಕ್ಸರ್‌ ಸಹಿತ 86 ರನ್‌ಗಳಿಸಿ ಔಟಾದರು. ಬಳಿಕ ಬಂದ ಯಾರಿಂದಲೂ ಮ್ಯಾಚ್‌ ವಿನ್ನಿಂಗ್‌ ಕ್ಯಾಮಿಯೋ ಕಂಡು ಬರಲಿಲ್ಲ. ಶುಭಂ ದುಬೆ 25(12), ಫೇರಿರಾ 1(3), ಪೊವೆಲ್‌ 13(10) ಆರ್‌. ಅಶ್ವಿನ್‌ 2(3), ಓಟಾಗದೇ ಬೋಲ್ಟ್‌ 2(3) ಆವೇಶ್‌ ಖಾನ್‌ 7(3) ಇದ್ದರು ತಂಡವನ್ನು ಗೆಲ್ಲಿಸಿಕೊಡಲು ಆಗಲಿಲ್ಲ.

ಡೆಲ್ಲಿ ಪರ ಕಲೀಲ್‌ ಅಹ್ಮದ್‌, ಕುಲ್ದೀಪ್‌ ಯಾದವ್‌ ಹಾಗೂ ಮುಖೇಶ್‌ ಕುಮಾರ್‌ ತಲಾ 2 ವಿಕೆಟ್‌ ಪಡೆದರು. ರಸಿಕ್‌ ಹಾಗೂ ಅಕ್ಷರ್‌ ತಲಾ ಒಂದು ವಿಕೆಟ್‌ ಪಡೆದರು.

Tags:
error: Content is protected !!