ನವದೆಹಲಿ: ದೆಹಲಿಯ ಕರ್ನಾಟಕ ಭವನದಲ್ಲಿ ಐರೆನ್ ಲೇಡಿ ಆಪ್ ಇಂಡಿಯಾ ಖುದ್ಸಿಯಾ ನಜಿರ್ ಅವರನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಭಿನಂದಿಸಿದರು.
ಇತ್ತೀಚೆಗೆ ಆಸ್ಟ್ರೇಲಿಯಾದಲ್ಲಿ ನಡೆದ ಕಾಮನ್‌ವೆಲ್ತ್ ಗೇಮ್ಸ್ ಯುನೈಟೆಡ್ ಮಾಸ್ಟರ್ಸ್ ವೇಟ್ ಲೆಫ್ಟಿಂಗ್ ಚಾಂಪಿಯನ್ ಶಿಪ್ ನಲ್ಲಿ ಗೋಲ್ಡ್ ಮೆಡಲ್ ಪಡೆದ ಐರೆನ್ ಲೇಡಿ ಆಪ್ ಇಂಡಿಯಾ ಖ್ಯಾತಿಯ ಖುದ್ಸಿಯಾ ಅವರನ್ನು ಭೇಟಿಯಾದ ಸಿಎಂ ಸಿದ್ದರಾಮಯ್ಯ ಅಭಿನಂದನೆ ಸಲ್ಲಿಸಿ ಇನ್ನೂ ಹೆಚ್ಚಿನ ಸಾಧನೆ ಮಾಡುವಂತೆ ಹಾರೈಸಿದರು.
ಚಿನ್ನದ ಪದಕ ವಿಜೇತೆ ಖುದ್ಸಿಯಾ ಬಂಗಾರಪೇಟೆ ಮೂಲದವರಾಗಿದ್ದು ಕೆಎಸ್‌ಆರ್‌ಟಿಸಿ ನೌಕರರಾಗಿದ್ದಾರೆ. ಇದೇ ಜೂನ್ 19ರಿಂದ – 23ರ ವರೆಗೆ ಆಸ್ಟ್ರೇಲಿಯಾದಲ್ಲಿ ನಡೆದಿದ್ದ ಚಾಂಪಿಯನ್‌ಶಿಪ್ನಲ್ಲಿ ಭಾಗವಹಿಸಿದ್ದ ಖುದ್ಸಿಯಾ ನಜಿರ್, ಇದರಲ್ಲಿ ಚಿನ್ನದ ಪದಕ ಪಡೆದು ರಾಜ್ಯ ಹಾಗೂ ದೇಶಕ್ಕೆ ಕೀರ್ತಿ ತಂದಿದ್ದಾರೆ.





