ಅಡಿಲೇಡ್ ಓವಲ್ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದ ಭಾರತ ಮತ್ತು ಆಸ್ಟ್ರೇಲಿಯಾ ತಂಡಗಳ ನಡುವಿನ ಬಾರ್ಡರ್ ಗವಾಸ್ಕರ್ ಟ್ರೋಫಿಯ ದ್ವಿತೀಯ ಪಂದ್ಯದಲ್ಲಿ ಟೀಮ್ ಇಂಡಿಯಾ ಹೀನಾಯ ಸೋಲನ್ನು ಕಂಡು ಪಿಂಕ್ ಬಾಲ್ ಟೆಸ್ಟ್‌ನಲ್ಲಿನ ತನ್ನ ಕಳಪೆ ಅಭಿಯಾನವನ್ನು ಮುಂದುವರಿಸಿದೆ.
ಮೊದಲ ಇನ್ನಿಂಗ್ಸ್ ಹಾಗೂ ಎರಡನೇ ಇನ್ನಿಂಗ್ಸ್ ಎರಡರಲ್ಲೂ ಕಳಪೆ ಪ್ರದರ್ಶನ ನೀಡಿದ ಭಾರತ ಆಸ್ಟ್ರೇಲಿಯಾಗೆ 19 ರನ್‌ಗಳ ಗುರಿಯನ್ನು ನೀಡಿತ್ತು. ಈ ಅತ್ಯಲ್ಪ ಗುರಿಯನ್ನು ಯಾವುದೇ ವಿಕೆಟ್ ಕಳೆದುಕೊಳ್ಳದೇ ಬಾರಿಸಿದ ಆಸ್ಟ್ರೇಲಿಯಾ 10 ವಿಕೆಟ್‌ಗಳ ಭರ್ಜರಿ ಗೆಲುವನ್ನು ಕಂಡು ಪರ್ತ್ ಟೆಸ್ಟ್ ಸೋಲಿಗೆ ಸೇಡು ತೀರಿಸಿಕೊಂಡಿದೆ. ಈ ಮೂಲಕ 5 ಪಂದ್ಯಗಳ ಈ ಸರಣಿ 1-1 ಸಮಬಲ ಸಾಧಿಸಿದೆ.
ಸ್ಕೋರ್‌ಕಾರ್ಡ್ ಮುಂದಿದೆ:
ಭಾರತದ ಮೊದಲ ಇನ್ನಿಂಗ್ಸ್ (180/10): ತಂಡದ ಪರ ಆರಂಭಿಕ ಆಟಗಾರರಾಗಿ ಕಣಕ್ಕಿಳಿದ ಯಶಸ್ವಿ ಜೈಸ್ವಾಲ್ ಡಕ್‌ಔಟ್ ಆದರೆ, ಕೆಎಲ್ ರಾಹುಲ್ 37 ರನ್ ಗಳಿಸಿದರು. ಇನ್ನುಳಿದಂತೆ ಶುಭ್‌ಮನ್ ಗಿಲ್ 31, ವಿರಾಟ್ ಕೊಹ್ಲಿ 7, ರಿಷಭ್ ಪಂತ್ 21, ರೋಹಿತ್ ಶರ್ಮಾ 3, ನಿತಿಶ್ ರೆಡ್ಡಿ 42, ರವಿಚಂದ್ರನ್ ಅಶ್ವಿನ್ 22, ಹರ್ಷಿತ್ ರಾಣಾ ಡಕ್‌ಔಟ್, ಜಸ್‌ಪ್ರೀತ್ ಬುಮ್ರಾ ಡಕ್‌ಔಟ್ ಮತ್ತು ಮೊಹಮ್ಮದ್ ಸಿರಾಜ್ ಅಜೇಯ 4 ರನ್ ಕಲೆಹಾಕಿದರು.
ಆಸ್ಟ್ರೇಲಿಯಾ ಪರ ಮಿಚೆಲ್ ಸ್ಟಾರ್ಕ್ 6 ವಿಕೆಟ್ ಪಡೆದು ಭಾರತದ ಪಾಲಿಗೆ ಕಂಟಕವಾಗಿ ಪರಿಣಮಿಸಿದರೆ, ಪ್ಯಾಟ್ ಕಮಿನ್ಸ್ ಹಾಗೂ ಬೋಲ್ಯಾಂಡ್ ತಲಾ ಎರಡು ವಿಕೆಟ್ ಪಡೆದರು.
ಆಸ್ಟ್ರೇಲಿಯಾ ಮೊದಲ ಇನ್ನಿಂಗ್ಸ್ (337/10): ಉಸ್ಮಾನ್ ಖವಾಜಾ 13, ಮೆಕ್‌ಸ್ವೀನಿ 39, ಲ್ಯಾಬುಶೆನ್ 64, ಸ್ಟೀವನ್ ಸ್ಮಿತ್ 2, ಟ್ರಾವಿಸ್ ಹೆಡ್ 141, ಮಿಚೆಲ್ ಮಾರ್ಷ್ 9, ಅಲೆಕ್ಸ್ ಕ್ಯಾರಿ 15, ಪ್ಯಾಟ್ ಕಮಿನ್ಸ್ 12, ಮಿಚೆಲ್ ಸ್ಟಾರ್ಕ್ 18, ಬೋಲಾಂಡ್ ಡಕ್‌ಔಟ್ ಹಾಗೂ ನಾಥನ್ ಲಿಯಾನ್ ಅಜೇಯ 4 ರನ್ ಗಳಿಸಿದರು.
ಭಾರತದ ಪರ ಜಸ್‌ಪ್ರೀತ್ ಬುಮ್ರಾ 4 ವಿಕೆಟ್, ಮೊಹಮ್ಮದ್ ಸಿರಾಜ್ 4 ವಿಕೆಟ್, ನಿತಿಶ್ ರೆಡ್ಡಿ ಹಾಗೂ ರವಿಚಂದ್ರನ್ ಅಶ್ವಿನ್ ತಲಾ ಒಂದೊಂದು ವಿಕೆಟ್ ಪಡೆದರು.
ಭಾರತ ಎರಡನೇ ಇನ್ನಿಂಗ್ಸ್: ಯಶಸ್ವಿ ಜೈಸ್ವಾಲ್ 24, ಕೆಎಲ್ ರಾಹುಲ್ 7, ಶುಭ್‌ಮನ್ ಗಿಲ್ 28, ವಿರಾಟ್ ಕೊಹ್ಲಿ 11, ರೋಹಿತ್ ಶರ್ಮಾ 6, ರಿಷಭ್ ಪಂತ್ 28, ನಿತಿಶ್ ರೆಡ್ಡಿ 42, ರವಿಚಂದ್ರನ್ ಅಶ್ವಿನ್ 7, ಹರ್ಷಿತ್ ರಾಣಾ ಡಕ್‌ಔಟ್, ಮೊಹಮ್ಮದ್ ಸಿರಾಜ್ 7 ಮತ್ತು ಜಸ್‌ಪ್ರೀತ್ ಬುಮ್ರಾ ಅಜೇಯ 2 ರನ್ ಗಳಿಸಿದರು.
ಆಸ್ಟ್ರೇಲಿಯಾ ಪರ ನಾಯಕ ಪ್ಯಾಟ್ ಕಮಿನ್ಸ್ 5 ವಿಕೆಟ್, ಸ್ಕಾಟ್ ಬೋಲ್ಯಾಂಡ್ 3 ಮತ್ತು ಮಿಚೆಲ್ ಸ್ಟಾರ್ಕ್ 2 ವಿಕೆಟ್ ಪಡೆದರು.
ಆಸ್ಟ್ರೇಲಿಯಾ ಎರಡನೇ ಇನ್ನಿಂಗ್ಸ್ ( 19/0): ನಾಥನ್ ಮೆಕ್‌ಸ್ವೀನಿ ಅಜೇಯ 10 ರನ್ ಮತ್ತು ಉಸ್ಮಾನ್ ಖವಾಜಾ ಅಜೇಯ 9 ರನ್.
ಪಂದ್ಯಶ್ರೇಷ್ಠ: ಟ್ರಾವಿಸ್ ಹೆಡ್