Mysore
28
clear sky

Social Media

ಮಂಗಳವಾರ, 17 ಡಿಸೆಂಬರ್ 2024
Light
Dark

T20 worldcup: ಕ್ರಿಕೆಟ್‌ ಸ್ಕಾಟ್ಲೆಂಡ್‌ ತಂಡದ ಜೆರ್ಸಿಯಲ್ಲಿ ರಾರಾಜಿಸಿದ “ನಂದಿನಿ”

ಕರ್ನಾಟಕ ಹಾಲು ಒಕ್ಕೂಟದ ಬ್ರಾಂಡ್‌ ನಂದಿನಿ ಲೋಗೋ ಇರುವ ಜೆರ್ಸಿಯನ್ನು ಕ್ರಿಕೆಟ್‌ ಸ್ಕಾಟ್ಲೆಂಡ್‌ ಬುಧವಾರ (ಮೇ.15) ನಡೆದ ವರ್ಚುವಲ್‌ ಜೆಂಟಿ ಪತ್ರಿಕಾಗೋಷ್ಠಿಯಲ್ಲಿ ಅನಾವರಣಗೊಳಿಸಿದೆ.

ಈ ಜೆರ್ಸಿಯನ್ನು ಸ್ಕಾಟ್ಲೆಂಡ್‌ ತಂಡದ ಉಪ ನಾಯಕ ಮ್ಯೂಥ್ಯೂ ಕ್ರಾಸ್‌ ಮತ್ತು ಮಧ್ಯಮ ವೇಗಿ ಕ್ರಿಸ್‌ ಸೋಲ್‌ ಅವರು ಬಿಡುಗಡೆಗೊಳಿಸಿದರು.

ಮತ್ತು ಜೆರ್ಸಿ ಅನಾವಣ ಬಗ್ಗೆ ತಮ್ಮ ಅಧಿಕೃತ ಎಕ್ಸ್‌ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿರುವ ಸ್ಕಾಟ್ಲೆಂಡ್‌, ಕ್ರಿಕೆಟ್‌ ಸ್ಕಾಟ್ಲೆಂಡ್‌ ಮತ್ತು ಕರ್ನಾಟಕದ ಹಾವು ಒಕ್ಕೂಟವು ಈ ಬಾರಿಯ icc t20 ವಿಶ್ವಕಪ್‌ನಲ್ಲಿ ನಂದಿನಿ ಬ್ರಾಂಡ್‌ನ್ನು ಪುರುಷರ ತಂಡದ ಅಧಿಕೃತ ಪ್ರಯೋಜಕರಾಗಿ ಘೊಷಿಸಲು ಸಂತೋಷವಾಗಿದೆ ಎಂದು ಬರೆದುಕೊಂಡಿದ್ದಾರೆ.

ಕ್ರಿಕೆಟ್ ಸ್ಕಾಟ್ಲೆಂಡ್ ಮತ್ತು ಕರ್ನಾಟಕ ಹಾಲು ಒಕ್ಕೂಟವು ನಂದಿನಿ ಅವರನ್ನು ICC ಪುರುಷರ T20 ವಿಶ್ವಕಪ್ 2024 ನಲ್ಲಿ ಸ್ಕಾಟ್ಲೆಂಡ್ ಪುರುಷರ ತಂಡದ ಅಧಿಕೃತ ಪ್ರಾಯೋಜಕರಾಗಿ ಘೋಷಿಸಲು ಸಂತೋಷವಾಗಿದೆ.

ಕರ್ನಾಟಕ ಹಾಲು ಒಕ್ಕೂಟ(ಕೆಎಂಎಫ್‌) ತನ್ನ ಬ್ರಾಂಡ್‌ನ್ನು ಪ್ರಪಂಚದಾದ್ಯಂತ ವಿಸ್ತಾರಗೊಳಿಸಲು ಹಲವಾರು ಯೋಜನೆಗಳನ್ನು ರೂಪಿಸಿದ್ದು, ಅದರಲ್ಲಿ ಒಂದಾದ ಟಿ20 ವಿಶ್ವಕಪ್‌ ನಲ್ಲಿ ತನ್ನ ಬ್ರಾಂಡ್‌ ಬಗ್ಗೆ ಪ್ರಚಾರ ಮಾಡಲು ಕೆಎಂಎಫ್‌ ಮುಂದಾಗಿತ್ತು. ಈ ವಿಶ್ವಕಪ್‌ನಲ್ಲಿ ಸ್ಕಾಟ್ಲೆಂಡ್‌ ಹಾಗೂ ಐರ್ಲೆಂಡ್‌ ತಂಡಗಳ ಜೆರ್ಸಿ ಮೇಲೆ ಪ್ರಾಯೋಜಕರಾಗಿ ನಂದಿನಿ ಹೆಸರು ಕಾಣಲಿದೆ ಎಂದು ನಿರ್ದೇಶಕರು ಹೇಳಿದ್ದು, ಅದರಂತೆ ಸ್ಕಾಟ್ಲೆಂಡ್‌ ನಂದಿನಿ ಲೋಗೋ ಇರುವ ಜೆರ್ಸಿಯನ್ನು ಬಿಡುಗಡೆ ಮಾಡಿದೆ. ಇವತ್ತು ಅಥವಾ ನಾಳೆ ಐರ್ಲೆಂಡ್‌ ತಂಡ ಕೂಡಾ ನಂದಿನ ಲೋಗೋವನ್ನು ಲಾಂಚ್‌ ಮಾಡಬಹುದು.

ಇದೇ ಜೂನ್‌ 1ರಿಂದ ಆರಂಭವಾಗಲಿರುವ ಟಿ20 ವಿಶ್ವಕಪ್‌ನ ಎರಡು ತಂಡಗಳಿಗೆ ಕರ್ನಾಟಕದ ಖ್ಯಾತ ಹಾಲು ಉತ್ಪನ್ನ ಒಕ್ಕೂಟವೊಂದು ಪ್ರಾಯೋಜಕತ್ವವನ್ನು ವಹಿಸಿಕೊಂಡಿದೆ.

ಇನ್ನು ಅಮೇರಿಕಾ ಹಾಗೂ ವೆಸ್ಟ್‌ ಇಂಡೀಸ್‌ ಸಹಭಾಗಿತ್ವದಲ್ಲಿ ಇದೇ ಜೂನ್‌ 1ರಿಂದ 29 ವರೆಗೆ ಟಿ20 ವಿಶ್ವಕಪ್‌ ನಡೆಯಲಿದೆ.

Tags: