Mysore
25
few clouds

Social Media

ಭಾನುವಾರ, 22 ಡಿಸೆಂಬರ್ 2024
Light
Dark

BBL: ಅಪಾಯಕಾರಿ ಪಿಚ್‌ನಿಂದ ಅರ್ಧದಲ್ಲೇ ನಿಂತ ಪಂದ್ಯ

ಮೆಲ್ಬೋರ್ನ್‌ : ಬಿಗ್‌ ಬ್ಯಾಷ್‌ ಲೀಗ್‌ ೨೦೨೩ ಟೂರ್ನಿಯಲ್ಲಿನ ಮೆಲ್ಬೋರ್ನ್‌ ರೇನಿಗೇಡ್ಸ್‌ ಮತ್ತು ಪರ್ತ್‌ ಸ್ಕಾಚರ್ಸ್‌ ನಡುವಿನ ಪಂದ್ಯ ಪಿಚ್‌ ಅಪಾಯಕಾರಿಯಾಗಿ ವರ್ತಿಸುತ್ತಿದೆ ಎಂಬ ಕಾರಣಕ್ಕೆ ರದ್ದಾಗಿದೆ. ಪಿಚ್‌ ಸಹಕಾರಿಯಲ್ಲದೇ ವರ್ತಿಸುತ್ತಿದ್ದನ್ನು ಅಂಪೈರ್‌ಗಳು ಗಮನಿಸಿ ಪಂದ್ಯವನನು ಅರ್ಧಕ್ಕೆ ನಿಲ್ಲಿಸಿದ ಘಟನೆ ಭಾನುವಾರ ನಡೆದಿದೆ. ಕ್ರಿಕೆಟ್‌ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಅಪಾಯಕಾರಿ ಪಿಚ್‌ ಎಂದು ಪಂದ್ಯವೊಂದನ್ನು ರದ್ದುಪಡಿಸಲಾಗಿದೆ.

ಮೆಲ್ಬೋರ್ನ್‌ನ ಗೀಲಾಂಗ್‌ ಮೈದಾನದಲ್ಲಿ ಪರ್ತ್‌ ಬ್ಯಾಟಿಂಗ್‌ ಮಾಡುವಾಗ ಹಲವು ಬಾರಿ ಚೆಂಡು ದಿಢೀರನೇ ಪುಟಿದೇಳುತ್ತಿತ್ತು. ಇದನ್ನು ಗಮನಿಸಿದ ಅಂಪೈರ್‌ಗಳು ೬.೫ ಓವರ್‌ಗಳಿಗೆ ಪಂದ್ಯ ನಿಲ್ಲಿಸಲು ನಿರ್ಧರಿಸಿದರು. ಬ್ಯಾಟ್ಸ್‌ಮನ್‌ಗಳ ಸುರಕ್ಷತೆ ದೃಷ್ಠಿಯಿಂದ ಈ ಪಂದ್ಯವನ್ನು ರದ್ದುಗೊಳಿಸಿದರು.

ಪಿಚ್‌ ತೇವಾಂಶದಿಂದ ಕೂಡಿದ ಸ್ಥಳವಾದ್ದರಿಂದ ಸಮಸ್ಯೆಯು ಗಂಭೀರವಾಗಿದ್ದು, ಬ್ಯಾಟರ್‌ಗಳಿಗೆ ಅಪಾಯದ ಅಂಶವಾಗಿತ್ತು. ಪಿಚ್‌ನಲ್ಲಿ ಅಲ್ಲಲ್ಲಿ ಕುಳಿಗಳು ಕಾಣಿಸುತ್ತಿತ್ತು. ಪ್ರತಿಬಾರಿಯೂ ಚೆಂಡು ಹಾಕಿದಾಗೆಲ್ಲಾ ಚೆಂಡು ತೀವ್ರ ತಿರುವುಗಳನ್ನು ಪಡೆಯುತ್ತಿತ್ತು.

ಪಂದ್ಯದ ಹಿಂದಿನ ದಿನ ಸುರಿದ ಮಳೆಗೆ ಸ್ಟೇಡಿಯಂ ಒದ್ದೆಯಾಗಿತ್ತು. ನೀರು ಪಿಚ್‌ಗೆ ಹಾಕಲಾಗಿದ್ದ ಹೊದಿಕೆಯನ್ನು ಮೀರಿ ಒಳಗೆ ಸೋರಿಕೆಯಾಗಿತ್ತು ಅದರಿಂದ ಈ ಪಿಚ್‌ ಅಪಾಯಕಾರಿಯಾಗಿ ಪರಿಣಮಿಸಿತು ಎಂದು ಹೇಳಲಾಗಿದೆ.

ಪಂದ್ಯ ನಡೆಯುತ್ತಿರುವಾಗ ಕಾಮೆಂಟಿ ಮಾಡುತ್ತಿದ್ದ ಇಂಗ್ಲೆಂಡ್‌ ಮಾಜಿ ನಾಯಕ ಮೈಕಲ್‌ ವಾನ್‌, ಆಸೀಸ್‌ ವಿಕೆಟ್‌ ಕೀಪರ್ ಗಿಲ್‌ಕ್ರಿಸ್ಟ್‌ ಬಳಿ ಈ ಪಿಚ್‌ ನಿಜವಾಗಿಯೂ ಬ್ಯಾಟರ್‌ಗಳಿಗೆ ಅಪಾಯವಾಗಲಿದೆಯೇ, ಅಥವಾ ಬ್ಯಾಟಿಂಗ್‌ ಮಾಡಲು ಮಾತ್ರ ಕಷ್ಟವಾಗಲಿದೆಯೇ ಎಂದು ಪ್ರಶ್ನಿಸಿದರು. ಇದಕ್ಕೆ ಉತ್ತರಿಸಿದ ಗಿಲ್‌ಕ್ರಿಸ್ಟ್‌ ಪಿಚ್‌ ನೈಜ ಅಪಾಯ ಎಂದು ನನಗನಿಸುತ್ತದೆ ಎಂದರು.

ಇದಾದ ಬಳಿಕ ಪಂದ್ಯ ರದ್ದುಗೊಳಿಸಲಾಯಿತು.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ