Mysore
18
few clouds

Social Media

ಭಾನುವಾರ, 07 ಡಿಸೆಂಬರ್ 2025
Light
Dark

ನಿರಂತರ ಶ್ರಮದಿಂದ ಸಾಧನೆ ಸಾಧ್ಯ : ಬಿ.ಚೈತ್ರ

b chaitra

ಮೈಸೂರು: ನಿರಂತರ ಶ್ರಮ ಮತ್ತು ಪ್ರಯತ್ನದಿಂದ ಜೀವನದಲ್ಲಿ ಅಂದುಕೊಂಡಿದ್ದನ್ನು ಸಾಧಿಸಬಹುದು ಎಂದು ಅಂತರಾಷ್ಟ್ರೀಯ ಖೋ ಖೋ ಆಟಗಾರ್ತಿ ಬಿ. ಚೈತ್ರಾ ಮ್ಯಾರಥಾನ್ ಓಟಗಾರರಿಗೆ ಹುರಿಸುಂಬಿಸಿದರು.

ನಗರದ ಬನ್ನೂರು ರಸ್ತೆಯಲ್ಲಿರುವ ಎಟಿಎಂಇ ಇಂಜಿನಿಯರಿಂಗ್ ಕಾಲೇಜಿನ ವಾರ್ಷಿಕೋತ್ಸವ “ಆತ್ಮೀಯ-೨ಕೆ೨೫” ಅಂಗವಾಗಿ “ವೈಕಲ್ಯತೆಯನ್ನು ಮೀರಿದ ಸಾಮರ್ಥ್ಯ” ಎಂಬ ಘೋಷಾ ವಾಕ್ಯದ ವಿದ್ಯಾರ್ಥಿಗಳಿಗೆ ಮತ್ತು ಸಾರ್ವಜನಿಕರಿಗೆ ಮ್ಯಾರಥಾನ್ ಓಟವನ್ನು ನಗರದ ಮೈವಿವಿಯ ಓವೆಲ್ ಮೈದಾನದಿಂದ ಆಯೋಜಿಸಲಾಗಿತ್ತು.

ಮ್ಯಾರಥಾನ್‌ಗೆ ಚಾಲನೆ ನೀಡಿ ಮಾತನಾಡಿದ ಅವರು, ಕ್ರೀಡಾ ಪಟುಗಳಿಗೆ ಕ್ರೀಡೆಯಲ್ಲಿ ಮೊದಲು ಹೆಚ್ಚಿನ ಆಸಕ್ತಿ ಮೂಡಬೇಕು. ಕ್ರೀಡೆಯಲ್ಲಿ ಗೆದ್ದಾ ಬೀಗದೇ ಸೋತಾಗ ಕುಗ್ಗದೇ ಸೋಲು ಗೆಲುವನ್ನು ಜೀವನದಲ್ಲಿ ಸಮಾನಾಗಿ ಸ್ವೀಕರಿಸಬೇಕು. ಎಟಿಎಂಇ ಕಾಲೇಜು ಪ್ರತಿವರ್ಷವೂ ಒಂದೊಂದು ಸಾಮಾಜಿಕ ಕಳಕಳಿಯ ಉದ್ದೇಶ ಇಟ್ಟುಕೊಂಡು ವಾರ್ಷಿಕೋತ್ಸವವನ್ನು ಆಚರಿಸುತ್ತಿರುವುದು ಶ್ಲಾಘನೀಯ ಎಂದು ತಿಳಿಸಿ, ಮ್ಯಾರಥಾನ್ ಓಟಗಾರರಿಗೆ ಶುಭಕೋರಿದರು.

ಮೈ.ವಿವಿ ದೈಹಿಕ ಹಾಗೂ ಕ್ರೀಡಾ ವಿಜ್ಞಾನ ವಿಭಾಗದ ನಿರ್ದೇಶಕ ಡಾ.ಸಿ.ವೆಂಕಟೇಶ್ ಅವರು ಮಾತನಾಡಿ, “ಕ್ರೀಡೆ ಮತ್ತು ಓಟದಿಂದ ಉತ್ತಮವಾದ ದೈಹಿಕ ಮತ್ತು ಮಾನಸಿಕ ಅರೋಗ್ಯ ಕಾಪಾಡಿಕೊಳ್ಳಬಹುದು. ಇಂದಿನ ಒತ್ತಡಯುಕ್ತ ಜೀವನದಲ್ಲಿ ಕ್ರೀಡೆ ಮತ್ತು ದೈಹಿಕ ಚಟುವಟಿಕೆಗಳು ನಮ್ಮ ನಿತ್ಯದ ಮಂತ್ರವಾಗಬೇಕೆಂದು ಸಲಹೆ ನೀಡಿದರು.

ಬಳಿಕ ಮೈವಿವಿ ಓವೆಲ್ ಮೈದಾನದಿಂದ ಆಯೋಜಿಸಿದ್ದ ೫.೬ ಕಿ.ಮೀ ಉದ್ದದ ಮ್ಯಾರಥಾನ್‌ಅನ್ನು ಮೈದಾನದಿಂದ ಹೊರಟು ಜಿಲ್ಲಾಪಂಚಾಯತ್ ರಸ್ತೆಯ ಮಾರ್ಗವಾಗಿ ಸಾಗಿ, ಜಯನಗರ ರೈಲ್ವೇ ಸೇತುವೆ ರಸ್ತೆ ಮೂಲಕ ಹಾದು ಹೋಗಿ, ಕುಕ್ಕರಹಳ್ಳಿ ಕೆರೆ ಮಾರ್ಗದ ಹುಣಸೂರು ರಸ್ತೆ ಹಳೆ ಜಿಲ್ಲಾಽಕಾರಿ ಕಚೇರಿ ಮಾರ್ಗವಾಗಿ ಹಾದು ಕೊನೆಗೆ ಓವೆಲ್ಸ್ ಮೈದಾನದಲ್ಲಿ ಮ್ಯಾರಾಥಾನ್ ಓಟ ಮುಕ್ತಾಯವಾಯಿತು. ಮ್ಯಾರಥಾನ್ ಸ್ಪರ್ಧೆಯಲ್ಲಿ ೧೧೦೦ಕ್ಕೂ ಹೆಚ್ಚು ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಮ್ಯಾರಥಾನ್ ಓಟದಲ್ಲಿ ಭಾಗವಹಿಸಿದ್ದರು. ವಿದ್ಯಾರ್ಥಿನಿಯರ ವಿಭಾಗ ಅಪೂರ್ವ (ಸಿವಿಲ್‌ವಿಭಾಗ)ಪ್ರಥಮ ಸ್ಥಾನ, ಅಂಕಿತ (ಇ.ಇವಿಭಾಗ) ದ್ವಿತೀಯ ಸ್ಥಾನ, ಹರ್ಷಿತಾ (ಸಿಎಸ್‌ಇ ವಿಭಾಗ) ತೃತೀಯ ಸ್ಥಾನ ಪಡೆದುಕೊಂಡರು.

ವಿದ್ಯಾರ್ಥಿಗಳ ವಿಭಾಗದ ಕುಶಾಲ್ (ಇ.ಸಿ ವಿಭಾಗ)ಪ್ರಥಮ ಸ್ಥಾನ, ಸಿ.ರೇವಂತ್(ಎಐಎಂಎಲ್ ವಿಭಾಗ)ದ್ವಿತೀಯ, ಪವನ್ (ಸಿ.ಎಸ್.ಡಿಸೈನ್ ವಿಭಾಗ) ತೃತಿಯ ಸ್ಥಾನ ಗೆದ್ದುಕೊಂಡರು.

ಅಧ್ಯಾಪಕರ ವಿಭಾಗ ಜಿ.ಎಸ್‌ನಂದಿನಿ ಪ್ರಥಮ ಸ್ಥಾನ ,ಮೈತ್ರಿ ದ್ವಿತೀಯ, ಕಾವ್ಯಶ್ರೀ ತೃತೀಯ ಸ್ಥಾನಗಳಿಸಿದರು. ಸಿಬ್ಬಂದಿ ವಿಭಾಗದಲ್ಲಿ ಕೆ.ಮನುಕುಮಾರ್ ಪ್ರಥಮ ಸ್ಥಾನ, ಸತೀಶ್ ದ್ವಿತೀಯ, ಪ್ರೊ.ರಂಗಸ್ವಾಮಿ ತೃತೀಯ ಸ್ಥಾನ ಜಯಿಸಿದರು.

ಸಾರ್ವಜನಿಕರ ವಿಭಾಗದಲ್ಲಿ ಮಹದೇವಸ್ವಾಮಿ ಪ್ರಥಮ ಸ್ಥಾನ, ಶಶಾಂಕ್.ಕೆ.ಗೌಡ ದ್ವಿತೀಯ, ಆದಿತ್ಯ ತೃತಿಯ ಸ್ಥಾನ ಪಡೆದು ಜಯಶೀಲರಾದರು. ವಿಜೇತರಿಗೆ ಪ್ರಶಸ್ತಿ ಪತ್ರ ಮತ್ತು ನಗದು ಬಹುಮಾನ ವಿತರಿಸಲಾಯಿತು,
ಕಾಲೇಜಿನ ಆಡಳಿತ ಮಂಡಳಿ ಕಾರ್ಯದರ್ಶಿ ಕೆ.ಶಿವಶಂಕರ್, ಖಜಾಂಚಿ ಆರ್.ವೀರೇಶ್, ಆಡಳಿತಾಽಕಾರಿ ಡಾ.ಸಚ್ಚಿದಾನಂದಮೂರ್ತಿ, ಪ್ರಾಂಶುಪಾಲ ಡಾ.ಎಲ್.ಬಸವರಾಜ್, ಡೀನ್ ಡಾ.ಕೆ ಶ್ರೀನಿವಾಸ ಸಾಂಸ್ಕೃತಿಕ ಸಮಿತಿ ಅಧ್ಯಕ್ಷ ಡಾ.ಎಲ್ ಪುಟ್ಟೇಗೌಡ, ಪ್ರೊ. ಚಂದ್ರಶೇಖರ್, ಪ್ರೊ.ರೋಹಿತ್, ಪ್ರೊ.ಜಸ್ಲೀನ್, ಉಪಸ್ಥಿತರಿದ್ದರು.

Tags:
error: Content is protected !!