Mysore
27
broken clouds

Social Media

ಭಾನುವಾರ, 28 ಡಿಸೆಂಬರ್ 2025
Light
Dark

ಏಷ್ಯನ್ ಗೇಮ್ಸ್‌: ಆರ್ಚರಿಯಲ್ಲಿ ಜ್ಯೋತಿ ಸುರೇಶ್, ಓಜಸ್‌ಗೆ ಚಿನ್ನ

ಹಾಂಗ್‌ಝೌ : ಚೀನಾದ ಹಾಂಗ್‌ಚೌದಲ್ಲಿ ನಡೆಯುತ್ತಿರುವ ಏಷ್ಯನ್ ಕ್ರೀಡಾಕೂಟದಲ್ಲಿ ಆರ್ಚರಿಯಲ್ಲಿ ಭಾರತದ ಜ್ಯೋತಿ ಸುರೇಶ್ ವೆನ್ನಾಮ್ ಅವರು ಚಿನ್ನದ ಪದಕ ಗೆದ್ದಿದ್ದಾರೆ.

ಅರ್ಚರಿ ಮಹಿಳೆಯರ ವೈಯಕ್ತಿಕ ಶಾಂಪೌಂಡ್ ವಿಭಾಗದಲ್ಲಿ ದಕ್ಷಿಣ ಕೊರಿಯಾದ ಕ್ರೀಡಾಳುವನ್ನು ಮಣಿಸಿದ ಜ್ಯೋತಿ ಅವರಿಗೆ ಚಿನ್ನದ ಪದಕ ಲಭಿಸಿತು.

ಈಗಾಗಲೇ ಏಷ್ಯನ್ ಕ್ರೀಡಾಕೂಟದ ಆರ್ಚರಿ ಇತರೆ ವಿಭಾಗಗಳಲ್ಲಿ ಜ್ಯೋತಿ ಅವರಿಗೆ ಎರಡು ಚಿನ್ನದ ಪದಕಗಳು ಲಭಿಸಿವೆ. ಇದರೊಂದಿಗೆ ಅವರು ಮೂರು ಚಿನ್ನದ ಪದಕಗಳನ್ನು ತಮ್ಮ ಮುಡಿಗೇರಿಸಿಕೊಂಡರು.

ಇನ್ನು ಅರ್ಚರಿ ಪುರುಷರ ವೈಯಕ್ತಿಕ ಕಾಂಪೌಂಡ್ ವಿಭಾಗದಲ್ಲಿ 21 ವರ್ಷದ ಓಜಸ್ ದೇವತಾಳ ಅವರು ಐತಿಹಾಸಿಕವಾಗಿ ಚಿನ್ನದ ಪದಕ ಗೆದ್ದಿದ್ದಾರೆ.

ಇದರೊಂದಿಗೆ ಭಾರತ ಈ ಸಾರಿಯ ಏಷ್ಯನ್ ಕ್ರೀಡಾಕೂಟದಲ್ಲಿ ಭಾರತ 100 ಪದಕಗಳನ್ನು ಗೆದ್ದಂತಾಗಿದೆ. 25 ಚಿನ್ನ, 35 ಬೆಳ್ಳಿ ಹಾಗೂ 40 ಕಂಚಿನ ಪದಕಗಳು ಭಾರತಕ್ಕೆ ಸಿಕ್ಕಿವೆ.

ಏಷ್ಯನ್ ಕ್ರೀಡಾಕೂಟದಲ್ಲಿ ಭಾರತ ಈ ಸಾರಿ ಅತಿಹೆಚ್ಚು ಪದಕಗಳನ್ನು ಗೆಲ್ಲುವ ಮೂಲಕ ಐತಿಹಾಸಿಕ ಸಾಧನೆ ಮಾಡಿದೆ. ಭಾರತ ಮಹಿಳಾ ಕಬಡ್ಡಿ ತಂಡ ಗೆದ್ದ ಚಿನ್ನದ ಪದಕ 100ನೇಯದ್ದು.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!