Mysore
17
scattered clouds

Social Media

ಬುಧವಾರ, 17 ಡಿಸೆಂಬರ್ 2025
Light
Dark

ಕಾಮನ್‌ವೆಲ್ತ್ ಗೇಮ್ಸ್ : ಚಿನ್ನ ಗೆದ್ದ ಬ್ಯಾಡ್ಮಿಂಟನ್ ತಾರೆ ಪಿವಿ ಸಿಂಧೂ

ಬರ್ಮಿಂಗ್‌ಹ್ಯಾಮ್ : ಕಾಮನ್‌ವೆಲ್ತ್ ಗೇಮ್ಸ್ ಕ್ರೀಡಾಕೂಟದಲ್ಲಿ ಬ್ಯಾಡ್ಮಿಂಟನ್ ತಾರೆ ಪಿವಿ ಸಿಂಧೂ ಭಾರತ ಕೀರ್ತಿ ಪತಾಕೆ ಹಾರಿಸಿದ್ದಾರೆ. ಮಹಿಳಾ ಸಿಂಗಲ್ಸ್ ವಿಭಾಗದ ಫೈನಲ್ ಪಂದ್ಯದಲ್ಲಿ ಪಿವಿ ಸಿಂಧೂ ಕೆನಡಾ ಮೈಕೆಲ್ ಲೀ ವಿರುದ್ಧ ಭರ್ಜರಿ ಗೆಲುವು ಸಾಧಿಸಿದ್ದಾರೆ. ಈ ಮೂಲಕ ಚಿನ್ನದ ಪದಕ ಗೆದ್ದುಕೊಂಡಿದ್ದಾರೆ. ಫೈನಲ್ ಸುತ್ತಿನಲ್ಲಿ ಪಿವಿ ಸಿಂಧು 21-15, 21-13 ಅಂತರದಲ್ಲಿ ಕೆನಡಾ ಸ್ಪರ್ಧಿ ವಿರುದ್ಧ ಗೆಲುವು ದಾಖಲಿಸಿದ್ದಾರೆ. ಕಾಮನ್‌ವೆಲ್ತ್ ಗೇಮ್ಸ್ ಕ್ರೀಡಾಕೂಟ 2022ರಲ್ಲಿ ಭಾರತ ಗೆದ್ದ 19ನೇ ಚಿನ್ನದ ಪದಕವಾಗಿದೆ.  2014ರ ಕಾಮನ್‌ವೆಲ್ತ್ ಗೇಮ್ಸ್ ಕ್ರೀಡಾಕೂಟದಲ್ಲಿ ಚಿನ್ನದ ಪದಕ ಗೆದ್ದಿದ್ದ ಮೈಕೆಲ್ ಲೀ ಸದ್ಯ 13ನೇ ಶ್ರೇಯಾಂಕಿತರಾಗಿದ್ದಾರೆ. 2018ರ ಕಾಮನ್‌ವೆಲ್ತ್ ಗೇಮ್ಸ್ ಕ್ರೀಡಾಕೂಟದಲ್ಲಿ ಪಿವಿ ಸಿಂಧು ಫೈನಲ್ ಪಂದ್ಯದಲ್ಲಿ ಭಾರತದ ಮತ್ತೊಬ್ಬ ಶಟ್ಲರ್ ಸೈನಾ ನೆಹ್ವಾಲ್ ವಿರುದ್ಧ ಮುಗ್ಗರಿಸಿದ್ದರು. ಇದೀಗ ಕಾಮನ್‌ವೆಲ್ತ್ ಗೇಮ್ಸ್ ಕೂಟದಲ್ಲಿ ಸಿಂಧೂ ಚಿನ್ನದ ಪದಕ ಸಾಧನೆ ಮಾಡಿದ್ದಾರೆ. ಸಿಂಧೂ ಚಿನ್ನದ ಪದಕದ ಮೂಲಕ ಭಾರತ ಪಜಕ ಪಟ್ಟಿಯಲ್ಲಿ ಅಂಕಪಟ್ಟಿಯಲ್ಲಿ 4ನೇ ಸ್ಥಾನಕ್ಕೆ ಜಿಗಿದಿದೆ. 19 ಚಿನ್ನ, 15 ಬೆಳ್ಳಿ ಹಾಗೂ 22 ಕಂಚಿನ ಪದಕದೊಂದಿಗೆ ಒಟ್ಟು 56 ಪದಕ ಗೆದ್ದುಕೊಂಡಿದೆ.

ಮೊದಲ ಸೆಟ್‌ನಲ್ಲಿ ಪಿವಿ ಸಿಂಧೂ ಪರಾಕ್ರಮ ತೋರಿದರು.  21-15 ಅಂತರದಲ್ಲಿ ಮೊದಲ ಸೆಟ್ ಗೆದ್ದುಕೊಂಡರು. ಎರಡನೇ ಸೆಟ್‌ನಲ್ಲಿ ಗೇಮ್‌ಬ್ರೇಕ್‌ನಲ್ಲಿ 11-6 ಅಂತರದಲ್ಲಿ ಮುನ್ನಡೆ ಪಡೆದ ಸಿಂಧೂ 21-13 ಅಂತರದಲ್ಲಿ ಪಂದ್ಯ ಫಿನೀಶ್ ಮಾಡಿದರು.

ಕ್ವಾರ್ಟರ್‌ ಫೈನಲ್‌ನಲ್ಲಿ ಮಾಜಿ ವಿಶ್ವ ಚಾಂಪಿಯನ್‌ ಸಿಂಧು, ಮಲೇಷ್ಯಾದ ಜಿನ್‌ ವೀ ಗೋ ವಿರುದ್ಧ 19-21, 21-14, 21-18 ಅಂತರದಲ್ಲಿ ಗೆಲುವು ದಾಖಲಿಸಿದ್ದರು. ಮೂಲಕ ಅಂತಿಮ 4ರ ಘಟ್ಟಪ್ರವೇಶಿಸಿದರು.  ಭಾನುವಾರ ಮಹಿಳಾ ಸಿಂಗಲ್ಸ್‌ ಸೆಮಿಫೈನಲ್‌ನಲ್ಲಿ ಸಿಂಗಾಪೂರದ ಯೋ ಜಿಯಾ ಮಿನ್‌ ಅವರನ್ನು 21-19, 21-17 ನೇರ ಗೇಮ್‌ಗಳಿಂದ ಮಣಿಸಿದ ಪಿವಿ ಸಿಂಧು ಫೈನಲ್ ಪ್ರವೇಶಿಸಿದ್ದರು.

ಸಿಂಧು ಚಿನ್ನ ಸಾಧನೆಗೆ ಪ್ರಧಾನಿ ನರೇಂದ್ರ ಮೋದಿ ಅಭಿನಂದನೆ ತಿಳಿಸಿದ್ದಾರೆ. ಪಿವಿ ಸಿಂಧೂ ಚಾಂಪಿಯನ್‌ಗಳ ಚಾಂಪಿಯನ್.  ಎಕ್ಸಲೆಂಟ್ ಅನ್ನೋದನ್ನು ಸಿಂಧೂ ಪದೆ ಪದೇ ಸಾಬೀತುಪಡಿಸಿದ್ದಾಳೆ. ಸಿಂಧೂ ಸಮರ್ಪಣೆ ಮತ್ತು ಬದ್ಧತೆ ವಿಸ್ಮಯಕಾರಿಯಾಗಿದೆ. ಚಿನ್ನ ಗೆದ್ದ ಸಿಂಧೂಗೆ ಅಭಿನಂದನೆಗಳು. ಮುಂದಿನ ಪ್ರಯತ್ನಗಳಿಗೆ ಶುಭ ಹಾರೈಕೆ ಎಂದು ಮೋದಿ ಟ್ವೀಟ್ ಮೂಲಕ ಶುಭಕೋರಿದ್ದಾರೆ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!