ದುಬೈ: ವೃತ್ತಿ ಜೀವನದ ಉತ್ತುಂಗದಲ್ಲಿರುವ ಕೊಹ್ಲಿ ಹಾಗೂ ವಿಲಿಯಮ್ಸನ್ ಐಸಿಸಿ ಟೂರ್ನಿಗಳಲ್ಲಿ ಮತ್ತೊಮ್ಮೆ ಫೈನಲ್ ಪಂದ್ಯ ಆಡಲು ಸಿದ್ದವಾಗಿದ್ದಾರೆ.
ಐಸಿಸಿ ಟೂರ್ನಿಗಳಲ್ಲಿ ಇಬ್ಬರು ತಮ್ಮ ತಂಡದ ಯಶಸ್ಸಿಗೆ ಅಪಾರ ಕೊಡುಗೆ ಸಲ್ಲಿಸಿದ್ದಾರೆ.
ಈ ಹಿಂದೆ 2008ರ ಅಂಡರ್-19 ವಿಶ್ವಕಪ್‌ನಲ್ಲಿ ಕೊಹ್ಲಿ ಹಾಗೂ ವಿಲಿಯಮ್ಸನ್ ನಾಯಕರಾಗಿ ತಮ್ಮ ತಂಡವನ್ನು ಮುನ್ನಡೆಸಿದ್ದರು. ಅದರಲ್ಲಿ ಕೊಹ್ಲಿ ನೇತೃತ್ವದ ಭಾರತ ತಂಡ ಚಾಂಪಿಯನ್ ಆಗಿತ್ತು.
ಆದರೆ, 2021ರ ವಿಶ್ವ ಟೆಸ್ಟ್ ಚಾಂಪಿಯನ್‌ಷಿಪ್ ಫೈನಲ್‌ನಲ್ಲಿ ವಿಲಿಯಮ್ಸನ್ ಮುಂದಾಳತ್ವದ ನ್ಯೂಜಿಲೆಂಡ್ ತಂಡ ಮೊದಲ ಬಾರಿಗೆ ಟೆಸ್ಟ್ ಚಾಂಪಿಯನ್ ಪಟ್ಟ ಆಲಂಕರಿಸಿತ್ತು. ಇದರೊಂದಿಗೆ ಭಾರತದ ಚೊಚ್ಚಲ ಪ್ರಶಸ್ತಿ ಕನಸು ನುಚ್ಚು ನೂರಾಯಿತು.
ಈಗ ಮತ್ತೊಮ್ಮೆ ಚಾಂಪಿಯನ್ಸ್ ಟ್ರೋಫಿ ಫೈನಲ್‌ನಲ್ಲಿ ಇಬ್ಬರು ಎದುರಾಗಲಿದ್ದಾರೆ. ಈ ಸಲ ನಾಯಕತ್ವದ ಜವಾಬ್ದಾರಿ ಇಲ್ಲದಿದ್ದರೂ ಇಬ್ಬರು ತಂಡಗಳ ಅವಿಭಾಜ್ಯ ಅಂಗವಾಗಿದ್ದಾರೆ.





