ಹ್ಯಾಂಗ್ ಝೌ: ಸೋಮವಾರ ಏಶ್ಯನ್ ಗೇಮ್ಸ್ ಕ್ರೀಡಾಕೂಟದಲ್ಲಿ 1984ರಲ್ಲಿ ಭಾರತೀಯ ಓಟಗಾರ್ತಿ ಪಿ.ಟಿ.ಉಷಾ ನಿರ್ಮಿಸಿದ್ದ ರಾಷ್ಟ್ರೀಯ ದಾಖಲೆಯನ್ನು ಸರಿಗಟ್ಟಿದ ವಿದ್ಯಾ ರಾಮರಾಜ್, 55 ನಿಮಿಷ 42 ಸೆಕೆಂಡ್ ಗಳಲ್ಲಿ ತಮ್ಮ ಸರದಿಯನ್ನು ಮುಗಿಸುವ ಮೂಲಕ ಅತ್ಯುತ್ತಮ ವೈಯಕ್ತಿಕ ಸಾಧನೆಯನ್ನು ಮಾಡಿದರು. ಇದರೊಂದಿಗೆ ಮಹಿಳೆಯರ ಹರ್ಡಲ್ಸ್ ವಿಭಾಗದ ಫೈನಲ್ ಗೆ ನೇರ ಪ್ರವೇಶ ಪಡೆದರು.
ಆದರೆ, ತಮ್ಮ ಸರದಿಯನ್ನು 58 ನಿಮಿಷ 62 ಸೆಕೆಂಡ್ ಗಳಲ್ಲಿ ಮುಗಿಸಿ ಐದನೆಯವರಾದ ರವಿ ಸಿಂಚಲ್ ಕಾವೇರಮ್ ತೀತಾರಮದ ಫೈನಲ್ ಗೆ ಅರ್ಹತೆ ಪಡೆಯುವಲ್ಲಿ ವಿಫಲರಾದರು.
ಪುರುಷರ 400 ಮೀಟರ್ ಹರ್ಡಲ್ಸ್ ನಲ್ಲಿ ಸಂತೋಷ್ ಕುಮಾರ್ ತಮಿಳರಸನ್ ಹಾಗೂ ಯಶಸ್ ಪಾಲಾಕ್ಷ ತಮ್ಮ ಸರದಿಯನ್ನು ಎರಡನೆಯವರಾಗಿ ಮುಗಿಸುವ ಮೂಲಕ ಫೈನಲ್ ಗೆ ಅರ್ಹತೆ ಪಡೆದರು. ಅವರಿಬ್ಬರೂ ಕ್ರಮವಾಗಿ 49 ನಿಮಿಷ 28 ಸೆಕೆಂಡ್ ಹಾಗೂ 49 ನಿಮಿಷ 61 ಸೆಕೆಂಡ್ ಗಳಲ್ಲಿ ತಮ್ಮ ಸರದಿಯನ್ನು ಮುಗಿಸಿದರು.