ಪ್ರಸ್ತುತ ನಡೆಯುತ್ತಿರುವ ರಣಜಿ ಕ್ರಿಕೆಟ್ ಟ್ರೋಫಿಯಲ್ಲಿ ಕರ್ನಾಟಕ ತಂಡವನ್ನು ಮುನ್ನಡೆಸುತ್ತಿರುವ ಮಯಾಂಕ್ ಅಗರ್ವಾಲ್ ಅಸ್ವಸ್ಥರಾಗಿದ್ದು, ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ನಿನ್ನೆಯಷ್ಟೇ ಮುಕ್ತಾಯಗೊಂಡ ತ್ರಿಪುರ ವಿರುದ್ಧದ ಪಂದ್ಯದಲ್ಲಿ ಯಶಸ್ವಿಯಾಗಿ ತಂಡವನ್ನು ಮುನ್ನಡೆಸಿದ್ದ ಮಯಾಂಕ್ ಅಗರ್ವಾಲ್ ಫೆಬ್ರವರಿ 2ರಿಂದ ಆರಂಭವಾಗಲಿರುವ ರೈಲ್ವೆ ವಿರುದ್ಧ ಮುಂದಿನ ಪಂದ್ಯವನ್ನು ಆಡಲು ಗುಜರಾತ್‌ನ ಸೂರತ್‌ಗೆ ವಿಮಾನದಲ್ಲಿ ಪ್ರಯಾಣ ಕೈಗೊಂಡಿದ್ದರು.
ಈ ವೇಳೆ ಮಯಾಂಕ್ ಅಗರ್ವಾಲ್ ತಮ್ಮ ಸೀಟಿನ ಮುಂಭಾಗ ಇದ್ದ ಬಾಟಲ್‌ನಲ್ಲಿದ್ದ ನೀರನ್ನು ಕುಡಿದಿದ್ದಾರೆ. ಕೂಡಲೇ ನಾಲಿಗೆ, ಬಾಯಿ ಹಾಗೂ ಕೆನ್ನೆ ಸುಟ್ಟು ಹೋದ ಅನುಭವವಾದ ಮಯಾಂಕ್ ಅಗರ್ವಾಲ್ ಸೀಟಿನಲ್ಲೇ ಒರಗಿಬಿದ್ದಿದ್ದು, ಅಗರ್ತಲದ ಎಎಲ್‌ಎಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಇನ್ನು ಮಯಾಂಕ್ ಅಗರ್ವಾಲ್ ಕುಡಿದಿದ್ದ ಬಾಟಲ್‌ನಲ್ಲಿ ಇದ್ದದ್ದು ನೀರಲ್ಲ ಆಸಿಡ್ ಎಂಬ ಅನುಮಾನಗಳೂ ಸಹ ವ್ಯಕ್ತವಾಗಿವೆ.