Mysore
17
broken clouds

Social Media

ಬುಧವಾರ, 31 ಡಿಸೆಂಬರ್ 2025
Light
Dark

ಏಷ್ಯನ್ ಬಾಕ್ಸಿಂಗ್ ಚಾಂಪಿಯನ್‌ಶಿಪ್‌ : ಫೈನಲ್ ಪ್ರವೇಶಿಸಿದ ಶಿವ ಥಾಪಾ

ಜೋರ್ಡಾನ್​: ಆರು ಬಾರಿ ಏಷ್ಯನ್ ಪದಕವಿಜೇತ ಶಿವ ಥಾಪಾ (63.5 ಕೆಜಿ ವಿಭಾಗ) ಗುರುವಾರ ಜೋರ್ಡಾನ್‌ನ ಅಮ್ಮನ್‌ನಲ್ಲಿ ನಡೆದ 2022 ರ (ASBC) ಏಷ್ಯನ್ ಎಲೈಟ್ ಬಾಕ್ಸಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಫೈನಲ್‌ಗೆ ಪ್ರವೇಶವನು ಪಡೆದಿದ್ದಾರೆ.

ಶಿವ ಅವರು ಸೆಮಿಫೈನಲ್‌ನಲ್ಲಿ 2019 ರ ಏಷ್ಯನ್ ಚಾಂಪಿಯನ್ ತಜಕಿಸ್ತಾನದ ಬಖೋದುರ್ ಉಸ್ಮಾನೋವ್ ಅವರನ್ನು ಎದುರಿಸಿದ್ದರು. ಎರಡೂ ಬಾಕ್ಸರ್‌ಗಳು ಆರಂಭದಿಂದಲೂ ತಮ್ಮ ಅಪಾರ ಅನುಭವ ಮತ್ತು ಯುದ್ಧತಂತ್ರದ ಕುಶಾಗ್ರಮತಿಯನ್ನು ಪ್ರದರ್ಶಿಸಿದರು. 4:1 ವಿಭಜನೆಯ ತೀರ್ಪಿನಲ್ಲಿ ತನ್ನ ಕಿರಿಯ ಎದುರಾಳಿಯನ್ನು ಸೋಲಿಸಿ ಮೇಲುಗೈ ಸಾಧಿಸಿದರು.2021ರ ಏಷ್ಯನ್ ಚಾಂಪಿಯನ್‌ಶಿಪ್‌ನ ಸೆಮಿಫೈನಲ್‌ನಲ್ಲಿ ಶಿವ ಬಖೋದೂರ್ ಅವರನ್ನು ಸೋಲಿಸಿದ್ದರು. ಬಾಕ್ಸಿಂಗ್ ಫೆಡರೇಶನ್ ಆಫ್ ಇಂಡಿಯಾ (ಬಿಎಫ್‌ಐ) ಪತ್ರಿಕಾ ಪ್ರಕಟಣೆಯ ಪ್ರಕಾರ, ಅವರು ಶನಿವಾರದ ಫೈನಲ್‌ನಲ್ಲಿ ಉಜ್ಬೇಕಿಸ್ತಾನ್‌ನ ಅಬ್ದುಲ್ಲಾವ್ ರುಸ್ಲಾನ್ ಅವರನ್ನು ಎದುರಿಸಲಿದ್ದಾರೆ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!