Mysore
28
scattered clouds

Social Media

ಶುಕ್ರವಾರ, 02 ಜನವರಿ 2026
Light
Dark

ಐಪಿಲ್‌ನಲ್ಲಿ ಬಾಂಗ್ಲಾ ಆಟಗಾರ : ಶಾರುಖ್‌ ಒಡೆತನದ ಕೆಕೆಆರ್‌ ವಿರುದ್ಧ ಬಿಜೆಪಿ ವಾಗ್ದಾಳಿ

ಮುಂಬೈ :  ಐಪಿಎಲ್‌ ತಂಡವಾದ ಕೋಲ್ಕತ್ತಾ ನೈಟ್ ರೈಡರ್ಸ್ ( ಕೆಕೆಆರ್) ತಂಡಕ್ಕೆ ನೆರೆಯ ಬಾಂಗ್ಲಾದೇಶದ ಆಟಗಾರನನ್ನು ಖರೀದಿಸಿರುವ ಬಾಲಿವುಡ್ ನಟ ಶಾರುಖ್ ಖಾನ್ ಅವರನ್ನು ದೇಶದ್ರೊಹಿ ಎಂದು ಬಿಜೆಪಿ ವಾಗ್ದಾಳಿ ನಡೆಸಿದೆ.

ಉತ್ತರ ಪ್ರದೇಶ ವಿಧಾನಸಭೆಯ ಮಾಜಿ ಸದಸ್ಯ ಸಂಗೀತ್ ಸೋಮ್ ಅವರು, ಐಪಿಎಲ್‍ನಲ್ಲಿ ಬಾಂಗ್ಲಾದೇಶದ ವೇಗದ ಬೌಲರ್ ಮುಸ್ತಾಫಿಜುರ್ ರೆಹಮಾನ್ ಅವರನ್ನು ಖರೀದಿಸಿದ್ದಕ್ಕಾಗಿ ಶಾರುಖ್ ಖಾನ್ ಅವರನ್ನು ದೇಶದ್ರೋಹಿ ಎಂದು ಕರೆದಿದ್ದಾರೆ.

ನೆರೆಯ ದೇಶದಲ್ಲಿ ಹಿಂದೂಗಳು ಮತ್ತು ಇತರ ಅಲ್ಪಸಂಖ್ಯಾತರ ವಿರುದ್ಧ ಹೆಚ್ಚುತ್ತಿರುವ ದೌರ್ಜನ್ಯಗಳ ನಡುವೆ, ಅವರ ಇಂಡಿಯನ್ ಪ್ರಿಮಿಯರ್ ಲೀಗ್ (ಐಪಿಎಲ್) ತಂಡವಾದ ಕೆಕೆಆರ್ ಬಾಂಗ್ಲಾದೇಶಿ ಆಟಗಾರನನ್ನು ಖರೀದಿಸಿದ ನಂತರ ಉತ್ತರ ಪ್ರದೇಶದ ಭಾರತೀಯ ಜನತಾ ಪಕ್ಷದ (ಬಿಜೆಪಿ) ನಾಯಕ ಸೋಮ್ ಅವರು ನಟ ಶಾರುಖ್ ಖಾನ್ ಅವರನ್ನು ಟೀಕಿಸಿದ್ದಾರೆ.

ಒಂದು ಕಡೆ ಬಾಂಗ್ಲಾದೇಶದಲ್ಲಿ ಹಿಂದೂಗಳನ್ನು ಕೊಲ್ಲಲಾಗುತ್ತಿದೆ, ಮತ್ತೊಂದೆಡೆ ಐಪಿಎಲ್‍ನಲ್ಲಿ ಕ್ರಿಕೆಟಿಗರನ್ನು ಖರೀದಿಸಲಾಗುತ್ತಿದೆ. ದೇಶದ್ರೋಹಿ ಚಲನಚಿತ್ರ ನಟ ಶಾರುಖ್ ಖಾನ್ ಬಾಂಗ್ಲಾದೇಶದ ಕ್ರಿಕೆಟಿಗ ರೆಹಮಾನ್ ಅವರನ್ನು 9 ಕೋಟಿ ರೂ.ಗೆ ಖರೀದಿಸಿದ್ದಾರೆ. ಅಂತಹ ದೇಶದ್ರೊಹಿಗಳಿಗೆ ಈ ದೇಶದಲ್ಲಿ ವಾಸಿಸುವ ಹಕ್ಕಿಲ್ಲ ಎಂದು ಮೀರತ್‍ನಲ್ಲಿ ನಡೆದ ಸಾರ್ವಜನಿಕ ಕಾರ್ಯಕ್ರಮದಲ್ಲಿ ಸೋಮ್ ಹೇಳಿದರು.

ಡಿಸೆಂಬರ್ 16 ರಂದು ನಡೆದ ಐಪಿಎಲ್ ಆಟಗಾರರ ಹರಾಜಿನಲ್ಲಿ 9.2 ಕೋಟಿ ರೂ.ಗೆ ಖರೀದಿಸಲಾದ ರೆಹಮಾನ್‍ನಂತಹ ಆಟಗಾರರು ಭಾರತಕ್ಕೆ ಬಂದರೆ ವಿಮಾನ ನಿಲ್ದಾಣದಿಂದ ಹೊರಬರಲು ಸಾಧ್ಯವಾಗುವುದಿಲ್ಲ ಎಂದು ಬಿಜೆಪಿ ನಾಯಕರು ಎಚ್ಚರಿಸಿದ್ದಾರೆ.

ಐಪಿಎಲ್ ಮಾರ್ಚ್‍ನಲ್ಲಿ ಪ್ರಾರಂಭವಾಗಲಿದೆ ಎಂದು ವರದಿಯಾಗಿದೆ. ಆಧ್ಯಾತ್ಮಿಕ ಗುರು ದೇವ್ಕಿನಂದನ್ ಠಾಕೂರ್ ಅವರು ರೆಹಮಾನ್ ಅವರನ್ನು ಖರೀದಿಸಿದ್ದಕ್ಕಾಗಿ ಶಾರುಖ್ ಖಾನ್ ಅವರನ್ನು ಟೀಕಿಸಿದರು ಮತ್ತು ಕೆಕೆಆರ್ ನಿರ್ವಹಣೆಗೆ ಅವರನ್ನು ತಂಡದಲ್ಲಿ ಸೇರಿಸಿಕೊಳ್ಳದಂತೆ ಹೇಳಿದರು.

ಕಾಂಗ್ರೆಸ್ ನಾಯಕ ಸುರೇಂದರ್ ರಜಪೂತ್ ಮಾತನಾಡಿ, ಬಿಜೆಪಿಯನ್ನು ಟೀಕಿಸಿ, ಅದೊಂದು ದೇಶದ್ರೋಹಿ ಪಕ್ಷ. ಶಾರುಖ್ ಖಾನ್ ಮುಸ್ಲಿಂ ಎಂಬ ಕಾರಣಕ್ಕಾಗಿ ಅವರು ಅವರ ಮೇಲೆ ದಾಳಿ ಮಾಡುತ್ತಿದ್ದಾರೆ ಎಂದು ಅವರು ಆರೋಪಿಸಿದರು.

ಭಾರತ ಮತ್ತು ಬಾಂಗ್ಲಾದೇಶದ ನಡುವಿನ ಸಂಬಂಧಗಳು ಹದಗೆಟ್ಟಿರುವ ನಡುವೆಯೇ ಈ ಮಾತಿನ ಸಮರ ನಡೆಯುತ್ತಿದೆ. ಕಳೆದ ತಿಂಗಳು ಮೈಮೆನ್ಸಿಂಗ್‍ನಲ್ಲಿ ದೇವದೂಷಣೆಯ ಆರೋಪದ ಮೇಲೆ ಹಿಂದೂ ವ್ಯಕ್ತಿ ದೀಪು ಚಂದ್ರ ದಾಸ್ ಅವರನ್ನು ಗುಂಪೊಂದು ಹೊಡೆದು ಕೊಂದು ಅವರ ದೇಹವನ್ನು ಸುಟ್ಟುಹಾಕಿದ ನಂತರ ಉಭಯ ದೇಶಗಳ ಸಂಬಂಧಗಳು ಹದಗೆಟ್ಟವು.

 

 

Tags:
error: Content is protected !!