ದುಬೈ: ಬಹುನಿರೀಕ್ಷಿತ ಬದ್ದ ವೈರಿಗಳ ಮುಖಾಮುಖಿಗೆ ವೇದಿಕೆ ಸಿದ್ದವಾಗಿ. ಪಾಕಿಸ್ತಾನ ಆಯೋಜಕತ್ವದಲ್ಲಿ ನಡೆಯುತ್ತಿರುವ ಚಾಂಪಿಯನ್ಸ್ ಟ್ರೋಫಿ ಟೂರ್ನಿಯಲ್ಲಿ ಭಾರತ ಹಾಗೂ ಪಾಕಿಸ್ತಾನ ಮುಖಾಮುಖಿಯಾಗಲಿದ್ದು, ಕ್ರಿಕೆಟ್ ಅಭಿಮಾನಿಗಳಿಗೆ ರಸದೌತಣ ಸಿಗಲಿದೆ.
ಅಂದಹಾಗೆ ಇಂದು ಮದ್ಯಾಹ್ನ 2.30 ಗಂಟೆಗೆ ದುಬೈನ ಅಂತರಾಷ್ಟ್ರೀಯ ಕ್ರೀಡಾಂಗಣದಲ್ಲಿ ಭಾರತ ಮತ್ತು ಪಾಕ್ ಕಾದಾಟ ನಡೆಸಲಿದೆ. ಇನ್ನು ಈ ಐತಿಹಾಸಿಕ ಕಾದಾಟಕ್ಕೆ ಕ್ರೀಡಾಲೋಕವೇ ಕಾದುಕೂತಿರುವುದು ಅಚ್ಚರಿ ಸಂಗತಿ.
ಇನ್ನು ಚಾಂಪಿಯನ್ಸ್ ಟ್ರೋಫಿಯಲ್ಲಿ ಈ ಇಬ್ಬರ ಈವರೆಗಿನ ಮುಖಾಮುಖಿ ಗಮನಿಸುವುದಾದರೇ, ಇತ್ತಂಡಗಳು ಈವರೆಗೆ ಐದು ಬಾರಿ ಮುಖಾಮುಖಿಯಾಗಿದ್ದು, ಅದರಲ್ಲಿ ಬರೋಬ್ಬರಿ ಮೂರು ಬಾರಿ ಗೆಲುವು ದಾಖಲಿಸಿರುವ ಪಾಕಿಸ್ತಾನ್ ಮುನ್ನಡೆ ಕಾಯ್ದುಕೊಂಡಿದೆ.
ಟೀಂ ಇಂಡಿಯಾ 2013, 2017ರಲ್ಲಿ ಬಿಟ್ಟರೇ ಇನ್ನೆಲ್ಲಿಯೂ ಗೆಲುವು ದಾಖಲಿಸಿಲ್ಲ. ಉಳಿದಂತೆ ಮೂರು ಬಾರಿ ಪಾಕಿಸ್ತಾನ ಗೆಲುವು ದಾಖಲಿಸಿದೆ. 2017ರ ಚಾಂಪಿಯನ್ಸ್ ಟ್ರೋಫಿ ಫೈನಲ್ಸ್‌ನಲ್ಲಿ ಭಾರತ ಮಣಿಸಿ ಟ್ರೋಫಿಗೆ ಮುತ್ತಿಟ್ಟಿದೆ.
ಮುಖಾಮುಖಿ ವಿವರ:
2004 ರಲ್ಲಿ ಬರ್ಮಿಂಗ್‌ಹ್ಯಾಮ್‌ನಲ್ಲಿ ಮೊದಲ ಬಾರಿಗೆ ಚಾಂಪಿಯನ್ಸ್ ಟ್ರೋಫಿಯಲ್ಲಿ ಭಾರತ ಹಾಗೂ ಪಾಕಿಸ್ತಾನ ಮುಖಾಮುಖಿಯಾಗಿತ್ತು. ಈ ಪಂದ್ಯದಲ್ಲಿ ಟೀಂ ಇಂಡಿಯಾ 200 ರನ್ ಗಳಿಗೆ ಆಲ್‌ಔಟ್ ಆದರೇ, ಇದನ್ನು ಚೇಸ್ ಮಾಡಿದ ಪಾಕ್ 3 ಅಂತರದ ಗೆಲುವು ದಾಖಲಿಸಿತ್ತು.
2009ರಲ್ಲಿ ಸೆಂಚೂರಿಯನ್ ನಲ್ಲಿ ಭಾರತ ಹಾಗೂ ಪಾಕ್ ಎರಡನೇ ಬಾರಿಗೆ ಮುಖಾಮುಖಿಯಾಗಿತ್ತು. ಮೊದಲು ಬ್ಯಾಟ್ ಮಾಡಿದ್ದ ಪಾಕ್ 303 ರನ್ ಬಾರಿಸಿದರೇ, ಈ ಮೊತ್ತ ಬೆನ್ನತ್ತಿದ್ದ ಭಾರತ ಕೇವಲ 248 ರನ್ ಗಳಿಗೆ ಆಲ್‌ಔಟ್ ಆಗಿ 54 ರನ್‌ಗಳ ಅಂತರದಿಂದ ಸೋಲು ಕಂಡಿತ್ತು.
2013ರಲ್ಲಿ ಬರ್ಮಿಂಗ್ ಹ್ಯಾಮ್‌ನಲ್ಲಿ ಮೂರನೇ ಬಾರಿಗೆ ಇತ್ತಂಡಗಳು ಮುಖಾಮುಖಿಯಾಗಿದ್ದವು. ಟೀಂ ಇಂಡಿಯಾ ಪ್ರದರ್ಶನಕ್ಕೆ ಮಂಕಾದ ಪಾಕ್ 165 ರನ್‌ಗೆ ಸರ್ವಪತನ ಕಂಡಿತು. ಅದ್ಯಾಗೂ ಮಳೆಯಿಂದಾಗಿ ಡಕ್ವರ್ಥ್ ಲೂಯಿಸ್ ನಿಯಮದಡಿ ಭಾರತಕ್ಕೆ 8 ವಿಕೆಟ್‌ಗಳ ಗೆಲುವು ಸಿಕ್ಕಿತು. ಈ ಟೂರ್ನಿಯಲ್ಲಿ ಧೋನಿ ನಾಯಕತ್ವದಲ್ಲಿ ಭಾರತ ತಂಡ ಟ್ರೋಫಿ ಎತ್ತಿ ಹಿಡಿದಿತ್ತು.
2017 ರಲ್ಲಿ ಬರ್ಮಿಂಗ್ ಹ್ಯಾಮ್‌ನಲ್ಲಿ ಬಿ ಗುಂಪಿನಲ್ಲಿ ಇತ್ತಂಡಗಳು ಎದುರಾಗಿದ್ದವು. ಮೊದಲು ಬ್ಯಾಟ್ ಮಾಡಿದ ಭಾರತ 319 ರನ್ ಬಾರಿಸಿದರೇ, ಈ ಮೊತ್ತ ಬೆನ್ನತ್ತಿದ ಪಾಕ್ ಕೇವಲ 164 ರನ್ ಗಳಿಸಿ 124 ರನ್‌ಗಳ ಅಂತರದ ಹೀನಾಯ ಸೋಲು ಕಂಡಿತು.
2017ರಲ್ಲಿ ಫೈನಲ್ಸ್‌ನಲ್ಲಿ ಇತ್ತಂಡಗಳು ಎರಡನೇ ಬಾರಿಗೆ ಮುಖಾಮುಖಿಯಾಗಿದ್ದವು. ಆರಂಭದಿಂದಲೇ ಬಿರುಸಿನ ಆಟವಾಡಿದ ಪಾಕ್ ಬರೋಬ್ಬರಿ 338 ರನ್ ಕಲೆಹಾಕಿತು. ಈ ಮೊತ್ತ ಬೆನ್ನತ್ತಿದ ಭಾರತ 158 ರನ್‌ಗಳಿಗೆ ಸರ್ವಪತನ ಕಂಡು 180 ರನ್‌ಗಳ ಭಾರೀ ಅಂತರದಿಂದ ಸೋಲು ಕಾಣುವ ಮೂಲಕ ಟ್ರೋಫಿ ಕೈಚೆಲ್ಲಿತು.





