Mysore
19
broken clouds

Social Media

ಶನಿವಾರ, 21 ಡಿಸೆಂಬರ್ 2024
Light
Dark

ಹುಟ್ಟು ಹಬ್ಬದ ಸಂಭ್ರಮದಲ್ಲಿ ಬುಮ್ರಾ

ಇಂಡಿಯನ್‌ ಕ್ರಿಕೆಟ್‌ ಟೀಮ್‌ ನ ಆಟಗಾರ ಜಸ್ಪ್ರೀತ್‌ ಬುಮ್ರಾ ಇಂದು ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ.

ಇಂಡಿಯನ್‌ ಕ್ರೀಟ್‌ ಟೀಮ್ ನ ಸ್ಫೊಟಕ ಬೌಲರ್‌ ಬುಮ್ರಾ ಇಂದು ತಮ್ಮ 30 ನೇ ವರ್ಷದ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ.
ಬುಮ್ರಾ ಅವರು ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಹಾಗೂ ಟೀ ಇಂಡಿಯಾ ಮಾತ್ರವಲ್ಲದೇ ವಿಶ್ವ ಕ್ರಿಕೇಟ್‌ ನಲ್ಲಿಯೂ ಸಹ ಹೆಸರು ಮಾಡಿದ್ದಾರೆ.

ಅತೀ ಕಡಿಮೆ ಅವಧಿಯಲ್ಲಿ ಇಂಡಿಯನ್‌ ಟೀಮ್‌ ನ ಪ್ರಮುಖ ಬೌಲರ್‌ ಆಗಿ ಗುರುತಿಸಿಕೊಂಡ ಬುಮ್ರಾ ಇತ್ತೀಚೆಗೆ ನಡೆದ ಏಕದಿನ ವಿಶ್ವ ಕಪ್‌ ನಲ್ಲಿ 11 ಪಂದ್ಯಗಳನ್ನಾಡಿ 20 ವಿಕೆಟ್‌ ಗಳಿಸಿದ್ದರು. ಅಂತೆಯೇ ಭಾರತವನ್ನು ಫೈನಲ್‌ ವರೆಗೆ ಕೊಂಡೊಯ್ಯುವುದರಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ್ದರು.

ತಮ್ಮ ಅತ್ಯುತ್ತಮ ಬೌಲಿಂಗ್‌ ಮೂಲಕವೇ ಅಪಾರ ಅಭಿಮಾನಿಗಳನ್ನು ಸಂಪಾದಿಸಿರುವ ಬುಮ್ರಾ, ಭಾರತ ಕ್ರಿಕೆಟ್‌ ಇತಿಹಾಸದಲ್ಲಿ ಹ್ಯಾಟ್ರಿಕ್‌ ವಿಕೆಟ್‌ ಪಡೆದ ಮೂರನೆ ಆಟಗಾರನಾಗಿದ್ದಾರೆ. 2019 ರಲ್ಲಿ ನಡೆದ ವೆಸ್ಟ್‌ ಇಂಡೀಸ್‌ ಪ್ರವಾಸದ ಸಮಯದಲ್ಲಿ ಜಮೈಕಾ ಮೈದಾನದಲ್ಲಿ ನಡೆದ ಸರಣಿಯ ಎರಡನೇ ಟೆಸ್ಟ್‌ ಪಂದ್ಯದಲ್ಲಿ ಜಸ್ಪ್ರೀತ್‌ ಬುಮ್ರಾ ಈ ಸಾಧನೆಯನ್ನು ಮುಡಿಗೇರಿಸಿಕೊಂಡಿದ್ದರು.

ಅದಷ್ಟೇ ಅಲ್ಲದೇ 2019ರಲ್ಲಿಯೇ ಮತ್ತೆ ಏಕದಿನ ಪಂದ್ಯದಲ್ಲಿ ತಮ್ಮ 100 ವಿಕೆಟ್‌ ಪೂರೈಸಿದ್ದರು. ಈ ಮೂಲಕ ಈ ಸಾಧನೆ ಮಾಡಿದ 21 ನೇ ಬೌಲರ್‌ ಎಂಬ ಹೆಗ್ಗಳಿಕೆಗೆ ಬುಮ್ರಾ ಪಾತ್ರರಾಗಿದ್ದರು.

ಬುಮ್ರಾ ಭಾರತೀಯ ಬೌಲರ್‌ ಆಗಿ ತಮ್ಮ ಟೆಸ್ಟ್‌ ನ ಮೊದಲ ವರ್ಷದಲ್ಲಿ ಅತಿ ಹೆಚ್ಚು ವಿಕೆಟ್‌ ಗಳನ್ನು ಪಡೆಯುವ ಮೂಲಕ ನಂಬರ್‌ 1 ಸ್ಥಾನವನ್ನು ಪಡೆದುಕೊಂಡಿದ್ದರು.

2018 ರಲ್ಲಿ ಟೆಸ್ಟ್‌ ಕ್ರಿಕೆಟ್‌ ನಲ್ಲಿ ಬುಮ್ರಾ ಅವರು 48 ಟೆಸ್ಟ್‌ ವಿಕೆಟ್‌ ಗಳನ್ನು ಪಡೆದಿದ್ದರು. ಈ ಮೂಲಕ ಟೀಂ ಇಂಡಿಯಾದ ಮಾಜಿ ಆಟಗಾರ ದಿಲೀಪ್‌ ದೋಷಿ ಅವರ ದಾಖಲೆ ಮುರಿದಿದ್ದರು.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ