Mysore
24
clear sky

Social Media

ಶನಿವಾರ, 24 ಜನವರಿ 2026
Light
Dark

ಏಕದಿನ ಕ್ರಿಕೆಟ್‌ಗೆ ವಿದಾಯ ಹೇಳಿದ ಬಾಂಗ್ಲಾ ಕ್ರಿಕೆಟಿಗ ಮುಷ್ಫಿಕರ್‌

ಢಾಕಾ: 37 ವರ್ಷ ವಯಸ್ಸಿನ ಬಾಂಗ್ಲಾದೇಶ ಕ್ರಿಕೆಟ್‌ ತಂಡದ ವಿಕೆಟ್‌ ಕೀಪರ್‌ ಕಂ ಬ್ಯಾಟರ್‌ ಮುಷ್ಫಿಕರ್‌ ರಹೀಂ ಅವರು ಏಕದಿನ ಕ್ರಿಕೆಟ್‌ಗೆ ವಿದಾಯ ಹೇಳಿದ್ದಾರೆ.

ಈಗ ನಡೆಯುತ್ತಿರುವ ಚಾಂಪಿಯನ್ಸ್‌ ಟ್ರೋಫಿ ಕ್ರಿಕೆಟ್ ಟೂರ್ನಿಯಲ್ಲಿ‌ ಬಾಂಗ್ಲಾದೇಶ ತಂಡದಲ್ಲಿ ಆಡಿದ್ದರು.

ʼಏಕದಿನ ಮಾದರಿಗೆ ನಾನು ನಿವೃತ್ತಿ ಘೋಷಿಸುತ್ತಿದ್ದೇನೆ. ಅಂತರಾಷ್ಟ್ರೀಯ ಮಟ್ಟದಲ್ಲಿ ನಮ್ಮ ತಂಡದ ಸಾಧನೆ ಸೀಮಿತವಾಗಿರಬಹುದು. ಆದರೆ, ನಾನು ದೇಶದ ಪರವಾಗಿ ಕಣಕ್ಕೆ ಇಳಿಯುತ್ತಿದ್ದಾಗ ಎಷ್ಟು ಸಾಧ್ಯವೋ ಅಷ್ಟು ಉತ್ತಮವಾಗಿ ಆಡಲು ಪ್ರಾಮಾಣಿಕ ಪ್ಯಯತ್ನ ಮಾಡಿದ್ದೇನೆʼ ಎಂದು ಫೇಸ್‌ಬುಕ್‌ನಲ್ಲಿ ಪೋಸ್ಟ್‌ ಹಾಕಿದ್ದಾರೆ.

ಬಾಂಗ್ಲಾ ಪರ 274 ಏಕದಿನ ಪಂದ್ಯಗಳನ್ನು ಆಡಿರುವ ರಹೀಂ, 36.42ರ ಸರಾಸರಿಯಲ್ಲಿ 7795 ರನ್‌ಗಳಿಸಿದ್ದಾರೆ. 94 ಟೆಸ್ಟ್‌ ಪಂದ್ಯ ಮತ್ತು 102 ಟಿ20 ಪಂದ್ಯಗಳನ್ನು ಆಡಿದ್ದಾರೆ.

 

Tags:
error: Content is protected !!