ಹಾಂಗ್‌ಝೌ : ಗ್ರೀಕೊ ರೋಮನ್ ಕುಸ್ತಿ ಸ್ಪರ್ಧೆಯಲ್ಲಿ ಭಾರತಕ್ಕೆ 13 ವರ್ಷಗಳ ನಂತರ ಪದಕ ದೊರಕಿದೆ.
ಏಷ್ಯನ್ ಗೇಮ್ಸ್ 2023ರ ಕ್ರೀಡಾಕೂಟದಲ್ಲಿ ಪುರುಷರ 87 ಕೆ.ಜಿ ಗ್ರೀಕೊ ರೋಮನ್ ಕುಸ್ತಿ ವಿಭಾಗದಲ್ಲಿ ಭಾರತದ ಸುನಿಲ್ ಕುಮಾರ್ ಕಂಚಿನ ಪದಕ ಜಯಿಸಿದ್ದಾರೆ.
ಚಾಣಕ್ಯತನ ಮೆರೆದ ಭಾರತೀಯ ಸ್ಪರ್ಧಿ ಕಿರ್ಗಿಸ್ತಾನದ ಅಟಾಬೆಕ್ ಅಜಿಸ್ಟೆಕೋವ್ ವಿರುದ್ಧ ಗೆಲುವು ಸಾಧಿಸಿದರು.
ಈ ಹಿಂದೆ 2010ರ ಏಷ್ಯನ್ ಗೇಮ್ಸ್‌ನಲ್ಲಿ ಗ್ರೀಕೊ ರೋಮನ್ ವಿಭಾಗದಲ್ಲಿ ಭಾರತದ ರವಿಂದರ್ ಸಿಂಗ್ (60 ಕೆ.ಜಿ) ಮತ್ತು ಸುನಿಲ್ ಕುಮಾರ್ ರಾಣಾ (66 ಕೆ.ಜಿ) ಕಂಚಿನ ಪದಕ ಜಯಿಸಿದ್ದರು.
ಸಾಬ್ಬಿಗೆ ಬೆಳ್ಳಿ
ಪುರುಷರ 5000 ಮೀ ಓಟದಲ್ಲಿ ಆನಿನಾಶ್ ಸಾಚ್ಚೆ ಬೆಳ್ಳಿ ಪದಕ ಗೆದ್ದುಕೊಂಡಿದ್ದಾರೆ. ಮತ್ತೊಂದೆಡೆ 800 ಮೀ ಮಹಿಳೆಯರ ಓಟದಲ್ಲಿ ಹರ್ಮಿಲನ್ ಬೆಸ್ಟ್ ಬೆಳ್ಳಿ ಪದಕ ಜಯಿಸಿದ್ದಾರೆ.
ಭಾರತ ಐತಿಹಾಸಿಕ ಸಾಧನೆ :
ಏಷ್ಯನ್ ಕ್ರೀಡಾಕೂಟದಲ್ಲಿ ಭಾರತದ ಸ್ಪರ್ಧಿಗಳು ಬುಧವಾರ ಮೂರು ಚಿನ್ನ ಸೇರಿದಂತೆ ಒಟ್ಟು 12 ಪದಕಗಳನ್ನು ಗೆದ್ದಿದ್ದಾರೆ. ಈ ಮೂಲಕ ಭಾರತವು 81 ಪದಕಗಳೊಂದಿಗೆ ಪದಕ ಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿ ಮುಂದುವರಿದಿದೆ. ಇದು ಏಷ್ಯನ್ ಕ್ರೀಡಾಕೂಟದ ಇತಿಹಾಸದಲ್ಲೇ ಭಾರತದ ಸರ್ವಶ್ರೇಷ್ಠ ಸಾಧನೆಯಾಗಿದೆ.





