ಅಡಿಲೇಡ್: ಬಾರ್ಡರ್- ಗವಸ್ಕಾರ್ ಟೆಸ್ಟ್ ಸರಣಿಯ ಎರಡನೇ ಪಂದ್ಯವು ನಾಳೆ ( ಡಿ.6 ) ಅಡಿಲೇಡ್‌ನಲ್ಲಿ ಆರಂಭವಾಗಲಿದ್ದು, ಮೊದಲನೇ ಟೆಸ್ಟ್ ಪಂದ್ಯದಲ್ಲಿ ಇಂಡಿಯಾ ವಿರುದ್ಧ 295 ರನ್‌ಗಳ ಅಂತರದಲ್ಲಿ ಹೀನಾಯ ಸೋಲು ಕಂಡಿದ್ದ ಆಸ್ಟ್ರೇಲಿಯಾ ಸೇಡು ತೀರಿಸಿಕೊಳ್ಳಲು ಕಾತರವಾಗಿದೆ.
ಶುಕ್ರವಾರ ಆರಂಭವಾಗಲಿರುವ ಪಿಂಕ್ ಬಾಲ್ ಟೆಸ್ಟ್ ಪಂದ್ಯಕ್ಕಾಗಿ ಆಸ್ಟ್ರೇಲಿಯಾ ತಂಡ ಆಡುವ ಇಲವೆನ್ ಆಟಗಾರರನ್ನು ಘೋಷಿಸಿದೆ. ಈ ಪಂದ್ಯದಲ್ಲಿ ಒಂದು ಬದಲಾವಣೆ ಮಾಡಿದ್ದು ಹೇಜಲ್‌ವುಡ್ ಸ್ಥಾನಕ್ಕೆ ಸ್ಕಾಟ್ ಬೋಲ್ಯಾಂಡ್ ಸೇರ್ಪಡೆಯಾಗಿದ್ದಾರೆ.
ಪರ್ತ್‌ನಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯದಲ್ಲಿ ಆಸ್ಟ್ರೇಲಿಯಾದ ವೇಗಿ ಜೋಶ್ ಹೇಜಲ್‌ವುಡ್ ಗಾಯವಾಗಿ ಹೊರಗುಳಿದಿದ್ದು, ಅವರ ಸ್ಥಾನಕ್ಕೆ ಸ್ಕಾಟ್ ಬೋಲ್ಯಾಂಡ್ ಸೇರ್ಪಡೆಯಾಗಿದ್ದಾರೆ.
ಈ ಪಂದ್ಯದಲ್ಲಿ ಆಸ್ಟ್ರೇಲಿಯಾದ ಪರ ಆರಂಭಿಕರಾಗಿ ಉಸ್ಮಾನ್ ಖ್ವಾಜಾ ಹಾಗೂ ನಾಥನ್ ಮೆಕ್‌ಸ್ವೀನಿ ಇನ್ನಿಂಗ್ಸ್ ಆರಂಭಿಸಲಿದ್ದು, ನಂತರದ ಬ್ಯಾಟರ್‌ಗಳಾಗಿ ಮಾರ್ನಶ್ ಲಬುಶೇನ್, ಸ್ಟೀವ್ ಸ್ಮಿತ್ ಆಡಲಿದ್ದಾರೆ. ಮಧ್ಯಮ ಕ್ರಮಾಂಕದಲ್ಲಿ ಟ್ರಾವಿಸ್ ಹೆಡ್, ವಿಕೆಟ್ ಕೀಪರ್ ಅಲೆಕ್ಸ್ ಕ್ಯಾರಿ ಬ್ಯಾಟ್ ಬೀಸಲಿದ್ದಾರೆ.
ಬೌಲಿಂಗ್ ವಿಭಾಗದಲ್ಲಿ ವೇಗಿಗಳಾಗಿ ಪ್ಯಾಟ್ ಕಮಿನ್ಸ್, ಮಿಚೆಲ್ ಸ್ಟಾರ್ಕ್, ಸ್ಕಾಟ್ ಬೋಲ್ಯಾಂಡ್ ತಮ್ಮ ಕರಾಮತ್ತು ತೋರಿಸಲು ಸಜ್ಜಾಗಿದ್ದು ಸ್ಪೀನ್ ವಿಭಾಗದಲ್ಲಿ ನಾಥನ್ ಲಿಯಾನ್ ಇದ್ದಾರೆ.
ಆಸ್ಟ್ರೇಲಿಯಾ ಪ್ಲೇಯಿಂಗ್ ಇಲವೆನ್: ಉಸ್ಮಾನ್ ಖ್ವಾಜಾ, ನಾಥನ್ ಮೆಕ್‌ಸ್ವೀನಿ, ಮಾರ್ನಸ್ ಲಾಬುಶೇನ್,ಸ್ಟೀವ್ ಸ್ಮಿತ್, ಟ್ರಾವಿಸ್ ಹೆಡ್, ಮಿಚ್ ಮಾರ್ಷ್, ಅಲೆಕ್ಸ್ ಕ್ಯಾರಿ(ವಿಕೆಟ್ ಕೀಪರ್), ಪ್ಯಾಟ್ ಕಮಿನ್ಸ್ (ನಾಯಕ), ಮಿಚೆಲ್ ಸ್ಟಾರ್ಕ್, ನಾಥನ್ ಲಿಯಾನ್, ಸ್ಕಾಟ್ ಬೋಲ್ಯಾಂಡ್





