ರಾವಲ್ಪಿಂಡಿ: ಐಸಿಸಿ ಚಾಂಪಿಯನ್ಸ್ ಟ್ರೋಫಿ ಕ್ರಿಕೆಟ್ ಟೂರ್ನಿಯ ಆಸ್ಟ್ರೇಲಿಯಾ ಮತ್ತು ದಕ್ಷಿಣ ಆಫ್ರಿಕಾ ನಡುವಣ ಪಂದ್ಯ ಮಳೆಯಿಂದ ರದ್ದಾಗಿದೆ.
ಇಂದು ರಾವಲ್ಪಿಂಡಿಯ ಅಂತರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯಬೇಕಾದ ಈ ಪಂದ್ಯಕ್ಕೆ ಆರಂಭದಿಂದಲೇ ಮಳೆ ಅವಕಾಶ ಕೊಡಲಿಲ್ಲ. ಮೂರು ಗಂಟೆಗೂ ಹೆಚ್ಚು ಕಾಲ ಬಿಡದೇ ಸುರಿದ ಕಾರಣ ಪಂದ್ಯವನ್ನು ರದ್ದುಗೊಳಿಸಲಾಗಿದೆ.
ಇದರೊಂದಿಗೆ ಎರಡು ತಂಡಗಳು ತಲಾ ಒಂದು ಅಂಕ ಪಡೆಯುವ ಮೂಲಕ ಒಟ್ಟು 3 ಅಂಕ ಸಂಪಾದಿಸಿದ್ದಾರೆ. ರನ್‌ರೇಟ್‌ನಲ್ಲಿ ದಕ್ಷಿಣ ಆಫ್ರಿಕಾ ಹೆಚ್ಚಿರುವ ಕಾರಣ ಮೊದಲ ಸ್ಥಾನದಲ್ಲಿದೆ.
ಈ ಪಂದ್ಯ ರದ್ದಾಗಿರುವುದರಿಂದ ನಾಳೆ ನಡೆಯುವ ಇಂಗ್ಲೆಂಡ್ ಮತ್ತು ಅಫ್ಘಾನಿಸ್ತಾನ ನಡುವಿನ ಸೆಣಸಾಟ ನಾಕೌಟ್ ಪಂದ್ಯವಾಗಿ ಮಾರ್ಪಟ್ಟಿದೆ. ಈ ಪಂದ್ಯದಲ್ಲಿ ಸೋತವರು ಐಸಿಸಿ ಚಾಂಪಿಯನ್ಸ್‌ಶಿಪ್‌ನಿಂದ ಹೊರಹೋಗುತ್ತಾರೆ.





