ಹ್ಯಾಂಗ್‌ಝೌ : ಏಷ್ಯನ್ ಗೇಮ್ಸ್ ಕ್ರೀಡಾಕೂಟದ ಆರ್ಚರಿ ಕಾಂಪೌಂಡ್ ತಂಡ ವಿಭಾಗದ ಫೈನಲ್‌ನಲ್ಲಿ ಚೈನೀಸ್ ತೈಪೇಯಿ ತಂಡವನ್ನು ಮಣಿಸಿ ಭಾರತ ಚಿನ್ನದ ಪದಕ ಗೆದ್ದಿದೆ.
ಭಾರತದ ಅಗ್ರಮಾನ್ಯ ಆರ್ಚರಿ ಸ್ಪರ್ಧಿಗಳಾದ ಜ್ಯೋತಿ ಸುರೇಖಾ ವೆನ್ನಂ, ಅದಿತಿ ಸ್ವಾಮಿ ಹಾಗೂ ಪರ್ನೀತ್ ಕೌರ್ 230-229 ಪಾಯಿಂಟ್‌ಗಳ ಅಂತರದಲ್ಲಿ ಚೈನೀಸ್ ತೈಪೇಯಿ ಜೋಡಿಯನ್ನು ಮಣಿಸಿತು.
ಈ ಪದಕದೊಂದಿಗೆ ಆರ್ಚಿರಿಯಲ್ಲಿ ಕನಿಷ್ಠ 5 ಪಡಕಗಳನ್ನು ಖಾತ್ರಿಪಡಿಸಿದೆ. ಬುಧವಾರ ನಡೆದ ಕಾಂಪಾಂಡ್ ಮಿಕ್ಸೆಡ್ ತಂಡ ವಿಭಾಗದಲ್ಲಿಯೂ ಭಾರತಕ್ಕೆ ಚಿನ್ನದ ಪದಕ ದೊರೆತಿದೆ.





