Mysore
29
overcast clouds

Social Media

ಭಾನುವಾರ, 22 ಡಿಸೆಂಬರ್ 2024
Light
Dark

ಜೆರ್ಸಿ ನಂ.7 ನಿವೃತ್ತಿಗೊಳಿಸಿದ ಬಿಸಿಸಿಐ: ವರದಿ

ನವದೆಹಲಿ : ಭಾರತ ತಂಡದ ಶ್ರೇಷ್ಠ ನಾಯಕ ಮಹೇಂದ್ರ ಸಿಂಗ್‌ ಧೋನಿ ಅವರಿಗೆ ಬಿಸಿಸಿಐ (ಭಾರತೀಯ ಕ್ರಿಕೆಟ್‌ ನಿಯಂತ್ರಣ ಮಂಡಳಿ) ವಿಶೇಷ ಗೌರವ ಸಲ್ಲಿಸಿದೆ. ಭಾರತ ತಂಡ ವಿಶ್ವಕಪ್‌ ವಿಜೇತ ನಾಯಕ ಧೋನಿ ಅವರು ಧರಿಸುತ್ತಿದ್ದ 7ನೇ ಕ್ರಮಾಂಕದ ಜೆರ್ಸಿಯನ್ನು ಬಿಸಿಸಿಐ ನಿವೃತ್ತಿಗೊಳಿಸಿದೆ ಎಂದು ಇಂಡಿಯನ್‌ ಎಕ್ಸ್‌ಪ್ರೆಸ್‌ ವರದಿ ಮಾಡಿದೆ.

ಭಾರತ ತಂಡದ ಆಟಗಾರರಿಗೆ ಇನ್ನುಮುಂದೆ 7ನೇ ಕ್ರಮಾಕದ ಜೆರ್ಸಿ ಲಭ್ಯವಿರುವುದಿಲ್ಲ ಎಂದು ವರದಿಯಾಗಿದೆ.

ಐಸಿಸಿ (ಇಂಟರ್‌ನ್ಯಾಷನಲ್‌ ಕ್ರಿಕೆಟ್‌ ಕೌನ್ಸಿಲ್‌) ಆಯೋಜಿಸುವ ಟೂರ್ನಿಗಳಲ್ಲಿ ಭಾರತ ಪರ ಅತ್ಯಂತ ಯಶಸ್ವಿ ನಾಯಕ ಎಂಬ ಹೆಗ್ಗಳಿಕೆಗೆ ಪಾತ್ರರಾಗಿರುವ ಧೋನಿ ಅವರ ಜೆರ್ಸಿ ನಂ.7ನ್ನು ಮೀಸಲಿಡಲಾಗಿದೆ. ಭಾರತ ಕ್ರಿಕೆಟ್‌ ತಂಡಕ್ಕೆ ವಿಕೇಟ್‌ ಕೀಪರ್‌ ನಾಯಕನಾಗಿ ಮಹೇಂದ್ರ ಸಿಂಗ್‌ ಧೋನಿ ನೀಡಿರುವ ಅಪಾರ ಕೊಡುಗೆಯನ್ನು ಗೌರವಿಸಲು ನಂ.7ನ್ನು ನಿವೃತ್ತ ಪಟ್ಟಿಗೆ ಸೇರಿಸಲು ಬಿಸಿಸಿಐ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಮೂಲಗಳು ತಿಳಿಸಿದೆ.

2019ರ ವಿಶ್ವಕಪ್‌ ಬಳಿಕ ಯಾವುದೇ ಅಂತರಾಷ್ಟ್ರೀಯ ಪಂದ್ಯಗಳಲ್ಲಿ ಸಕ್ರಿಯಗೊಳ್ಳದ ಮಹಿ, 2020ರ ಆಗಸ್ಟ್‌ 15 ರಂದು ಅಂತರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಸಲ್ಲಿಸಿದ್ದರು. ನಿವೃತ್ತಿಯ ನಂತರವು ಐಪಿಎಲ್‌ನಲ್ಲಿ ಸಕ್ರಿಯರಾಗಿರುವ ಮಹೇಂದ್ರ ಸಿಂಗ್‌ ಧೋನಿ ಅವರು, ಮುಂಬರುವ 2024ರ ಐಪಿಎಲ್‌ ನಲ್ಲಿ ಆಡಲು ಸಜ್ಜಾಗುತ್ತಿದ್ದಾರೆ.

ಕ್ರಿಕೆಟ್‌ ಲೆಜೆಂಡ್‌ ಸಚಿನ್‌ ತೆಂಡುಲ್ಕರ್‌ ಅವರ ಜೆರ್ಸಿ ನಂ.10ನ್ನು ಬಿಸಿಸಿಐ 2017 ರಲ್ಲಿ ಅಧಿಕೃತವಾಗಿ ನಿವೃತ್ತಿಗೊಳಿಸಿತ್ತು.

ಇನ್ನುಮುಂದೆ ನಂ.7 ಮತ್ತು ಜೆರ್ಸಿ ನಂ.10 ನ್ನು ಚೊಚ್ಚಲ ಪಂದ್ಯ ಆಡುವ ಆಟಗಾರರು ಸೇರಿದಂತೆ ಬೇರಾವ ಆಟಗಾರರಿಗೂ ಇದು ಲಭ್ಯವಿರುವುದಿಲ್ಲ ಎಂದು ಬಿಸಿಸಿಐ ತನ್ನ ನಿರ್ಧಾರವನ್ನು ರಾಷ್ಟ್ರೀಯ ತಂಡಕ್ಕೆ ತಿಳಿಸಿದೆ ಎಂದು ವರದಿಯಾಗಿದೆ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ