Mysore
23
haze

Social Media

ಸೋಮವಾರ, 22 ಡಿಸೆಂಬರ್ 2025
Light
Dark

ಏಷ್ಯನ್‌ ಗೇಮ್ಸ್‌: ಸ್ಕ್ಯಾಷ್‌ನಲ್ಲಿ ಭಾರತಕ್ಕೆ ಕಂಚಿನ ಪದಕ-ಮತ್ತೊಂದು ತಂಡ ಫೈನಲ್‌ಗೆ

ಹಾಂಗ್‌ಝೌ : ಭಾರತದ ಅನಾಹತ್ ಸಿಂಗ್ ಹಾಗೂ ಅಭಯ್ ಸಿಂಗ್ ಜೋಡಿ ಏಷ್ಯನ್ ಕ್ರೀಡಾಕೂಟದ ಸ್ಮಾಷ್ ಸ್ಪರ್ಧೆಯ ಮಿಕ್ಸೆಡ್ ಡಬಲ್ಸ್ ವಿಭಾಗದ ಸೆಮಿಫೈನಲ್ ಪಂದ್ಯದಲ್ಲಿ ಮುಗ್ಗರಿಸಿತು. ಆದಾಗ್ಯೂ ಕಂಚಿನ ಪದಕ ಗೆಲ್ಲುವಲ್ಲಿ ಯಶಸ್ವಿಯಾಯಿತು.

ಮಲೇಷ್ಯಾದ ಐಫಾ ಬಿಂಟಿ ಅಜಂ ಮತ್ತು ಮೊಹಮ್ಮದ್ ಸೈಫಿಕ್ ಕಮಾಲ್ ಅವರಿಂದ ಕಠಿಣ ಪೈಪೋಟಿ ಎದುರಿಸಿದ ಭಾರತದ ಜೋಡಿ 39 ನಿಮಿಷ ನಡೆದ ಹಣಾಹಣಿಯಲ್ಲಿ 11-8, 2-11, 9-11 ಅಂತರದಿಂದ ಸೋಲೊಪ್ಪಿಕೊಂಡಿತು.

ಇದೇ ದಿನ ನಡೆದ ಮತ್ತೊಂದು ಸೆಮಿಫೈನಲ್ ಪಂದ್ಯದಲ್ಲಿ ಭಾರತದವರೇ ಆದ ದೀಪಿಕಾ ಪಲ್ಲಿಕಲ್ ಮತ್ತು ಹರಿಂದರ್ ಪಾಲ್ ಸಿಂಗ್ ಜೋಡಿ ಹಾಂಗ್ ಕಾಂಗ್ ಆಟಗಾರರ ಎದುರು ಜಯ ಸಾಧಿಸಿದೆ. ಫೈನಲ್‌ಗೆ ಲಗ್ಗೆ ಇಟ್ಟಿರುವ ಈ ತಂಡ ಮತ್ತೊಂದು ಪದಕವನ್ನು ಖಾತ್ರಿಪಡಿಸಿದೆ.

ಅನಾಹತ್‌ ಹಾಗೂ ಅಭಯ್ ಗಳಿಸಿದ ಪದಕವು, ಈ ಬಾರಿಯ ಕ್ರೀಡಾಕೂಟದಲ್ಲಿ ಭಾರತಕ್ಕೆ ದೊರೆತ 70ನೇ ಪದಕ. 2018ರಲ್ಲಿ ಇಂಡೊನೇಷ್ಯಾದಲ್ಲಿ ನಡೆದಿದ್ದ ಕೂಟದಲ್ಲಿ 70 ಪದಕ ಗಳಿಸಿದ್ದು ಭಾರತದ ಶ್ರೇಷ್ಠ ಸಾಧನೆಯಾಗಿತ್ತು.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!