ವಿಶಾಖಪಟ್ಟಣ: ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್ 18ರ ಆವೃತ್ತಿಯ 4ನೇ ಪಂದ್ಯದಲ್ಲಿ ಲಕ್ನೋ ಸೂಪರ್ ಜೈಂಟ್ಸ್ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ತಂಡಗಳು ಎದುರಾಗಲಿದ್ದು, ಉಭಯ ತಂಡಗಳು ಮೊದಲ ಗೆಲುವಿನ ನಿರೀಕ್ಷೆಯಲ್ಲಿದ್ದಾರೆ.
ಡೆಲ್ಲಿ ತಂಡಕ್ಕೆ ವಿಶಾಖಪಟ್ಟಣ ಕ್ರೀಡಾಂಗಣವು ಎರಡನೇ ತವರು ಮೈದಾನವಾಗಿದೆ. ಅಂಕಿ-ಅಂಶಗಳ ಲೆಕ್ಕಚಾರದಲ್ಲಿ ಉಭಯ ತಂಡಗಳು ಬಲಿಷ್ಠವಾಗಿದೆ.
ಡೆಲಿ ತಂಡಕ್ಕೆ ಫಾಫ್ ಡುಪ್ಲೆಸಿಸ್ ಅವರ ಆಗಮನದಿಂದ ಬ್ಯಾಟಿಂಗ್ ಬಲ ಹೆಚ್ಚಾಗಿದೆ. ಜೊತೆಗೆ ಯುವ ಆಟಗಾರ ಜೇಕ್ ಫ್ರೇಸರ್ ಮೆಕ್‌ಗುರ್ಕ್, ಕರುಣ್ ನಾಯರ್, ಅಭಿಷೇಕ್ ಪೊರೆಲ್ ಮತ್ತು ಟ್ರಿಸ್ಟನ್ ಸ್ಟಬ್ಸ್ ಅವರು ಕೂಡ ಡೆಲ್ಲಿಗೆ ಬ್ಯಾಟಿಂಗ್‌ನಲ್ಲಿ ಶಕ್ತಿ ತುಂಬಬಲ್ಲರು. ಬೌಲಿಂಗ್‌ನಲ್ಲಿ ವೇಗಿ ಮಿಚೆಲ್ ಸ್ಟಾರ್ಕ್, ಟಿ.ನಟರಾಜನ್, ಮೋಹಿತ್ ಶರ್ಮಾ ಮತ್ತು ಮುಕೇಶ್ ಕುಮಾರ್ ಇದ್ದಾರೆ. ಸ್ಪಿನ್ ವಿಭಾಗದಲ್ಲಿ ಕುಲದೀಪ್ ಹೊಣೆ ನಿಭಾಯಿಸಲಿದ್ದಾರೆ.
ಇತ್ತ ಲಖನೌ ತಂಡಕ್ಕೆ ರಿಷಭ್ ಪಂತ್ ನಾಯಕರಾಗಿ ತಂಡದ ಹೊಣೆ ಹೊತ್ತುಕೊಂಡಿದ್ದು, ಜೊತೆಗೆ ಡೇವಿಡ್ ಮಿಲ್ಲರ್, ಏಡನ್ ಮರ್ಕರಂ ಮತ್ತು ನಿಕೋಲಸ್ ಪೂರನ್ ಮಿಚೆಲ್ ಮಾರ್ಷ್ ಹಾಗೂ ಆಯುಷ್ ಬಡೋನಿ ಬ್ಯಾಟಿಂಗ್ ವಿಭಾಗದಲ್ಲಿದ್ದಾರೆ. ಆವೇಶ್ ಖಾನ್, ಆಕಾಶ್ ದೀಪ್ , ರವಿ ಬಿಷ್ನೋಯಿ ಮತ್ತು ಶಾರ್ದೂಲ್ ಠಾಕೂರ್ ಬೌಲಿಂಗ್ ವಿಭಾಗದ ಹೊಣೆ ಹೊತ್ತುಕೊಂಡಿದ್ದಾರೆ.
ಪಂದ್ಯ ಆರಂಭ: ರಾತ್ರಿ 7.30ಕ್ಕೆ
ಸ್ಥಳ: ಡಾ.ವೈ.ಎಸ್ ರಾಜಶೇಖರ ರೆಡ್ಡಿ ಕ್ರಿಕೆಟ್ ಸ್ಟೇಡಿಯಂ, ವಿಶಾಖಪಟ್ಟಣಂ
ನೇರ ಪ್ರಸಾರ: ಜಿಯೋಹಾಟ್‌ಸ್ಟಾರ್





