Mysore
23
clear sky

Social Media

ಸೋಮವಾರ, 02 ಮಾರ್ಚ್ 2026
Light
Dark

ಚಾಂಪಿಯನ್ಸ್‌ ಟ್ರೋಫಿ 2025: ಭಾರತಕ್ಕೆ 242 ರನ್‌ಗಳ ಗುರಿ

ದುಬೈ: ಇಲ್ಲಿನ ಅಂತರಾಷ್ಟ್ರೀಯ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಚಾಂಪಿಯನ್ಸ್‌ ಟ್ರೋಫಿ ಟೂರ್ನಿಯ ಕ್ರಿಕೆಟ್‌ ಪಂದ್ಯದಲ್ಲಿ ಪಾಕಿಸ್ತಾನ ತಂಡ ಭಾರತಕ್ಕೆ 242 ರನ್‌ಗಳ ಗುರಿ ನೀಡಿದೆ.

ಟಾಸ್‌ ಗೆದ್ದ ಪಾಕಿಸ್ತಾನ ತಂಡದ ನಾಯಕ ರಿಜ್ವಾನ್‌ ಬ್ಯಾಟಿಂಗ್‌ ಆಯ್ಕೆ ಮಾಡಿಕೊಂಡರು.

ಪಾಕಿಸ್ತಾನ 49.4 ಓವರ್‌ಗಳಲ್ಲಿ ತನ್ನೆಲ್ಲಾ ವಿಕೆಟ್‌ ಕಳೆದುಕೊಂಡು 241ರನ್‌ಗಳಿಸಿ, ಭಾರತಕ್ಕೆ 242ರನ್‌ಗಳ ಟಾರ್ಗೆಟ್‌ ನೀಡಿದೆ.

ಪಾಕಿಸ್ತಾನ ತಂಡದ ಸೌದ್‌ ಶಕೀಲ್‌ 62, ಮಿಹಮ್ಮದ್‌ ರಿಜ್ವಾನ್‌ 46, ಖುಷ್ದಿಲ್‌ ಶಾ 38 ರನ್‌ಗಳಿಸಿ ತಂಡ 200ರ ಗಡಿದಾಟಲು ನೆರವಾದರು.

ಭಾರತದ ತಂಡದ ಪರ ಉತ್ತಮ ದಾಳಿ ನಡೆಸಿದ ಕುಲದೀಪ್‌ ಯಾದವ್‌ 3, ಹಾರ್ದಿಕ್‌ ಪಾಂಡ್ಯ 2, ಜಡೇಜಾ, ರಾಣಾ ಹಾಗೂ ಅಕ್ಷರ್‌ ತಲಾ ಒಂದು ವಿಕೆಟ್‌ ಪಡೆದರು.

Tags:
error: Content is protected !!