ಹಾಂಗ್‌ಝೌ : ಏಷ್ಯನ್ ಗೇಮ್ಸ್ ಕೀಡಾಕೂಟದ ಪುರುಷರ 10 ಮೀ ಏರ್ ರೈಫಲ್ ಸಿಂಗಲ್ಸ್ ಸ್ಪರ್ಧೆಯಲ್ಲಿ ಭಾರತದ ಐಶ್ವರಿ ಪ್ರತಾಪ್ ಸಿಂಗ್ ತೋಮರ್ ಕಂಚಿನ ಪದಕ ಜಯಿಸಿದ್ದಾರೆ.
228.8 ಅಂಕದೊಂದಿಗೆ ಮೂರನೇ ಸ್ಪರ್ಧಿಯಾಗಿ ಮುಗಿಸಿದರು. 253.3 ಅಂಕ ಗಳಿಸಿದ ಚೀನಾದ ಲಿಹಾವೋ ಶೆಂಗ್ ಚಿನ್ನ ಗೆದ್ದರು. 251.3 ಅಂಕ ಗಳಿಸಿದ ದ.ಕೊರಿಯಾದ ಹಜುನ್ ಪಾರ್ಕ್ ಬೆಳ್ಳಿ ಪದಕ ತನ್ನದಾಗಿಸಿಕೊಂಡರು.
ಈ ಕಂಚಿನ ಪದಕದೊಂದಿಗೆ ಹಾಂಗ್‌ಝೌನಲ್ಲಿ ಭಾರತದ ಶೂಟರ್‌ಗಳು ಗಳಿಸಿದ ನಾಲ್ಕನೇ ಪದಕವಾಗಿದೆ.





