Mysore
15
overcast clouds

Social Media

ಸೋಮವಾರ, 22 ಡಿಸೆಂಬರ್ 2025
Light
Dark

ತವರು ಸರಣಿಗಳ ವೇಳಾಪಟ್ಟಿ ಬಿಡುಗಡೆ ಮಾಡಿದ ಬಿಸಿಸಿಐ

ಮುಂಬೈ: ಭಾರತ ಕ್ರಿಕೆಟ್‌ ತಂಡವು ತವರಿನಲ್ಲಿ ಆಡುವ 2025-26ನೇ ಸಾಲಿನ ಸರಣಿಯ ವೇಳಾಪಟ್ಟಿಯನ್ನು ಭಾರತ ಕ್ರಿಕೆಟ್‌ ನಿಯಂತ್ರಣ ಮಂಡಳಿ (ಬಿಸಿಸಿಐ) ಪ್ರಕಟಿಸಿದೆ.

2025ರ ಮೊದಲ ಋತುವಿನಲ್ಲಿ ಭಾರತ 4 ಟೆಸ್ಟ್‌ ಪಂದ್ಯಗಳನ್ನು ಅಹಮದಾಬಾದ್‌, ಕೋಲ್ಕತ್ತಾ, ನವದೆಹಲಿ ಮತ್ತು ಗುವಾಹಟಿಯಲ್ಲಿ ನಡೆಯಲಿದೆ.

ವೆಸ್ಟ್‌ಇಂಡೀಸ್‌ ವಿರುದ್ಧ ಆಕ್ಟೋಬರ್‌ 6ರಿಂದ ಆರಂಭವಾಗಲಿರುವ ಎರಡು ಟೆಸ್ಟ್‌ ಪಂದ್ಯಗಳನ್ನು ಭಾರತ ತಂಡವು ಅಹಮದಾಬಾದ್‌ ಮತ್ತು ಕೋಲ್ಕತ್ತದಲ್ಲಿ ಆಡಲಿದೆ.

ನವೆಂಬರ್‌ 18ರಿಂದ ದಕ್ಷಿಣ ಆಫ್ರಿಕಾ ವಿರುದ್ಧ ಆರಂಭವಾಗಲಿರುವ ಐಡಿಎಫ್‌ಸಿ ಫಸ್ಟ್‌ ಬ್ಯಾಂಕ್‌ ಟೆಸ್ಟ್‌ ಸರಣಿಯು ಐತಿಹಾಸಿಕವಾಗಿರುತ್ತದೆ. ಟೆಸ್ಟ್‌ ಪಂದ್ಯಗಳ ಜೊತೆಗೆ ಮೂರು ಏಕದಿನ ಮತ್ತು ಐದು ಟಿ20 ಸರಣಿಯನ್ನು ಆಡಲಿದೆ.

ವೇಳಾಪಟ್ಟಿ:

ವೆಸ್ಟ್‌ ಇಂಡಿಸ್‌, ಭಾರತ ಪ್ರವಾಸ:

* ಅಕ್ಟೋಬರ್‌ 6ರಿಂದ ಮೊದಲ ಟೆಸ್ಟ್‌- ಅಹಮದಾಬಾದ್‌

* ಅಕ್ಟೋಬರ್‌ 14ರಿಂದ ಎರಡನೇ ಟೆಸ್ಟ್‌- ಕೋಲ್ಕತ್ತ

ದಕ್ಷಿಣ ಆಫ್ರಿಕಾ, ಭಾರತ ಪ್ರವಾಸ:

* ನವೆಂಬರ್‌ 18ರಿಂದ ಮೊದಲ ಟೆಸ್ಟ್‌- ನವದೆಹಲಿ

* ನವೆಂಬರ್‌ 26ರಿಂದ ಎರಡನೇ ಟೆಸ್ಟ್‌- ಗುವಾಹಟಿ

* ನವೆಂಬರ್‌ 30ರಂದು ಮೊದಲ ಏಕದಿನ ಪಂದ್ಯ- ರಾಂಚಿ

* ಡಿಸೆಂಬರ್ 3ರಂದು ಎರಡನೇ ಏಕದಿನ ಪಂದ್ಯ- ರಾಯ್ಪುರ

* ಡಿಸೆಂಬರ್‌ 6ರಂದು ಮೂರನೇ ಏಕದಿನ ಪಂದ್ಯ- ವಿಶಾಖಪಟ್ಟಣ

* ಡಿಸೆಂಬರ್‌ 9ರಂದು ಮೊದಲ ಟಿ20 ಪಂದ್ಯ- ಕಟಕ್‌

* ಡಿಸೆಂಬರ್‌ 11ರಂದು ಎರಡನೇ ಟಿ20 ಪಂದ್ಯ- ಚಂಡೀಗಢ

* ಡಿಸೆಂಬರ್ 14ರಂದು ಮೂರನೇ ಟಿ20 ಪಂದ್ಯ- ಧರ್ಮಶಾಲಾ

* ಡಿಸೆಂಬರ್ 17ರಂದು ನಾಲ್ಕನೇ ಟಿ20 ಪಂದ್ಯ- ಲಖನೌ

* ಡಿಸೆಂಬರ್‌ 19ರಂದು ಐದನೇ ಟಿ20 ಪಂದ್ಯ- ಅಹಮದಾಬಾದ್

 

 

 

Tags:
error: Content is protected !!