ಪ್ಯಾರಿಸ್: 2024ರ ಪ್ಯಾರಿಸ್ ಒಲಂಪಿಕ್ಸ್ ಕ್ರೀಡಾಕೂಟದ ಮಹಿಳೆಯ ಬ್ಯಾಡ್ಮಿಂಟನ್ ಡಬಲ್ಸ್‌ನಲ್ಲಿ ಭಾರತದ ಅಶ್ವಿನಿ ಪೊನ್ನಪ್ಪ ಹಾಗೂ ತನಿಷಾ ಕ್ರಾಸ್ತೊ ಜೋಡಿ ಮೊದಲ ಪಂದ್ಯದಲ್ಲೇ ಮುಗ್ಗರಿಸಿದೆ.
ಶನಿವಾರ ನಡೆದ ಮಹಿಳಾ ಡಬಲ್ಸ್ ಬ್ಯಾಡ್ಮಿಂಟನ್‌ನಲ್ಲಿ ದಕ್ಷಿಣ ಕೊರಿಯಾದ ಕಾಗ್ ಹೀ ಯಾಂಗ್ ಹಾಗೂ ಕಿಮ್ ಸೊ ಯೊಯಾಂಗ್ ಜೋಡಿ ವಿರುದ್ಧ 18-21, 10-21 ಅಂತರದಿಂದ ಭಾರತದ ಜೋಡಿ ಸೋಲು ಕಂಡಿತು.
44 ನಿಮಿಷಗಳ ನೇರ ಹಣಾಹಣೆಯಲ್ಲಿ ತೀವ್ರ ಪೈಪೋಟಿಯಲ್ಲಿ ಭಾರತದ ವನಿತೆಯರು ನಿರಾಸದಾಯಕ ಸೋಲು ಕಂಡರು. ಮೊದಲ ಸೆಟ್‌ನಲ್ಲಿ ತೀವ್ರ ಪೈಪೋಟಿ ನೀಡಿದರು. ಆದರೆ, ಎರಡನೇ ಸುತ್ತಿನಲ್ಲಿ ನಿರೀಕ್ಷಿತಾ ಆಟ ಆಡುವಲ್ಲಿ ವಿಫಲರಾಗಿ ಮೊದಲ ಪಂದ್ಯದಲ್ಲಿ ಸೋಲನುಭವಿಸಿದರು.
ಮುಂದಿನ ಪಂದ್ಯದಲ್ಲಿ ಜಪಾನ್‌ನ ನಮಿ ಮತ್ಸುಯಾಮ ಮತ್ತು ಚಿಹರು ಶಿದಾ ಅವರ ವಿರುದ್ಧ ಸೋಮವಾರ ಸೆಣಸಲಿದ್ದಾರೆ.





