Mysore
15
few clouds

Social Media

ಸೋಮವಾರ, 08 ಡಿಸೆಂಬರ್ 2025
Light
Dark

ಏಷ್ಯನ್ ಗೇಮ್ಸ್‌ : ಚಿನ್ನದ ಪದಕಕ್ಕೆ ಕೊರಳೊಡ್ಡಿದ ಭಾರತೀಯ ಶೂಟರ್‌ಗಳು

ಹ್ಯಾಂಗ್ಝೌ : ಚೀನಾದ ಹ್ಯಾಂಗ್ಝೌನಲ್ಲಿ ನಡೆಯುತ್ತಿರುವ 2023 ಏಷ್ಯನ್ ಕ್ರೀಡಾಕೂಟದ ಪುರುಷರ 50 ಮೀ ರೈಫಲ್ ತಂಡದ ಸ್ಪರ್ಧೆಯಲ್ಲಿ ಭಾರತೀಯ ತಂಡವು ಅಗ್ರಸ್ಥಾನ ಪಡೆದು ಚಿನ್ನದ ಪದಕಕ್ಕೆ ಕೊರಳೊಡ್ಡಿದೆ. ಐಶ್ವರಿ ಪ್ರತಾಪ್ ಸಿಂಗ್ ತೋಮರ್, ಸ್ವಪ್ನಿಲ್ ಕುಸಾಲೆ ಮತ್ತು ಅಖಿಲ್ ಶೆಯೋರಾನ್ ಅವರ 50 ಮೀಟರ್ ರೈಫಲ್ 3ಕೆ ಪುರುಷರ ಭಾರತ ತಂಡವು ಚಿನ್ನದ ಪದಕವನ್ನು ಗೆದ್ದುಕೊಂಡಿತು.

2023ರ ಏಷ್ಯನ್ ಗೇಮ್ಸ್ ನಲ್ಲಿ ಭಾರತಕ್ಕೆ ಶೂಟಿಂಗ್‍ನಲ್ಲಿ ಇದು 15ನೇ ಪದಕ ಮತ್ತು 7ನೇ ಚಿನ್ನವಾಗಿದೆ. ಭಾರತವು 1769 ಅಂಕಗಳ ಗಮನಾರ್ಹ ಅಂಕಗಳಿಸಿತು, ಕಳೆದ ವರ್ಷ ಪೆರುವಿನಲ್ಲಿ ಯುಎಸ್‍ಎನ ಹಿಂದಿನ ದಾಖಲೆಯನ್ನು 8 ಅಂಕಗಳಿಂದ ಮೀರಿಸಿದೆ.

ಗ್ರೂಪ್ ವಿಭಾಗದಲ್ಲಿ ಬೆಳ್ಳಿ ಪದಕ ಜಯಿಸುವುದರೊಂದಿಗೆ ಇಶಾ ಮತ್ತು ಪಾಲಕ್ ವೈಯಕ್ತಿಕ ಸ್ಪರ್ಧೆಯಲ್ಲೂ ಫೈನಲ್ ತಲುಪಿದ್ದಾರೆ. 10 ವರ್ಷದ ಇಶಾ ಸಿಂಗ್ ಈಗ ಏಷ್ಯನ್ ಗೇಮ್ಸ್ 2023 ರಲ್ಲಿ ತನ್ನ ನಾಲ್ಕನೇ ಪದಕ ಗೆಲ್ಲುವ ಅವಕಾಶವನ್ನು ಹೊಂದಿದ್ದಾರೆ. ಈ ಹಿಂದೆ 25 ಮೀಟರ್ ಪಿಸ್ತೂಲ್ ಟೀಮ್ ವಿಭಾಗದಲ್ಲಿ ಚಿನ್ನ ಹಾಗೂ ವೈಯಕ್ತಿಕ ವಿಭಾಗದಲ್ಲಿ ಬೆಳ್ಳಿ ಗೆದ್ದಿದ್ದರು.

ಚೀನಾದ ಹ್ಯಾಂಗ್‍ಝೌನಲ್ಲಿ ನಡೆಯುತ್ತಿರುವ ಏಷ್ಯನ್ ಗೇಮ್ಸ್ 2023ರಲ್ಲಿ ಶೂಟಿಂಗ್ ನಲ್ಲಿ ಬೆಳ್ಳಿ ಪದಕ ಗೆದ್ದ ವನಿತೆಯರ ತಂಡವನ್ನು ಪ್ರಧಾನಿ ಮೋದಿಯವರು ಶ್ಲಾಘಿಸಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ಮೋದಿಯವರು, ಏಷ್ಯನ್ ಗೇಮ್ಸ್ ನಲ್ಲಿ ಶೂಟಿಂಗ್ ನಲ್ಲಿ ಭಾರತಕ್ಕೆ ಮತ್ತೊಂದು ಪದಕ ಬಂದಿದೆ. 10 ಮೀಟರ್ ಏರ್ ಪಿಸ್ತೂಲ್ ಮಹಿಳಾ ತಂಡ ಸ್ಪರ್ಧೆಯಲ್ಲಿ ಬೆಳ್ಳಿ ಪದಕ ಗೆದ್ದ ದಿವ್ಯಾ ತಾಡಿಗೋಳ್, ಇಶಾ ಸಿಂಗ್ ಮತ್ತು ಪಾಲಕ್ ಅವರಿಗೆ ಅಭಿನಂದನೆಗಳು.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!