Mysore
26
overcast clouds

Social Media

ಸೋಮವಾರ, 22 ಡಿಸೆಂಬರ್ 2025
Light
Dark

ಬಾಸ್ಕೆಟ್ ಬಾಲ್ :ರಾಜ್ಯ ಮಹಿಳಾ ತಂಡಕ್ಕೆ ಬೆಳ್ಳಿ

ಬೆಂಗಳೂರು: ಅಸ್ಸಾಂನ ಗುವಾಹಟಿಯಲ್ಲಿ ನಡೆದ ಚೊಚ್ಚಲ ಆವೃತ್ತಿಯ ಅಂಡರ್-23 ರಾಷ್ಟ್ರೀಯ ಬಾಸ್ಕೆಟ್ ಬಾಲ್ ಚಾಂಪಿನ್ ಶಿಪ್ ನಲ್ಲಿ ಕರ್ನಾಟಕ ಮಹಿಳಾ ತಂಡ ರನ್ನರ್ ಆಪ್ ಆಗಿದೆ.

ಸೋಮವಾರ ನಡೆದ ಮಹಿಳಾ ವಿಭಾಗದ ಪೈನಲ್ ನಲ್ಲಿ ರಾಜ್ಯ ತಂಡ ತಮಿಳುನಾಡು ವಿರುದ್ದ 58-76 ಅಂಕಗಳ ಅಂತರದಲ್ಲಿ ಪರಾಭವಗೊಂಡಿತು. ಮೊದಲಾರ್ಧದಲ್ಲಿ 29-28 ರಲ್ಲಿ ಮುನ್ನೆಡೆಯಲ್ಲಿದ್ದ ಹೊರತಾಗಿಯೂ ರಾಜ್ಯಕ್ಕೆ ಗೆಲುವು ಸಿಗಲಿಲ್ಲ. ಕರ್ನಾಟಕ ತಂಡದಲ್ಲಿದ್ದ ಮಳವಳ್ಳಿ ತಾಲ್ಲೂಕಿನ ರಾವಣಿ ಗ್ರಾಮದ ಲೇ.ನಂಜುಂಡಯ್ಯ ಮತ್ತು ಪೂರ್ಣಿಮಾ ರವರ ಮಗಳು ಕುಮಾರಿ ಹಂಸ ಪ್ರತಿನಿಧಿಸಿದ್ದರು.

ಈ ವಿಜೇತ ತಂಡಕ್ಕೆ ಕರ್ನಾಟಕ ಬಾಸ್ಕೆಟ್ ಬಾಲ್ ಸಂಸ್ಥೆಯ ಕಾರ್ಯದರ್ಶಿ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಡಾ.ಕೆ.ಗೋವಿಂದರಾಜು 5ಲಕ್ಷ ಬಹುಮಾನ ಘೋಷಿಸಿದ್ದಾರೆ.

Tags:
error: Content is protected !!