ಹಾಂಗ್‌ಝೌ : ಭಾರತದ ನವೊರೆಮ್ ರೊಶಿಬಿನಾ ದೇವಿ ಅವರು ಏಷ್ಯನ್ ಗೇಮ್ಸ್ ಕ್ರೀಡಾಕೂಟದ ವುಶು ಸ್ಪರ್ಧೆಯ ಮಹಿಳೆಯರ 60 ಕೆ.ಜಿ. ವಿಭಾಗದಲ್ಲಿ ಬೆಳ್ಳಿ ಪದಕ ಗೆದ್ದಿದ್ದಾರೆ.
ಬುಧವಾರ ವಿಯೆಟ್ನಾನ್ ಥಿ ತು ಎನ್‌ಗುಯೆನ್ ಅವರನ್ನು ಮಣಿಸಿ ಫೈನಲ್ ತಲುಪಿದ್ದರು. ಫೈನಲ್‌ನಲ್ಲಿ ಚೀನಾದ ಕ್ಸಿಯಾವೊವಿ ವಿರುದ್ಧ ಸೋಲುವ ಮೂಲಕ ಬೆಳ್ಳಿಗೆ ತೃಪ್ತಿ ಪಟ್ಟುಕೊಂಡಿದ್ದಾರೆ.
ಸಂಧ್ಯಾರಾಣಿ ದೇವಿ ಅವರ ನಂತರ ವುಶು ಸ್ಪರ್ಧೆಯಲ್ಲಿ ಫೈನಲ್‌ಗೆ ತಲುಪಿದ ಭಾರತದ ಎರಡನೇ ಆಟಗಾರ್ತಿ ಎಂಬ ಹೆಗ್ಗಳಿಕೆಗೆ ರೋಶಿಬಿನಾ ಪಾತ್ರರಾಗಿದ್ದರು.
2018ರಲ್ಲಿ ನಡೆದ ಜಕಾರ್ತಾ ಏಷ್ಯನ್ ಕ್ರೀಡಾಕೂಟದ 60 ಕೆ.ಜಿ ವಿಭಾಗದಲ್ಲಿ ರೊಶಿಬಿನಾ ಕಂಚಿನ ಪದಕವನ್ನು ಗೆದ್ದಿದ್ದರು.