Mysore
26
overcast clouds

Social Media

ಶುಕ್ರವಾರ, 12 ಡಿಸೆಂಬರ್ 2025
Light
Dark

ಪ್ರಧಾನಿ ನಿವಾಸದ ಮುಂದೆ ಪದಕ ತೊರೆದುಹೋದ ಭಜರಂಗ್‌ ಪುನಿಯಾ

ನವದೆಹಲಿ : ಭಾರತೀಯ ಕುಸ್ತಿ ಫೆಡರೇಶನ್‌ (ಡಬ್ಲ್ಯುಎಫ್‌ಐ) ಚುನಾವಣೆಯಲ್ಲಿ ಲೈಂಗಿಕ ಆರೋಪಗಳನ್ನು ಎದುರಿಸುತ್ತಿರುವ ಬಿಜೆಪಿ ಸಂಸದ ಬ್ರಿಜ್ ಭೂಷಣ್ ಶರಣ್ ಸಿಂಗ್ ಆಪ್ತ ಸಂಜಯ್ ಸಿಂಗ್ ಗದ್ದು, ಅಧ್ಯಕ್ಷರಾಗಿ ನೇಮಕಗೊಂಡ ಬೆನ್ನಲ್ಲೇ ಕಣ್ಣೀರಿಡುತ್ತಾ ಕುಸ್ತಿಗೆ ವಿದಾಯ ಹೇಳಿದ ಸಾಕ್ಷಿ ಮಲ್ಲಿಕ್‌ ಪರವಾಗಿ ಒಲಂಪಿಕ್‌ ಪದಕ ವಿಜೇತ ಭಜರಂಗ ಪೂಜಿಯಾ ಬೆಂಬಲ ಸೂಚಿಸಿದ್ದು, ತಮಗೆ ಸಂದಿರುಚ ಪದ್ಮಶ್ರೀ ಪ್ರಶಸ್ತಿಯನ್ನು ಹಿಂದಿರುಗಿಸಿದ್ದಾರೆ.

ಕುಸ್ತಿಪಟು ಬಜರಂಗ್ ಪುನಿಯಾ ಅವರು ತಮಗೆ ಲಭಿಸಿದ ಪದ್ಮಶ್ರೀ ಪ್ರಶಸ್ತಿಯನ್ನು ಪ್ರಧಾನಿ ಮೋದಿ ನಿವಾಸದ ಕರ್ತವ್ಯ ಪಥದ ಪಾದಚಾರಿ ಮಾರ್ಗದಲ್ಲಿ ತೊರೆದು ಹೋಗಿದ್ದಾರೆ.

ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನರೇಂದ್ರ ಮೋದಿ ಅವರನ್ನು ಭೇಟಿ ಮಾಡಲು ಸಾಧ್ಯವಾಗಲಿಲ್ಲ, ನಾನು ಮೊದಲೇ ಹೇಳಿದಂತೆ, ನಮ್ಮ ಸಹೋದರಿಯರಿಗಾಗಿ ಹೋರಾಟ ಮಾಡುತ್ತಿದ್ದೇವು. ನನ್ನಿಂದ ಅವರಿಗೆ ನ್ಯಾಯ ಕೊಡಿಸಲು ಆಗಲಿಲ್ಲ. ಹಾಗಾಗಿ ನಾನು ಪದ್ಮಶ್ರೀ ಪ್ರಶಸ್ತಿಗೆ ಅನರ್ಹ ಎಂದು ಭಾವಿಸಿದ್ದೇನೆ. ಇದನ್ನು ನಾನು ಮನೆಗೆ ತೆಗೆದುಕೊಂಡು ಹೋಗುವುದಿಲ್ಲ ಎಂದರು.

ಪ್ರಧಾನಿ ಮೋದಿಯವರನ್ನು ಭೇಟಿಯಾಗಲು ನನಗೆ ಅಪಾಯಿಂಟ್‌ಮೆಂಟ್ ಇಲ್ಲದ ಕಾರಣ ಸಾಧ್ಯವಾಗಲಿಲ್ಲ. ಪ್ರಧಾನಿಗೆ ಬಿಡುವಿಲ್ಲದ ವೇಳಾಪಟ್ಟಿ ಇದೆ. ಹಾಗಾಗಿ ಪ್ರಧಾನಿಗೆ ಬರೆದ ಪತ್ರದೊಂದಿಗೆ ನನ್ನ ಪ್ರಶಸ್ತಿಯನ್ನು ಬಿಟ್ಟು ಹೋಗುತ್ತಿದ್ದೇನೆ ಎಂದು ಪುನಿಯಾ ತಿಳಿಸಿದರು.

ಪ್ರಧಾನಿ ಭೇಟಿಯಾಗಲು ಹೋದ ಪುನಿಯಾರನ್ನು ಭೇಟಿಯಾಗಲು ಅನುಮತಿ ಇದೆಯೇ? ಎಂದು ಪ್ರಶ್ನಿಸಿ ಪೊಲೀಸರು ತಡೆದಿದ್ದರು. ಇದಕ್ಕೆ ಉತ್ತರಿಸಿದ ಪುನಿಯಾ “ಇಲ್ಲ, ಅನುಮತಿ ಸಿಕ್ಕಿಲ್ಲ. ನಾನಿಲ್ಲಿ ಪ್ರತಿಭಟನೆ ನೆಡೆಸಲು ಬಂದಿಲ್ಲ ಸಾಧ್ಯವಾದರೆ ದಯವಿಟ್ಟು ಈ ಪತ್ರವನ್ನು ಪ್ರಧಾನಿ ಕಚೇರಿಗೆ ತಲುಪಿಸಿ. ಒಳಗೆ ಹೋಗಲು ನನಗೆ ಸಾಧ್ಯವಾಗದು ಎಂದು ಹೇಳಿದ್ದರು.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!