ಸಿಡ್ನಿ : ಸಿಡ್ನಿ ಕ್ರಿಕೆಟ್ ಕ್ರೀಡಾಂಗಣದಲ್ಲಿ ಇಂದಿನಿಂದ ಹಾಲಿ ಚಾಂಪಿಯನ್ ಆಸ್ಟ್ರೇಲಿಯಾದ ಆತಿಥ್ಯದಲ್ಲಿ ಟಿ20 ವಿಶ್ವಕಪ್ ಟೂರ್ನಿಯ ಸೂಪರ್ 6 ಇಂದಿನಿಂದ ಆರಂಭವಾಗಲಿದೆ.
ಉದ್ಘಾಟನೆ ಪಂದ್ಯದಲ್ಲಿ ಆತಿಥೇಯ ತಂಡವು ನ್ಯೂಜಿಲೆಂಡ್ ಎದುರು ಸೆಣಸಲಿದೆ. ಇದೇ ದಿನ ಪರ್ತ್‌ನಲ್ಲಿ ನಡೆಯುವ ಇನ್ನೊಂದು ಪಂದ್ಯದಲ್ಲಿ ಇಂಗ್ಲೆಂಡ್ ಹಾಗೂ ಅಫ್ಗಾನಿಸ್ತಾನ ಮುಖಾಮುಖಿಯಾಗಲಿವೆ. ಅ.17ರಿಂದ ಆರಂಭವಾಗಿದ್ದ ಅರ್ಹತಾ ಸುತ್ತಿನಲ್ಲಿ ಪ್ರಮುಖ ತಂಡವಾದ ವೆಸ್ಟ್ ಇಂಡೀಸ್ ನಿರಾಶೆ ಅನುಭವಿಸಿದೆ. ಜಿಂಬಾಬ್ವೆ ಇದೇ ಮೊದಲ ಬಾರಿಗೆ ಮುಖ್ಯಸುತ್ತಿಗೆ ಪ್ರವೇಶಿಸಿದೆ.





