ಹಾಂಗ್‌ಝೌ : ಹಾಂಗ್‌ಝೌ ಏಶ್ಯನ್ ಗೇಮ್ಸ್‌ನಲ್ಲಿ ಭಾನುವಾರ ಭಾರತದ ಕ್ರೀಡಾಪಟು ಅವಿನಾಶ್ ಸಾಬ್ಳೆ ಪುರುಷರ 3,000 ಮೀ. ಸ್ಟೀಪಲ್ ಚೇಸ್‌ನಲ್ಲಿ ಚಿನ್ನದ ಪದಕ ಗೆದ್ದುಕೊಂಡಿದ್ದಾರೆ.
ಈ ಸ್ಪರ್ಧೆಯಲ್ಲಿ ಚಿನ್ನದ ಪದಕ ಗೆದ್ದ ಮೊದಲ ಭಾರತೀಯ ಮತ್ತು ಸ್ಟೀಪಲ್ ಚೇಸ್ ಸ್ಪರ್ಧೆಯಲ್ಲಿ ಭಾರತಕ್ಕೆ ಸಿಕ್ಕ ಮೊದಲ ಪದಕ ಎಂಬ ಖ್ಯಾತಿಗೂ ಅವಿನಾಶ್ ಸೇಬಲ್ (29) ಪಾತ್ರರಾಗಿದ್ದಾರೆ.
8:19:50 ಸೆಕೆಂಡುಗಳಲ್ಲಿ 3,000 ಮೀಟರ್ ಗುರಿ ತಲುಪುವ ಮೂಲಕ ಅವಿನಾಶ್ ಭಾರತಕ್ಕೆ ಚಿನ್ನ ತಂದುಕೊಡುವಲ್ಲಿ ಯಶಸ್ವಿಯಾಗಿದ್ದಾರೆ. ಈ ಹಿಂದೆ 2018ರ ಜಕಾರ್ತಾ ಗೇಮ್ಸ್‌ನಲ್ಲಿ ಇರಾನ್‌ನ ಹುಸೇನ್ ಕೀಹಾನಿ 8:22.79 ಸೆಕೆಂಡುಗಳಲ್ಲಿ ಗುರಿ ತಲುಪಿದ್ದು, ಏಷ್ಯನ್ ಗೇಮ್ಸ್‌ನಲ್ಲಿ ವಿಶ್ವದಾಖಲೆಯಾಗಿತ್ತು. ಇದೀಗ ಹುಸೇನ್ ಹೆಸರಿನಲ್ಲಿದ್ದ ದಾಖಲೆಯನ್ನು ಅವಿನಾಶ್ ಮುರಿದು ಸಾಧನೆ ಮಾಡಿದ್ದಾರೆ.
8ನೇ ದಿನವಾದ ಭಾನುವಾರ ಭಾರತ ಪದಕಗಳ ಬೇಟೆ ಮುಂದುವರಿಸಿದೆ. ಈವರೆಗೆ ಭಾರತಕ್ಕೆ 13 ಚಿನ್ನ, 16 ಬೆಳ್ಳಿ ಮತ್ತು 16 ಕಂಚು ಸೇರಿ ಒಟ್ಟು 45 ಪದಕಗಳು ಸಂದಿವೆ.
https://x.com/IndianTechGuide/status/1708444757440295145?s=20