Mysore
25
moderate rain

Social Media

ಶನಿವಾರ, 19 ಅಕ್ಟೋಬರ್ 2024
Light
Dark

ಆರ್ಶ್‌ದೀಪ್‌, ಆವೇಶ್‌ ದಾಳಿಗೆ ತತ್ತರಿಸಿದ ಹರಿಣ ಪಡೆ: ಭಾರತಕ್ಕೆ 117 ಟಾರ್ಗೆಟ್‌

ಜೋಹಾನ್ಸ್‌ಬರ್ಗ್: ಭಾರತ ತಂಡದ ಅಮೋಘ ಬೌಲಿಂಗ್‌ ಮುಂದೆ ಮಂಕಾದ ಅತಿಥೇಯ ಸೌತ್‌ ಆಫ್ರಿಕಾ ತಂಡ 116 ರನ್‌ಗಳಿಸಿ ಆಲೌಟ್‌ ಆಗಿದೆ.

ಇಲ್ಲಿನ ನ್ಯೂ ವಾಂಡರರ್ಸ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಟಾಸ್‌ ಗೆದ್ದು ಬ್ಯಾಟಿಂಗ್‌ ಆಯ್ಕೆ ಮಾಡಿಕೊಂಡ ದಕ್ಷಿಣ ಆಫ್ರಿಕಾ ತಂಡ ಆರಂಭದಿಂದಲೇ ಕುಸಿತ ಕಂಡಿತು. ಟೀಂ ಇಂಡಿಯಾದ ಚುರುಕನ ಬೌಲಿಂಗ್‌ ಮುಂದೆ ಒದ್ದಾಡಿದ ದಕ್ಷಿಣ ಆಫ್ರಿಕಾ ತಂಡ ಎರಡನೇ ಓವರ್‌ನಲ್ಲಿಯೇ ವಿಕೆಟ್‌ ಕಳೆದುಕೊಂಡಿತು. ಆರಂಭದಿಂದಲೇ ಮಾರಕ ಬೌಲಿಂಗ್‌ ದಾಳಿ ನಡೆಸಿದ ಆರ್ಶ್‌ದೀಪ್‌ ಸಿಂಗ್‌ ತಮ್ಮ ಮೊಲದನೇ ಓವರ್‌ನಲ್ಲಿಯೇ ದ. ಆಫ್ರಿಕಾದ ಆರಂಭಿಕ ದಾಂಡಿಗ ರೀಝಾ ಹೆಂಡ್ರಿಕ್ಸ್‌ ಶೂನ್ಯಕ್ಕೆ ಔಟ್‌ ಮಾಡಿದರು.

ನಂತರ ಬಂದ ವ್ಯಾನ್‌ ಡುಸೆನ್‌ ಕೂಡಾ ಸೊನ್ನೆ ಸುತ್ತಿದರು. ಟೋನಿ ಡಿ ಜೋರ್ಜಿ 28 ರನ್‌ ಗಳಿಸಿದರು. ನಾಯಕ ಮಾರ್ಕ್ರಮ್‌ 12 ರನ್‌ ಗಳಿಸಿ ನಿರ್ಗಮಿಸಿದರು. ಭರವಸೆಯ ಆಟಗಾರ ಡೆವಿಡ್‌ ಮಿಲ್ಲರ್‌ ಎರಡು ರನ್‌ ಗಳಿಸಿ ಆವೇಶ್‌ ಖಾನ್‌ಗೆ ವಿಕೆಟ್‌ ಒಪ್ಪಿಸಿದರು. ಆಂಡಿಲೆ ಫೆಲುಕ್ವಾಯೊ 33 ರನ್‌ ಗಳಿಸಿದ್ದೇ ತಂಡದ ರ ವಯಕ್ತಿಕ ಗರಿಷ್ಠ ರನ್‌ ಆಗಿತ್ತು. ಅಂತಿಮವಾಗಿ ದಕ್ಷಿಣ ಆಫ್ರಿಕಾ ತಂಡ 27.3 ಓವರ್‌ಗಳಲ್ಲಿ ತನ್ನೆಲ್ಲಾ ವಿಕೆಟ್‌ ಕಳೆದುಕೊಂಡು 116 ರನ್‌ಗಳ ಸಾಧಾರಣ ಗುರಿ ನೀಡಿತು.

ಟೀಂ ಇಂಡಿಯಾ ಪರ ಅಮೋಘ ಬೌಲಿಂಗ್‌ ದಾಳಿ ಮಾಡಿದ ಆರ್ಶ್‌ದೀಪ್‌ ಸಿಂಗ್‌ 10 ಓವರ್‌ಗಳಲ್ಲಿ 37 ರನ್‌ ನೀಡಿ 5 ವಿಕೆಟ್‌ ಪಡೆದರು. ಇದು ಅವರ ಏಕದಿನ ಕ್ರಿಕೆಟ್‌ನ ಮೊಲದ 5 ವಿಕೆಟ್‌ ಗೊಂಚಲಾಗಿದೆ. ಇವರಿಗೆ ಸಾಥ್‌ ನೀಡಿದ ಆವೇಶ್‌ ಖಾನ್‌ 27/4 ಮತ್ತು ಕಲ್ದೀಪ್‌ ಯಾದವ್‌ 3/1 ವಿಕೆಟ್‌ ಪಡೆದರು.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ