Mysore
17
clear sky

Social Media

ಗುರುವಾರ, 11 ಡಿಸೆಂಬರ್ 2025
Light
Dark

ಏಷ್ಯನ್‌ ಗೇಮ್ಸ್‌: ಸಿಂಗಪುರ ವಿರುದ್ಧ ಭಾರತಕ್ಕೆ ಭರ್ಜರಿ ಗೆಲುವು

ಹಾಂಗ್‌ಝೌ : ನಾಯಕ ಹರ್ಮನ್‌ಪ್ರೀತ್‌ ಸಿಂಗ್‌ ಮತ್ತು ಮಂದೀಪ್ ಸಿಂಗ್ ಅವರ ಹ್ಯಾಟ್ರಿಕ್ ಗೋಲುಗಳ ನೆರವಿನಿಂದ ಏಷ್ಯನ್ ಗೇಮ್ಸ್ ಕ್ರೀಡಾಕೂಟದ ಸಿಂಗಪುರ ವಿರುದ್ಧದ ಹಾಕಿ ಪಂದ್ಯದಲ್ಲಿ ಭಾರತ ತಂಡ 16-1 ಗೋಲುಗಳ ಅಂತರದಲ್ಲಿ ಭರ್ಜರಿ ಜಯ ದಾಖಲಿಸಿದೆ.

ಪಂದ್ಯಾವಳಿಯಲ್ಲಿ ಭಾರತಕ್ಕೆ ಇದು ಎರಡನೇ ಸತತ ಗೆಲುವಾಗಿದೆ. ಉಜೈಕಿಸ್ತಾನ ವಿರುದ್ಧದ ಪಂದ್ಯಾವಳಿಯ ಆರಂಭಿಕ ಪಂದ್ಯದಲ್ಲಿ 16-0 ಅಂತರದ ಜಯ ಸಾಧಿಸಿದ್ದ ಭಾರತ ತಂಡ ಗೆಲುವಿನ ಓಟ ಮುಂದುವರಿಸಿದೆ.

ಹರ್ಮನ್‌ ಪ್ರೀತ್‌ (24, 39, 40, 42ನೇ ನಿಮಿಷ) ಮತ್ತು ಮಂದೀಪ್ (12, 30, 51ನೇ ನಿಮಿಷ), ಅಭಿಷೇಕ್ (51, 52ನೇ ನಿಮಿಷ), ವರುಣ್ ಕುಮಾರ್ (55, 55ನೇ ನಿಮಿಷ), ಲಲಿತ್ ಕುಮಾರ್ ಉಪಾಧ್ಯಾಯ (16ನೇ ನಿಮಿಷ), ಗುರ್ಜಂತ್ ಸಿಂಗ್ (22ನೇ ನಿಮಿಷ), ವಿವೇಕ್ ಸಾಗರ್ ಪ್ರಸಾದ್ (23ನೇ ನಿಮಿಷ), ಮನ್ ಪ್ರೀತ್ ಸಿಂಗ್ (37ನೇ ನಿಮಿಷ), ಶಂಶೇರ್ ಸಿಂಗ್ (38ನೇ ನಿಮಿಷ) ಗೋಲು ಗಳಿಸಿದರು.

ಭಾರತವು ಗುರುವಾರ ಹಾಲಿ ಚಾಂಪಿಯನ್ ಜಪಾನ್ ಅನ್ನು ಎದುರಿಸಲಿದೆ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!