ಪ್ಯಾರೀಸ್: 2024ರ ಪ್ಯಾರೀಸ್ ಒಲಂಪಿಕ್ಸ್ ಕ್ರೀಡಾಕೂಟದಲ್ಲಿ ಚೀನಾ ಶುಭಾರಂಭ ಮಾಡಿದೆ. ಟೂರ್ನಿಯ ಮೊದಲ ದಿನವೇ ಚಿನ್ನದ ಪದಕ ಗೆಲ್ಲುವ ಮೂಲಕ ಪ್ರಸಕ್ತ ಟೂರ್ನಿಯಲ್ಲಿ ಚಿನ್ನದ ಪದಕ ಗೆದ್ದ ಮೊದಲ ದೇಶ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.
ಶನಿವಾರ (ಜು.27) ನಡೆದ 10 ಮೀ ಏರ್ ರೈಫೆಲ್ ಮಿಶ್ರ ತಂಡಗಳ ಸ್ಪರ್ಧೆಯಲ್ಲಿ ದಕ್ಷಿಣ ಕೊರಿಯಾದ ಜಿಹ್ಯೆನ್ ಕೆಯುಮ್ ಹಾಗೂ ಹಜುನ್ ಪಾರ್ಕ್ ಜೋಡಿಯನ್ನು 16-12 ಅಂತರದಿಂದ ಸೋಲಿಸಿದ ಹುವಾಂಗ್ ಮತ್ತು ಶೆಂಗ್ ಜೋಡಿ ಸೋಲಿಸುವ ಮೂಲಕ ಮೊದಲ ಚಿನ್ನವನ್ನು ಗೆದ್ದು ಬೀಗಿತು.
ದಕ್ಷಿಣ ಕೊರಿಯಾದ ಜಿಹ್ಯೆನ್ ಕೆಯುಮ್ ಹಾಗೂ ಹಜುನ್ ಪಾರ್ಕ್ ಜೋಡಿ ಬೆಳ್ಳಿ ಪದಕ ಜಯಿಸಿದರೇ, ಕಝಕಿಸ್ತಾನ್‌ನ ಅಲೆಕ್ಸಾಂಡ್ರಾ ಲೆ ಮತ್ತು ಇಸ್ಲಾಂ ಸತ್ಪಯೇವ್ ಅವರು ಮೂರನೇ ಸ್ಥಾನ ಪಡೆದು ಕಂಚಿನ ಪದಕ ಜಯಿಸಿದರು.



