Mysore
18
overcast clouds

Social Media

ಮಂಗಳವಾರ, 16 ಡಿಸೆಂಬರ್ 2025
Light
Dark

China masters 2023: ಫೈನಲ್‌ನಲ್ಲಿ ಎಡವಿದ ಸಾತ್ವಿಕ್‌ ಚಿರಾಗ್‌ ಜೋಡಿ

ಬೀಜಿಂಗ್‌ : ಚೀನಾ ಮಾಸ್ಟರ್ಸ್‌ ಬ್ಯಾಡ್ಮಂಟನ್‌ ಟೂರ್ನಮೆಂಟ್‌ನ ಫೈನಲ್‌ ನಲ್ಲಿ ಭಾರತದ ಚಿರಾಗ್‌ ಶೆಟ್ಟಿ ಹಾಗೂ ಸಾತ್ವಿಕ್‌ ಸಾಯಿರಾಜ್‌ ರಾಂಕಿರೆಡ್ಡಿ ಅವರು ವಿಶ್ವದ ನಂ.1 ಜೋಡಿಗಳಾದ ಲಿಯಾಂಗ್‌ ವೀ ಕೆಂಗ್‌ ಹಾಗೂ ವಾಂಗ್‌ ಚಾಂಗ್‌ ವಿರುದ್ಧ ಫೈನಲ್‌ನಲ್ಲಿ ಪರಾಭವಗೊಂಡಿದ್ದಾರೆ.

ಭಾನುವಾರ ನಡೆದ ಈ ಪಂದ್ಯದಲ್ಲಿ ನ.1 ಶ್ರೇಯಾಂಕದ ಭಾರತದ ಜೋಡಿ ಒಂದು ಗಂಟೆ ಹಾಗೂ 9 ನಿಮಿಷಗಳ ಕಾಲ ಪ್ರಶಸ್ತಿ ಸುತ್ತಿನ ಹಣಾಹಣಿಯಲ್ಲಿ ಚೀನಾದ ಜೋಡಿ 19-21, 21-18, 19-21 ಗೇಮ್‌ಗಳ ಅಂತರದಿಂದ ಸೋಲನುಭವಿಸಿದರು. ಆರಂಭದಿಂದಲೇ ಲಿಯಾಂಗ್ ಹಾಗೂ ವಾಂಗ್‌ರಿಂದ ಸಾತ್ವಿಕ್ ಹೆಚ್ಚು ಒತ್ತಡಕ್ಕೆ ಒಳಗಾದರು. ಮೊದಲ ಗೇಮ್‌ನ್ನು 19-21 ಅಂತರದಿಂದ ಸೋತು ಹಿನ್ನಡೆಯಲ್ಲಿದ್ದ ಭಾರತದ ಜೋಡಿ ಎರಡನೇ ಗೇಮ್ ಅನ್ನು 21-18 ಅಂತರದಿಂದ ಗೆದ್ದುಕೊಂಡು ಮೂರು ಹಾಗೂ ಅಂತಿಮ ಸುತ್ತಿಗೆ ಕಾಲಿಟ್ಟಿತು. ಈ ನಿರ್ಣಾಯಕ ಸುತ್ತಿನಲ್ಲಿ ಚೀನಾದ ಜೋಡಿ ಅಂತಿಮವಾಗಿ 21-19 ಅಂತರದಿಂದ ಗೆಲುವು ದಾಖಲಿಸಿ ಪ್ರಶಸ್ತಿಗೆ ಮುತ್ತಿಕ್ಕಿತು.

ಈ ಗೆಲುವಿನೊಂದಿಗೆ ಲಿಯಾಂಗ್ ಹಾಗೂ ವಾಂಗ್ ಅವರು ಏಷ್ಯನ್‌ ಗೇಮ್ಸ್‌ನಲ್ಲಿ ಭಾರತದ ಜೋಡಿ ವಿರುದ್ಧದ ಸೋಲಿಗೆ ಸೇಡು ತೀರಿಸಿಕೊಂಡರು. ಫೈನಲ್‌ನಲ್ಲಿ ಭಾರತದ ಶಟ್ಲರ್‌ಗಳು ತಮ್ಮ ಶ್ರೇಷ್ಠ ಪ್ರದರ್ಶನ ನೀಡುವಲ್ಲಿ ವಿಫಲರಾದರು.

ಸಾತ್ವಿಕ್ ಹಾಗೂ ಚಿರಾಗ್ 2023ನೇ ವರ್ಷದಲ್ಲಿ ಬ್ಯಾಡ್ಮಿಂಟನ್ ಏಷ್ಯನ್ ಚಾಂಪಿಯನ್‌ಶಿಪ್, ಇಂಡೋನೇಷ್ಯಾ ಸೂಪರ್-1000, ಕೊರಿಯಾ ಸೂಪರ್ 500, ಸ್ವಿಸ್ ಸೂಪರ್ 300 ಹಾಗೂ ಏಷ್ಯನ್‌ ಗೇಮ್ಸ್‌ನಲ್ಲಿ ಚಿನ್ನದ ಪದಕ ಜಯಿಸಿದ್ದರು.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!